Independence day | ರೆಕಾರ್ಡ್ ಬರೆದ ಭಾರತದ ರಾಷ್ಟ್ರಧ್ವಜ
ಲಿಮ್ಕಾ ದಾಖಲೆ ಬರೆದ ರಾಷ್ಟ್ರಧ್ವಜ
ಕೋಲಾರದಲ್ಲಿ ಹಾರಿಸಲಾದ ರಾಷ್ಟ್ರಧ್ವಜ
204 ಅಡಿ ಉದ್ದ, 630 ಅಡಿ ಅಗಲದ ಧ್ವಜ
13 ಸಾವಿರ ಮೀ. ಬಟ್ಟೆಯಲ್ಲಿ ಮಾಡಲಾದ ಧ್ವಜ
ಚಿನ್ನದನಾಡು ಕೋಲಾರದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಇದೀಗ ದೇಶದ ಗಮನ ಸೆಳೆದಿದೆ.
ಸ್ವಾತಂತ್ರ್ಯ ದಿನೋತ್ಸವ ಪ್ರಯುಕ್ತ ಕೋಲಾರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸಂಸದ ಎಸ್.ಮುನಿಸ್ವಾಮಿ ನೇತೃತ್ವದಲ್ಲಿ ಹಾರಿಸಲಾದ ರಾಷ್ಟ್ರಧ್ವಜ ಲಿಮ್ಕಾ ದಾಖಲೆ ಬರೆದಿದೆ.
3 ಸಾವಿರ ಮೀಟರ್ ಬಟ್ಟೆಯಲ್ಲಿ ತಯಾರಿಸಲಾದ 204 ಅಡಿ ಉದ್ದ, 630 ಅಡಿ ಅಗಲ ಇರುವ ರಾಷ್ಟ್ರಧ್ವಜದ ಮೇಲೆ ಸೇನಾ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿಯನ್ನೂ ಮಾಡಲಾಯಿತು.

ಸುಮಾರು 2,500 ಸಾವಿರಕ್ಕೂ ಹೆಚ್ಚು ಜನ ಧ್ವಜ ಹಿಡಿದುಕೊಂಡಿದ್ದ ದೃಶ್ಯ ಬೆರಗುಗೊಳಿಸುವಂತಿತ್ತು. ಈ ವಿಡಿಯೋ ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ಇತ್ತ ಕೈಯಿಂದಲೇ ನಿರ್ಮಾಣಗೊಂಡ ರಾಷ್ಟ್ರಧ್ವಜ ಲಿಮ್ಕಾ ಬುಕ್ ಆಫ್ ರೆಕಾರ್ಡ್ ಪುಟ ಸೇರಿದೆ.








