Independence day | ಗೌರವ ವಂದನೆ ಸ್ವೀಕರಿಸಲು ಅಶೋಕ್ ಗೆ ಏನು ಕಷ್ಟ ?
ಮಂಡ್ಯ : ಸಚಿವರಿಗಾಗಿ ಮಂಡ್ಯ ಜಿಲ್ಲಾಡಳಿತ ಮಕ್ಕಳ ಆಸೆಗೆ ತಣ್ಣೀರೆರಚಿದ್ದಾರೆ.
75ನೇ ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಈ ಬಾರಿ ಅದ್ದೂರಿ ಸ್ವತಂತ್ರ್ಯೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು.
ಆದ್ರೆ ಸಚಿವ ಆರ್.ಅಶೋಕ್ ಕೇವಲ 40 ನಿಮಿಷಗಳ ಕಾರ್ಯಕ್ರಮ ನೀಡುವಂತೆ ಸೂಚನೆ ನೀಡಿದರು.
ಇದರಿಂದ ರಾತ್ರೋರಾತ್ರಿ ಕಾರ್ಯಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ತಂದಿದ್ದಾರೆ. ಅದರಂತೆ 40 ಪಥಸಂಚಲನ ತಂಡಗಳಲ್ಲಿ 20 ತಂಡಗಳ ಪಥ ಸಂಚಲನ ರದ್ದುಪಡಿಸಲಾಗಿದೆ.

ಇದರಿಂದ ತಿಂಗಳಿಂದ ಅಭ್ಯಾಸ ಮಾಡಿದ್ದ ಮಕ್ಕಳಿಗೆ ನಿರಾಸೆಯಾಗಿದೆ. ಹೀಗಾಗಿ ಅಶೋಕ್ ಹಾಗೂ ಜಿಲ್ಲಾಡಳಿತದ ವಿರುದ್ಧ ಮಕ್ಕಳು, ಪೋಷಕರ ಆಕ್ರೋಶ ಹೊರಹಾಕಿದ್ದಾರೆ.
ನಾವು ಕಳೆದ ಒಂದು ತಿಂಗಳಿನಿಂತ ಶಾಲಾ ತರಗತಿಗಳನ್ನು ಬಿಟ್ಟು ಅಭ್ಯಾಸ ಮಾಡಿದ್ದೇವೆ.
ಆದ್ರೆ ಈಗ ಏಕಾಏಕಿ ಕಾರ್ಯಕ್ರಮವನ್ನು ಬದಲಿಸಿರೋದು ತಪ್ಪು, ಪಥ ಸಂಚಲನ ಮಾಡಲು ನಮಗೆ ಅವಕಾಶ ನೀಡಿ ಎಂದು ಮಂಡ್ಯ ಎಸ್ ಪಿ ಗೆ ಮಕ್ಕಳು ಮನವಿ ಮಾಡಿಕೊಂಡಿದ್ದಾರೆ.
ಆದ್ರೆ ಇದಕ್ಕೆ ಅವಕಾಶ ನೀಡದ ಅಧಿಕಾರಿಗಳು ನೀವು ಸೈಡ್ ನಲ್ಲಿ ಇರಿ.. ಆ ಮೇಲೆ ಕರೆಯುತ್ತೇವೆ ಅಂತಾ ಮಕ್ಕಳ ಮೇಲೆ ರೇಗಾಡಿದ್ದಾರೆ.