ಭಾರತದ ಬ್ಯಾಡ್ಮಿಂಟನ್ ದಂತಕಥೆ ನಂದು ನಾಟೇಕರ್ ನಿಧನ
ನವದೆಹಲಿ : 1956ರ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಗೆದ್ದು ಕ್ರೀಡಾಲೋಕದ ಗಮನಸೆಳೆದಿದ್ದ ಭಾರತದ ಬ್ಯಾಡ್ಮಿಂಟನ್ ಕ್ಷೇತ್ರದ ದಂತಕಥೆ ನಂದು ನಾಟೇಕರ್ ವಿಧಿವಶರಾಗಿದ್ದಾರೆ.
ಬ್ಯಾಂಡ್ಮಿಟನ್ ಕ್ರೀಡಾ ವಿಭಾಗದಲ್ಲಿ ತಮ್ಮದೇ ಯಾದ ಛಾಪು ಮೂಡಿಸಿ ಕ್ರೀಡಾಭಿಮಾನಿಗಳ ಹೃದಯ ಗೆದ್ದಿದ್ದ ನಾಟೇಕರ್ ಅವರು ವಿದೇಶದ ಟೂರ್ನ್ ಮೆಂಟ್ ಅವಕಾಶ ಪಡೆದ ಮೊದಲ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆ ಭಾಜನರಾಗಿದ್ದರು.
ಇವರು ಆಲ್ ಇಂಗ್ಲೆಂಡ್ ನ ಕ್ವಾರ್ಟರ್ ಫೈನಲ್ ತಲುಪಿದ್ದ ಪ್ರಥಮ ಭಾರತೀಯ ಬ್ಯಾಡ್ಮಿಂಟನ್ ಆಟಗಾರರಾಗಿದ್ದು, ಐದು ರಾಷ್ಟ್ರೀಯ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು.
ನಾಟೇಕರ್ ಅವರ ಸಾಧನೆಯನ್ನು ಗುರುತಿಸಿ 1961ರಲ್ಲಿ ನಾಟೇಕರ್ ಅವರಿಗೆ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.