ತಕ್ಷಣವೇ ಜಾರಿ ಬರುವಂತೆ ಗೋಧಿ ರಫ್ತು ನಿಷೇಧಿಸಿದ ಭಾರತ
1 min read
ತಕ್ಷಣವೇ ಜಾರಿ ಬರುವಂತೆ ಗೋಧಿ ರಫ್ತು ನಿಷೇಧಿಸಿದ ಭಾರತ
ತಕ್ಷಣವೇ ಜಾರಿಗೆ ಬರುವಂತೆ ಕೇಂದ್ರ ಸರ್ಕಾರ ಗೋಧಿ ರಫ್ತು ನಿಷೇಧಿಸಿದೆ. ಈ ಸಂಬಂಧ ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ ನಿನ್ನೆ ಅಧಿಸೂಚನೆ ಹೊರಡಿಸಿದೆ.
ದೇಶದ ಒಟ್ಟಾರೆ ಆಹಾರ ಭದ್ರತೆಯನ್ನು ನಿರ್ವಹಿಸಲು ಮತ್ತು ನೆರೆಯ ದೇಶಗಳು ಮತ್ತು ಇತರ ದುರ್ಬಲ ರಾಷ್ಟ್ರಗಳ ಅಗತ್ಯಗಳನ್ನು ಬೆಂಬಲಿಸುವ ಸಲುವಾಗಿ ಗೋಧಿ ರಫ್ತು ನೀತಿಯಲ್ಲಿ ತಿದ್ದುಪಡಿ ಮಾಡಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಇತರ ದೇಶಗಳಿಗೆ ಅವರ ಆಹಾರ ಭದ್ರತೆ ಅಗತ್ಯಗಳನ್ನು ಪೂರೈಸಲು ಮತ್ತು ಅವರ ಸರ್ಕಾರದ ಕೋರಿಕೆಯ ಆಧಾರದ ಮೇಲೆ ಸರ್ಕಾರವು ನೀಡುವ ಅನುಮತಿಯ ಆಧಾರದ ಮೇಲೆ ರಫ್ತು ಮಾಡಲು ಸಹ ಅನುಮತಿಸಲಾಗುವುದು ಎಂದು ಹೇಳಲಾಗಿದೆ.
ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯವು, ಹಲವಾರು ಅಂಶಗಳಿಂದ ಗೋಧಿಯ ಜಾಗತಿಕ ಬೆಲೆಯಲ್ಲಿ ಹಠಾತ್ ಏರಿಕೆಯಾಗಿದೆ ಮತ್ತು ಇದರ ಪರಿಣಾಮವಾಗಿ ಭಾರತ, ನೆರೆಯ ದೇಶಗಳು ಮತ್ತು ಇತರ ದುರ್ಬಲ ರಾಷ್ಟ್ರಗಳ ಆಹಾರ ಭದ್ರತೆ ಅಪಾಯದಲ್ಲಿದೆ ಎಂದು ಹೇಳಿದರು. ಆಹಾರ ಭದ್ರತೆ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.