ಹುಲುನ್ಬುಯರ್: ಏಷನ್ಯ ಚಾಂಪಿಯನ್ ಟ್ರೋಫಿಯಲ್ಲಿ(Asian Champions Trophy) ಭಾರತ ಹಾಕಿ ತಂಡವು ಅತಿಥೇಯ ಚೀನಾವನ್ನು (China) ಸೋಲಿಸುವ ಮೂಲಕ ಐದನೇ ಬಾರಿ ಚಾಂಪಿಯನ್ ಆಗಿದೆ.
ಫೈನಲ್ ಪಂದ್ಯದಲ್ಲಿ ಭಾರತ ತಂಡವು ಚೀನಾವನ್ನು 1-0 ಅಂತರದಿಂದ ಗೆಲ್ಲುವುದರ ಮೂಲಕ ಐದನೇ ಬಾರಿ ಹಾಕಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಟೂರ್ನಿಯಲ್ಲಿ ಯಾವುದೇ ಸೋಲು ಕಾಣದೆ ಅಜೇಯ ಗೆಲುವಿನ ಮೂಲಕ ಭಾರತ ತಂಡ ಫೈನಲ್ ಪ್ರವೇಶ ಮಾಡಿತ್ತು.
ಆದರೆ, ಫೈನಲ್ ನಲ್ಲಿ ಭಾರತ ತಂಡಕ್ಕೆ (India) ಚೀನಾ ಭಾರೀ ಪೈಪೋಟಿ ನೀಡಿತ್ತು. ಎರಡೂ ತಂಡಗಳು ಜಿದ್ದಿಗೆ ಬಿದ್ದಂತೆ ಆಡಿದ್ದವು. ಮೊದಲ ಮೂರು ಕ್ವಾರ್ಟರ್ ನಲ್ಲಿ ಇತ್ತಂಡಗಳಿಗೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ. 51ನೇ ನಿಮಿಷದಲ್ಲಿ ಜುಗ್ರಾಜ್ ಸಿಂಗ್ (Jugraj Singh)ಗೋಲು ಗಳಿಸುವ ಮೂಲಕ ಭಾರತ ತಂಡಕ್ಕೆ ಮುನ್ನಡೆ ತಂದುಕೊಟ್ಟರು.
ಈ ಮುನ್ನಡೆಯನ್ನು ಕಾಯ್ದುಕೊಂಡ ಭಾರತ ಕೊನೆಗೆ ವಿಜಯ ಸಾಧಿಸಿತು. ಹಲವು ಬಾರಿ ಚೀನಾ ಆಟಗಾರರು ಪ್ರಯತ್ನ ಪಟ್ಟರೂ ಗೋಲು ಹೊಡೆಯಲು ಭಾರತದ ಆಟಗಾರರು ಬಿಡಲಿಲ್ಲ. ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ನಾಯಕ ಹರ್ಮನ್ ಪ್ರೀತ್ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದರು. ಚೀನಾವನ್ನು ಬಾರತ ಲೀಗ್ ಹಂತದ ಮೊದಲ ಪಂದ್ಯದಲ್ಲಿಯೂ ಮಣಿಸಿತ್ತು. ಮೊದಲ ಪಂದ್ಯದಲ್ಲಿ 3-0 ಅಂತರದಿಂದ ಗೆದ್ದಿತ್ತು. ಈಗ ಫೈನಲ್ಲಿಯೂ ಮಣಿಸಿದೆ.








