ಕೊರೊನಾ : ಭಾರತಕ್ಕಿಂದು ಶತಕೋಟಿಯ ಸಂಭ್ರಮ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೊರೊನಾ ಲಸಿಕೆ ವಿತರಣೆಯಲ್ಲಿ ಚರಿತ್ರೆ ಸೃಷ್ಠಿಸಿದೆ. ಮಹಾ ಲಸಿಕಾ ಅಭಿಯಾನದಲ್ಲಿ ಭಾರತ ಇಡೀ ವಿಶ್ವವನ್ನೇ ನಿಬ್ಬೆರಗಾಗಿಸಿದೆ.
ಹೌದು..! ಭಾರತಕ್ಕಿಂದು ಶತಕೋಟಿಯ ಸಂಭ್ರಮ..
ಕೋವಿಡ್ 19 ಎನ್ನುವ ಮಹಾಮಾರಿಗೆ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಭಾರತ ಮಹತ್ವದ ಮೈಲಿಗಲ್ಲು ಇಟ್ಟಿದೆ… ಕೇವಲ ಒಂದೇ ಒಂದು ವರ್ಷದ ಒಳಗಾಗಿ ಬರೋಬ್ಬರಿ ನೂರು ಕೋಟಿ ಜನರಿಗೆ ಕೊರೊನಾ ಲಸಿಕೆ ಹಾಕುವ ಸಾಧನೆಯನ್ನ ಸಾಧಿಸಿದೆ.
ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಲಸಿಕಾಕರಣದಲ್ಲಿ ಹಗಲಿರುಳು ದುಡಿದ ಎಲ್ಲ ಕರೋನಾ ವಾರಿಯರ್ ಗಳಿಗೆ ಶುಭಾಶಯ ತಿಳಿಸಿದ್ದಾರೆ. ಇದು ಭಾರತೀಯ ವಿಜ್ಞಾನದ ವಿಜಯ ಎಂದು ನಮೋ ಬಣ್ಣಿಸಿದ್ದಾರೆ.
ಇನ್ನು ಇಡೀ ವಿಶ್ವವೇ ನಿಬ್ಬೆರವಾಗುವಂತೆ ಭಾರತದಲ್ಲಿ ಲಸಿಕಾ ಅಭಿಯಾನ ಜರುಗುತ್ತಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಭಾರತದ ಎಲ್ಲ ಜನತೆಗೆ ವ್ಯಾಕ್ಸಿನ್ ನೀಡುವ ಭರವಸೆಯನ್ನ ಕೇಂದ್ರ ಸರ್ಕಾರ ವ್ಯಕ್ತ ಪಡಿಸುತ್ತಿದೆ.