ಯುದ್ಧದ ನಡುವೆಯೂ ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳಲಿದೆ ಭಾರತ
ಪೆಟ್ರೋಲಿಯಂ ಸಚಿವ ಹರ್ ದೀಪ್ ಸಿಂಗ್ ಪುರಿ, ಪೆಟ್ರೋಲ್ ದರ ಅಂತಾರಾಷ್ಟ್ರೀಯ ದರವನ್ನು ಅವಲಂಬಿಸಿದೆ. ಸೆಸ್ ಅಥವಾ ತೆರಿಗೆ ಹೆಚ್ಚಳ ಮಾಡುವುದು ಆಯಾ ಸನ್ನಿವೇಶದ ಮೇಲೆ ಅವಲಂಬಿತವಾಗಿದೆ. ಮೊದಲ ಲಾಕ್ ಡೌನ್ ಸಮಯದಲ್ಲಿ ಕೆಲವು ತೆರಿಗೆಯನ್ನು ಪರಿಷ್ಕರಿಸಲಾಗಿತ್ತು. 2021ರ ನವೆಂಬರ್ ನಲ್ಲಿ ಅಬಕಾರಿ ತೆರಿಗೆಯನ್ನು ಹೆಚ್ಚಿಸಲಾಗಿತ್ತು. ಅಂದಿನಿಂದ ಇಂದಿನವರೆಗೂ ಪೆಟ್ರೋಲ್ ದರ ಸ್ಥಿರವಾಗಿದೆ. ಏರಿಕೆಯಾಗಿಲ್ಲ ಎಂದರು.
ಡೀಸೆಲ್ ದರ ನಿಯಂತ್ರಣ ಹಾಗೂ ಏರಿಕೆ ನಿಯಂತ್ರಿಸಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಭಾರತವೊಂದೇ ಅಲ್ಲ, ಹಲವಾರು ದೇಶಗಳಲ್ಲಿ ಪೆಟ್ರೋಲ್ ದರ ತೀವ್ರವಾಗಿ ಏರಿಕೆಯಾಗಿದೆ. ದರ ನಿಯಂತ್ರಣಕ್ಕೆ ಸರ್ಕಾರ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ. ರಷ್ಯಾ ಜತೆಗೆ ಕಚ್ಚಾ ತೈಲದ ಆಮದು ಕುರಿತು ಮಾತುಕತೆ ನಡೆಯುತ್ತಿದ್ದು, ಪ್ರಗತಿಯಲ್ಲಿದೆ.
ಕಳೆದ ಎರಡು ವರ್ಷಗಳು ಸಾಂಕ್ರಾಮಿಕದಿಂದ ಬಾಧಿತವಾಗಿದ್ದವು. ಕಳೆದ ಕೆಲವು ದಿನಗಳಿಂದ ರಷ್ಯಾ ಹಾಗೂ ಉಕ್ರೇನ್ ಯುದ್ಧ ನಡೆಯುತ್ತಿದೆ. ಈ ನಡುವೆಯೂ, ರಷ್ಯಾದ ಅಧಿಕಾರಿಗಳೊಂದಿಗೆ ತೈಲದ ಲಭ್ಯತೆ, ವಿಮೆ, ದರ ಹಾಗೂ ಹಣಪಾವತಿ ಇತ್ಯಾದಿ ಸಂಗತಿಗಳ ಕುರಿತು ಮಾತುಕತೆ ನಡೆಯುತ್ತಿದೆ ಎಂದರು.