ADVERTISEMENT
Wednesday, September 9, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಭಾರತ ಯಶಸ್ವಿ…

admin by admin
May 20, 2020
in International, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಹೊಸದಿಲ್ಲಿ, ಮೇ 20 : ಜಗತ್ತಿನಾದ್ಯಂತ ‌ಕೊರೊನಾ ಸೋಂಕು ವ್ಯಾಪಕವಾಗಿ ಪಸರಿಸಿದ್ದು, ವಿಶ್ವವನ್ನೇ ತಲ್ಲಣಗೊಳಿಸಿದೆ. ವಿ‌ಶ್ವದ ಬಲಿಷ್ಟ ದೇಶಗಳು ಕೊರೊನಾ ಸೋಂಕಿನ ಅರ್ಭಟ ತಡೆಯಲಾಗದೆ ಅದರ ಮುಂದೆ ಮಂಡಿಯೂರಿ ಕುಳಿತಿದೆ. ಜಾಗತಿಕವಾಗಿ ಕೋಟ್ಯಾಂತರ ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದರೆ, ಈಗಾಗಲೇ ಲಕ್ಷಾಂತರ ಮಂದಿಯನ್ನು ಕೊರೊನಾ ಬಲಿ ತೆಗೆದುಕೊಂಡಿದೆ.

ಜನವರಿ 30 ರಂದು ಭಾರತದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಕೊರೊನಾ ವೈರಸ್ ಎಂಬ ಮಹಾ ಮಾರಿ ಈಗ ಲಕ್ಷ ದಾಟಿದೆ. ಇತರ ರಾಷ್ಟ್ರಗಳೊಡನೆ ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ಹರಡುವಿಕೆಯ ವೇಗವನ್ನು ಗಮನಿಸಿದಾಗ ಭಾರತದಲ್ಲಿ ಜಾಗತಿಕವಾಗಿ ಶ್ರೀಮಂತ ರಾಷ್ಟ್ರಗಳಾದ ಅಮೆರಿಕ, ಯುರೋಪಿಯನ್ ರಾಷ್ಟ್ರಗಳಿಗಿಂತ ಕಡಿಮೆ ಇರುವುದು ಕಂಡು ಬರುತ್ತದೆ. ವರ್ಲ್ಡೊಮೀಟರ್ ಅಂಕಿಅಂಶದಲ್ಲಿ, 100 ರಿಂದ ಒಂದು ಲಕ್ಷ ಕೊರೊನಾ ಪ್ರಕರಣಗಳು ಭಾರತದಲ್ಲಿ 64 ದಿನಗಳ ಅವಧಿಯಲ್ಲಿ ದಾಖಲಾಗಿದೆ.‌ ಈ ಮೂಲಕ ಅಮೆರಿಕ, ಬ್ರಿಟನ್ ಹಾಗೂ ಸ್ಪೇನ್ ಮುಂತಾದ ಶ್ರೀಮಂತ ರಾಷ್ಟ್ರಗಳಿಗೆ ಹೋಲಿಸಿದಾಗ ಭಾರತ ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಹೆಚ್ಚು ಯಶಸ್ಸು ಕಂಡಿದೆ ಎಂದು ಹೇಳಬಹುದು. ಇದುವರೆಗೆ ಕೊರೊನಾ ಸೋಂಕನ್ನು ‌ಪತ್ತೆ ಹಚ್ಚಲು 20 ಲಕ್ಷಕ್ಕಿಂತ ಅಧಿಕ ಪರೀಕ್ಷೆಗಳು ‌ನಡೆದಿದ್ದು, ಮೇ ಅಂತ್ಯದ ಒಳಗೆ ಇಷ್ಟು ಪರೀಕ್ಷೆಗಳನ್ನು ನಡೆಸಬೇಕು ಎಂದು ಭಾರತ ಗುರಿ ಹಾಕಿಕೊಂಡಿತ್ತು. ದೇಶದ ಸರಕಾರಿ, ಖಾಸಗಿ ಪ್ರಯೋಗಾಲಯಗಳ ಅವಿರತ‌ ಪ್ರಯತ್ನದಿಂದ ಅಂದುಕೊಂಡ ಸಮಯಕ್ಕಿಂತ ಬೇಗನೆ ಇಷ್ಟೊಂದು ಪ್ರಮಾಣದಲ್ಲಿ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗಿದೆ.

Related posts

ನೈಸ್ ಸಮರ-ಬೇಕಿದ್ದರೆ ಕೋರ್ಟ್ ಗೆ ಹೋಗಲಿ,ನಮಗೆ ಸಾಮಾನ್ಯ ಪ್ರಜ್ಞೆ ಇದೆ, ಬೇಕಿದ್ದರೆ ಉಪವಾಸ ಮಾಡಲಿ: ದೊಡ್ಡಗೌಡರ ವಿರುದ್ಧ ಗುಡುಗಿದ ಡಿ.ಕೆ. ಶಿವಕುಮಾರ್

ನೈಸ್ ಸಮರ-ಬೇಕಿದ್ದರೆ ಕೋರ್ಟ್ ಗೆ ಹೋಗಲಿ,ನಮಗೆ ಸಾಮಾನ್ಯ ಪ್ರಜ್ಞೆ ಇದೆ, ಬೇಕಿದ್ದರೆ ಉಪವಾಸ ಮಾಡಲಿ: ದೊಡ್ಡಗೌಡರ ವಿರುದ್ಧ ಗುಡುಗಿದ ಡಿ.ಕೆ. ಶಿವಕುಮಾರ್

September 9, 2026
LPG ಗ್ರಾಹಕರಿಗೆ ಕೇಂದ್ರದಿಂದ ಮಹತ್ವದ ಅಪ್‌ಡೇಟ್: ನಗರ–ಗ್ರಾಮೀಣ ಪ್ರದೇಶಗಳಿಗೂ ಇನ್ಮುಂದೆ 25 ದಿನಗಳಲ್ಲೇ ಮರುಬುಕಿಂಗ್

LPG ಗ್ರಾಹಕರಿಗೆ ಕೇಂದ್ರದಿಂದ ಮಹತ್ವದ ಅಪ್‌ಡೇಟ್: ನಗರ–ಗ್ರಾಮೀಣ ಪ್ರದೇಶಗಳಿಗೂ ಇನ್ಮುಂದೆ 25 ದಿನಗಳಲ್ಲೇ ಮರುಬುಕಿಂಗ್

September 9, 2026

ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿರುವ ಅಮೆರಿಕ ಹಾಗೂ ಸ್ಪೇನ್‌ಗಳಂತಹ ರಾಷ್ಟ್ರಗಳಲ್ಲಿ 30 ದಿನಗಳ ಅವಧಿಗಿಂತಲೂ ಕಡಿಮೆ ಸಮಯದಲ್ಲಿ ಕೊರೊನಾ ಪ್ರಕರಣಗಳು 100 ರಿಂದ 1 ಲಕ್ಷ ದಾಖಲಾಗಿದೆ. ವಿಶ್ವದ ದೊಡ್ಡಣ್ಣ ಅಮೆರಿಕ 100 ರಿಂದ ‌1 ಲಕ್ಷ ಪ್ರಕರಣ ದಾಖಲಾಗಲು 25 ದಿನಗಳನ್ನು ತೆಗೆದುಕೊಂಡಿದ್ದರೆ, ಸ್ಪೇನ್‌ನಲ್ಲಿ 30 ದಿನಗಳ ಅವಧಿಯಲ್ಲಿ 100ರಿಂದ ಒಂದು ಲಕ್ಷ ಪ್ರಕರಣಗಳು ದಾಖಲಾಗಿದ್ದವು.

ಜರ್ಮನಿಯಲ್ಲಿ 35 ದಿನಗಳ ಅವಧಿಯಲ್ಲಿ 100ರಿಂದ ಒಂದು ಲಕ್ಷ ಪ್ರಕರಣಗಳನ್ನು ದಾಖಲಾದರೆ, ಇಟಲಿ 36, ಫ್ರಾನ್ಸ್ 39 ಹಾಗೂ ಬ್ರಿಟನ್ 42 ದಿನಗಳ ಅವಧಿಯಲ್ಲಿ 100ರಿಂದ ಒಂದು ಲಕ್ಷ ಕೊರೊನಾ ಪ್ರಕರಣಗಳು ದಾಖಲಾಗಿದ್ದವು. ವಿಶ್ವದಲ್ಲೇ ಎರಡನೇ ಅತ್ಯಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ಭಾರತದಲ್ಲಿ 100ರಿಂದ ಒಂದು ಲಕ್ಷ ಕೊರೊನಾ ಸೋಂಕು ಪ್ರಕರಣಗಳು 64 ದಿನಗಳ ಅವಧಿಯಲ್ಲಿ ದಾಟಿರುವುದನ್ನು ಗಮನಿಸುವಾಗ ಭಾರತ ಕೊರೊನಾ ತಡೆಗಟ್ಟುವುದರಲ್ಲಿ ಹೆಚ್ಚಿನ ಯಶಸ್ಸು ‌ಕಂಡಿದೆ ಎಂದು ಹೇಳಬಹುದು.
ಆದರೆ ಇದೀಗ ದೇಶದಲ್ಲಿ ನಾಲ್ಕನೇ ಹಂತದ ಲಾಕ್ ಡೌನ್ ಜಾರಿಯಲ್ಲಿದ್ದು, ಬಹುತೇಕ ನಿರ್ಬಂಧಗಳು ಸಡಿಲಿಕೆಯಾಗುತ್ತಿದೆ. ಇದರೊಂದಿಗೆ ದೇಶದಲ್ಲಿ ಕೊರೊನಾ ಹೋರಾಟಕ್ಕೆ ಸಂಬಂಧಿಸಿದಂತೆ ಹೊಸ ಸವಾಲುಗಳು ಹುಟ್ಟಿಕೊಂಡಿವೆ. ದೇಶದಲ್ಲಿ ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ರಾಜ್ಯಗಳಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಅಲ್ಲಿಂದ ಇತರ ರಾಜ್ಯಗಳಿಗೆ ಕೊರೊನಾ ‌ಹರಡುತ್ತಿರುವುದು ಕಳವಳ ಹುಟ್ಟಿಸಿದೆ.

 

ಮಹಾರಾಷ್ಟ್ರದಲ್ಲಿ ದೇಶದ ಒಟ್ಟು ಜನಸಂಖ್ಯೆಯ ಮೂರನೇ ಒಂದರಷ್ಟು ಕೊರೋನಾ ಸೋಂಕು ‌ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 33 ಸಾವಿರ ದಾಟಿದ್ದರೆ ಸಾವಿನ ಸಂಖ್ಯೆ 2 ಸಾವಿರ ಮೀರಿದೆ. ಎರಡನೇ ಸ್ಥಾನದಲ್ಲಿರುವ ಗುಜರಾತ್ ನಲ್ಲಿ ಇಲ್ಲಿಯವರೆಗೆ 659 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದರೆ, 12 ಸಾವಿರದಷ್ಟು ಮಂದಿಯಲ್ಲಿ ಕೊರೊನಾ ಸೋಂಕು ‌ಪತ್ತೆಯಾಗಿದೆ. ಮೂರನೇ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ‌ಪ್ರಕರಣಗಳು ಏರಿಕೆಯಾಗುತ್ತಿದ್ದು, ಈಗಾಗಲೇ 13 ಸಾವಿರದ ಆಸುಪಾಸಿನಲ್ಲಿ ಇದೆ. ದೆಹಲಿಯಲ್ಲಿ, ರಾಜಸ್ಥಾನ ಮಧ್ಯಪ್ರದೇಶದಲ್ಲೂ ಕೊರೋನಾ ಸೋಂಕಿತರ‌ ಸಂಖ್ಯೆ ಏರಿಕೆಯಾಗುತ್ತಿದ್ದು, ಸವಾಲನ್ನು ‌ಒಡ್ಡಿದೆ.

Tags: coronavirus
ShareTweetSendShare
Join us on:

Related Posts

ನೈಸ್ ಸಮರ-ಬೇಕಿದ್ದರೆ ಕೋರ್ಟ್ ಗೆ ಹೋಗಲಿ,ನಮಗೆ ಸಾಮಾನ್ಯ ಪ್ರಜ್ಞೆ ಇದೆ, ಬೇಕಿದ್ದರೆ ಉಪವಾಸ ಮಾಡಲಿ: ದೊಡ್ಡಗೌಡರ ವಿರುದ್ಧ ಗುಡುಗಿದ ಡಿ.ಕೆ. ಶಿವಕುಮಾರ್

ನೈಸ್ ಸಮರ-ಬೇಕಿದ್ದರೆ ಕೋರ್ಟ್ ಗೆ ಹೋಗಲಿ,ನಮಗೆ ಸಾಮಾನ್ಯ ಪ್ರಜ್ಞೆ ಇದೆ, ಬೇಕಿದ್ದರೆ ಉಪವಾಸ ಮಾಡಲಿ: ದೊಡ್ಡಗೌಡರ ವಿರುದ್ಧ ಗುಡುಗಿದ ಡಿ.ಕೆ. ಶಿವಕುಮಾರ್

by Shwetha
September 9, 2026
0

ಬೆಂಗಳೂರು: ನೈಸ್ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೈಗೊಂಡಿರುವ ತೀರ್ಮಾನದ ವಿರುದ್ಧ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಸಮರ ಸಾರಿದ ಬೆನ್ನಲ್ಲೇ,ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಷ್ಟೇ...

LPG ಗ್ರಾಹಕರಿಗೆ ಕೇಂದ್ರದಿಂದ ಮಹತ್ವದ ಅಪ್‌ಡೇಟ್: ನಗರ–ಗ್ರಾಮೀಣ ಪ್ರದೇಶಗಳಿಗೂ ಇನ್ಮುಂದೆ 25 ದಿನಗಳಲ್ಲೇ ಮರುಬುಕಿಂಗ್

LPG ಗ್ರಾಹಕರಿಗೆ ಕೇಂದ್ರದಿಂದ ಮಹತ್ವದ ಅಪ್‌ಡೇಟ್: ನಗರ–ಗ್ರಾಮೀಣ ಪ್ರದೇಶಗಳಿಗೂ ಇನ್ಮುಂದೆ 25 ದಿನಗಳಲ್ಲೇ ಮರುಬುಕಿಂಗ್

by Shwetha
September 9, 2026
0

ಗೃಹಬಳಕೆಯ LPG ಸಿಲಿಂಡರ್ ಗ್ರಾಹಕರಿಗೆ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆ ಮಾಡಿದೆ. ಇನ್ಮುಂದೆ ನಗರ ಮತ್ತು ಗ್ರಾಮೀಣ ಪ್ರದೇಶ ಎಂಬ ಯಾವುದೇ ಭೇದವಿಲ್ಲದೆ ಎಲ್ಲಾ ಗೃಹ ಬಳಕೆಯ...

ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ: ಬಿ. ದಯಾನಂದ್‌ಗೆ ಮತ್ತೆ ಬಡ್ತಿ; ISD ಡಿಜಿಪಿಯಾಗಿ ನೇಮಕ

ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ: ಬಿ. ದಯಾನಂದ್‌ಗೆ ಮತ್ತೆ ಬಡ್ತಿ; ISD ಡಿಜಿಪಿಯಾಗಿ ನೇಮಕ

by Shwetha
September 9, 2026
0

ಚಿನ್ನಸ್ವಾಮಿ ಸ್ಟೇಡಿಯಂ ಬಳಿ 2025ರಲ್ಲಿ ನಡೆದ ಕಾಲ್ತುಳಿತ ದುರಂತದ ಹಿನ್ನೆಲೆಯಲ್ಲಿ ತಡೆಹಿಡಿಯಲಾಗಿದ್ದ ಹಿರಿಯ ಐಪಿಎಸ್ ಅಧಿಕಾರಿ ಬಿ. ದಯಾನಂದ್ ಅವರ ಬಡ್ತಿಯನ್ನು ರಾಜ್ಯ ಸರ್ಕಾರ ಇದೀಗ ಮರುಸ್ಥಾಪಿಸಿದೆ....

ಹೆದರ್ಕೋಬೇಡ ಎಷ್ಟು ಕೊಡ್ತಾರೆ ಹೇಳು,ಅಧಿಕಾರದ ಬಿಗುಮಾನ ಬದಿಗಿಟ್ಟು ಈರುಳ್ಳಿ ಮೂಟೆ ಮೇಲೆ ಕುಳಿತ ಡಿಕೆಶಿ: ಅನ್ನದಾತನ ಕಣ್ಣೀರಿಗೆ ಕರಗಿದ ನಾಯಕ

ಹೆದರ್ಕೋಬೇಡ ಎಷ್ಟು ಕೊಡ್ತಾರೆ ಹೇಳು,ಅಧಿಕಾರದ ಬಿಗುಮಾನ ಬದಿಗಿಟ್ಟು ಈರುಳ್ಳಿ ಮೂಟೆ ಮೇಲೆ ಕುಳಿತ ಡಿಕೆಶಿ: ಅನ್ನದಾತನ ಕಣ್ಣೀರಿಗೆ ಕರಗಿದ ನಾಯಕ

by Shwetha
September 9, 2026
0

ಬೆಂಗಳೂರು: ಅಧಿಕಾರದ ಬಿಗುಮಾನವನ್ನು ಬದಿಗಿಟ್ಟು, ಜನಸಾಮಾನ್ಯರಂತೆ ಈರುಳ್ಳಿ ಮೂಟೆಗಳ ಮೇಲೆ ಕುಳಿತು ರೈತರ ಮತ್ತು ವ್ಯಾಪಾರಿಗಳ ಸಮಸ್ಯೆಗಳನ್ನು ಆಲಿಸುವ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಎಲ್ಲರ...

ಲವ್ ಜಿಹಾದ್ ಕಳಂಕ ಅಳಿಸಿ ಒಂದಾದ ಎರಡು ಕುಟುಂಬಗಳು: ಮುಸ್ಲಿಂ ಯೂಟ್ಯೂಬರ್ ಮನೆಯಲ್ಲಿ ಹಿಂದೂ ಸಂಪ್ರದಾಯದಂತೆ ಮಗುವಿನ ತೊಟ್ಟಿಲು ಶಾಸ್ತ್ರ

ಲವ್ ಜಿಹಾದ್ ಕಳಂಕ ಅಳಿಸಿ ಒಂದಾದ ಎರಡು ಕುಟುಂಬಗಳು: ಮುಸ್ಲಿಂ ಯೂಟ್ಯೂಬರ್ ಮನೆಯಲ್ಲಿ ಹಿಂದೂ ಸಂಪ್ರದಾಯದಂತೆ ಮಗುವಿನ ತೊಟ್ಟಿಲು ಶಾಸ್ತ್ರ

by Shwetha
September 9, 2026
0

ಧಾರವಾಡ: ಪ್ರೀತಿಗೆ ಜಾತಿ ಧರ್ಮದ ಹಂಗಿಲ್ಲ ಎಂಬ ಮಾತು ಮತ್ತೊಮ್ಮೆ ಸಾಬೀತಾಗಿದೆ. ಕಳೆದ ಒಂದು ವರ್ಷದಿಂದ ಲವ್ ಜಿಹಾದ್ ಆರೋಪ ಮತ್ತು ತೀವ್ರ ವಿರೋಧ ಎದುರಿಸುತ್ತಿದ್ದ ಉತ್ತರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram