ಜಗತ್ತಿನಲ್ಲೇ ಮಿಲಿಟಿರಿ ಮೇಲೆ ಅತಿಹೆಚ್ಚು ಖರ್ಚು ಮಾಡುವ 3ನೇ ದೇಶ ಭಾರತ
ನವದೆಹಲಿ: ಮಿಲಿಟಿರಿ ಮೇಲೆ ಜಗತ್ತಿನಲ್ಲೇ ಅತಿಹೆಚ್ಚು ಖರ್ಚುವ ಮಾಡುವ ದೇಶಗಳಲ್ಲಿ ಭಾರತ 3ನೇ ಸ್ಥಾನದಲ್ಲಿದೆ ಎಂದು ಸ್ಟಾಕ್‍ಹೋಮ್ ಇಂಟರ್ ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ (SIPRI) ತಿಳಿಸಿದೆ.
SIPRI ವರದಿಯ ಪ್ರಕಾರ ಹಲವು ಆರ್ಥಿಕ ಸಮಸ್ಯೆಗಳ ನಡುವೆಯೂ ಅಮೆರಿಕ ಚೀನಾದ ಬಳಿಕ ಭಾರತ ಮಿಲಿಟರಿ ಮೇಲೆ ಅತಿ ಹೆಚ್ಚು ಖರ್ಚು ಮಾಡುತ್ತಿದೆ. ವಿಶ್ವದ ಎಲ್ಲ ದೇಶಗಳ ಮಿಲಿಟರಿ ಹೂಡಿಕೆಗಳ ಮೇಲಿನ ಅಧ್ಯಯನದ ಬಳಿಕ ಅದು ತನ್ನ ವರದಿಯನ್ನು ಪ್ರಕಟಿಸಿದೆ.
ವಿಶ್ವದಲ್ಲಿ ಐದು ರಾಷ್ಟ್ರಗಳು ಮಿಲಿಟರಿ ಮೇಲೆ ಹೆಚ್ಚು ಖರ್ಚು ಮಾಡುತ್ತಿವೆ. ವಿಶ್ವದ ದೊಡ್ಡಣ್ಣ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, ಚೀನಾ, ಭಾರತ, ಬ್ರಿಟನ್ ಮತ್ತು ರಷ್ಯಾ ನಂತರದ ಸ್ಥಾನಗಳಲ್ಲಿದೆ. 2021ರಲ್ಲಿ ವಿಶ್ವದ ಎಲ್ಲ ದೇಶಗಳು ಮಿಲಿಟರಿ ಮೇಲೆ 2.1 ಟ್ರಿಲಿಯನ್ ಯುಎಸ್ ಡಾಲರ್ ಖರ್ಚು ಮಾಡಿದ್ದು ಇದರಲ್ಲಿ ಈ ಐದು ದೇಶಗಳು 62% ಖರ್ಚು ಹೊಂದಿವೆ.
2021 ರಲ್ಲಿ ಭಾರತವೂ 76.6 ಶತಕೋಟಿ ಡಾಲರ್ ಮಿಲಿಟರಿ ಮೇಲೆ ಖರ್ಚು ಮಾಡಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ 0.9% ಹಾಗೂ 2012ಕ್ಕೆ ಹೋಲಿಸಿದರೆ 33% ನಷ್ಟು ಖರ್ಚು ಹೆಚ್ಚಾಗಿದೆ.
ಜಾಗತಿಕ ದೇಶಗಳ ಒಟ್ಟು ಮಿಲಿಟರಿ ಖರ್ಚುನಲ್ಲಿ ಅಮೆರಿಕ 38% ಹೂಡಿಕೆ ಹೊಂದಿದ್ದರೆ ಚೀನಾ 14% ಖರ್ಚು ಮಾಡುತ್ತಿದೆ. ಚೀನಾ 27 ವರ್ಷಗಳಿಂದ ಗಣನೀಯವಾಗಿ ಮಿಲಿಟರಿ ಖರ್ಚು ಹೆಚ್ಚು ಮಾಡುತ್ತಾ ಬಂದಿದೆ. 2016 ರಿಂದ 2019 ವರೆಗೂ ಮಿಲಿಟರಿ ಮೇಲೆ ಖರ್ಚು ಕಡಿಮೆ ಮಾಡಿದ್ದ ರಷ್ಯಾ ಈಗ ಮತ್ತೆ ತನ್ನ ಖರ್ಚು ಹೆಚ್ಚಿಸಿದೆ.