ನವದೆಹಲಿ: ಬುಧವಾರ ನಡೆಯಬೇಕಿದ್ದ ಇಂಡಿಯಾ ಒಕ್ಕೂಟದ ಸಭೆಯನ್ನು ಮುಂದೂಡಲಾಗಿದೆ.
ಪ್ರತಿ ಪಕ್ಷ ನಾಯಕರ ಅಲಭ್ಯತೆಯ ಹಿನ್ನೆಲೆಯಲ್ಲಿ ನಾಳೆ ನಡೆಯಬೇಕಿದ್ದ ಒಕ್ಕೂಟದ ಸಭೆಯನ್ನು ಮುಂದೂಡಲಾಗಿದೆ. ಪಂಚರಾಜ್ಯಗಳ ಚುನಾವಣೆ ಹಿನ್ನಲೆಯಲ್ಲಿ ಒಕ್ಕೂಟದ ಸಭೆ ನಡೆಸಲು ಸಾಧ್ಯವಾಗಿರಲಿಲ್ಲ. ಆದರೆ, ಬುಧವಾರ ಸಭೆ ನಡೆಸಲು ತೀರ್ಮಾನಿಸಿತ್ತು. ಸದ್ಯ ಸಭೆ ಮುಂದೂಡಲಾಗಿದ್ದು, ಲೋಕಸಭೆ ಚುನಾವಣೆ (Lok Sabha Election) ಬಗ್ಗೆ ಚರ್ಚಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ದೆಹಲಿಯಲ್ಲಿ ಸಭೆ ನಡೆಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.
ಮಿಚಾಂಗ್ ಚಂಡಮಾರುತದಿಂದ (Cyclone Michaung) ಚೆನ್ನೈ ವಿಮಾನ ನಿಲ್ದಾಣ ಮುಚ್ಚಿದ್ದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (MK Stalin) ಅವರು ದೆಹಲಿಗೆ ಭೇಟಿ ನೀಡಲು ಮತ್ತು ಸಭೆಗೆ ಬರಲು ಆಗುತ್ತಿಲ್ಲ. ನಿತೀಶ್ ಕುಮಾರ್ ಅಸ್ವಸ್ಥರಾಗಿದ್ದಾರೆ. ಮಮತಾ ಬ್ಯಾನರ್ಜಿ ಮತ್ತು ಅಖಿಲೇಶ್ ಯಾದವ್ ಸಭೆಗೆ ಗೈರಾಗುವ ಕುರಿತು ಮಾಹಿತಿ ನೀಡಿದ್ದಾರೆ. ಅಲ್ಲದೇ, ಹಲವು ನಾಯಕರು ಮುಂದೂಡುವ ಕುರಿತು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ ಎನ್ನಲಾಗಿದೆ.