ಭಾರತದಲ್ಲೂ ಹೈಪರ್ ಸಾನಿಕ್ ಕ್ಷಿಪಣಿ ಅಭಿವೃದ್ಧಿ..!
ಚೀನಾವು ಇತ್ತೀಚಿಗೆ ಅಣುಶಕ್ತಿ ಸಾಮರ್ಥ್ಯದ ಹೈಪರ್ ಸಾನಿಕ್ ಕ್ಷಿಪಣಿ ಪ್ರಯೋಗಾರ್ಥ ಪರೀಕ್ಷೆ ನಡೆಸಿದೆ ಎಂದು ವರದಿ ಆಗಿದ್ದು ಆಗಿತ್ತು. ಅಲ್ಲದೇ ಈ ಅತ್ಯಾಧುನಿಕ ತಂತ್ರಜ್ಞಾನ ಅಮೆರಿಕಾದ ಗುಪ್ತದಳವನ್ನೂ ಆಶ್ಚರ್ಯಕ್ಕೀಡು ಮಾಡಿತ್ತು ಎಂದು ವರದಿ ತಿಳಿಸಿತ್ತು. ಆದ್ರೀಗ ಕ್ಷಿಪ್ರಗತಿಯಲ್ಲಿ ಚಲಿಸುವ ಹೈಪರ್‌ಸಾನಿಕ್ ಕ್ಷಿಪಣಿಗಳನ್ನು ಅಭಿವೃದ್ಧಿ ಪಡಿಸುತ್ತಿರುವ ಕೆಲವೇ ರಾಷ್ಟ್ರಗಳಲ್ಲಿ ಭಾರತವೂ ಒಂದು ಎಂದು ಸ್ವತಂತ್ರ ಅಧ್ಯಯನವೊಂದು ವರದಿ ಮಾಡಿದೆ.
ಹೌದು.. ಸ್ವತಂತ್ರ ಕಾಂಗ್ರೆಸ್ಸೆನಲ್ ರೀಸರ್ಚ್ ಸರ್ವೀಸ್ ನಡೆಸಿರುವ ಅಧ್ಯಯನದ ವರದಿ ಇದಾಗಿದ್ದು, ಅಮೆರಿಕ, ರಷ್ಯಾ, ಚೀನಾ ಅತ್ಯಾಧುನಿಕ ಹೈಪರ್‌ಸಾನಿಕ್ ಶಸ್ತ್ರಾಸ್ತ್ರಗಳನ್ನು ಹೊಂದಿವೆ. ಅದರಂತೆಯೇ ಭಾರತ, ಫ್ರಾನ್ಸ್, ಆಸ್ಟ್ರೇಲಿಯಾ, ಜರ್ಮನಿ, ಜಪಾನ್ ಒಳಗೊಂಡಂತೆ ಇನ್ನೂ ಅನೇಕ ದೇಶಗಳು ಇಂಥ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುತ್ತಿವೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇನ್ನೂ ಈ ಪೈಕಿ ಆಸ್ಟ್ರೇಲಿಯಾವು ಅಮೆರಿಕ ಹಾಗೂ ಭಾರತವು ರಷ್ಯಾ ಜೊತೆಗೆ ಸಹಭಾಗಿತ್ವವನ್ನು ಹೊಂದಿದೆ. ಭಾರತವು ರಷ್ಯಾದ ಸಹಭಾಗಿತ್ವದಲ್ಲಿ ಬ್ರಹ್ಮೋಸ್ II ಹೆಸರಿನ ಹೈಪರ್‌ಸಾನಿಕ್ ಕ್ಷಿಪಣಿಯನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ತಿಳಿಸಿದೆ. ಬ್ರಹ್ಮೋಸ್ II ಕ್ಷಿಪಣಿಯನ್ನು 2017ರ ವೇಳೆಗೆ ಬಳಕೆಗೆ ಸಜ್ಜುಗೊಳಿಸಬೇಕಿತ್ತು. ಆದರೆ ಇದು ವಿಳಂಬವಾಗಿದ್ದು 2025 ಮತ್ತು 2028ರ ನಡುವೆ ಬಳಕೆಗೆ ಸಿದ್ಧವಾಗಲಿದೆ ಎಂದು ವರದಿ ವಿವರಿಸಿದೆ.