India – ಎಚ್ಚರದಿಂದಿರಿ.. ಟೀಂ ಇಂಡಿಯಾಗೆ ಸನ್ನಿ ಸಲಹೆ
ಟಿ 20 ವಿಶ್ವಕಪ್ ಟೂರ್ನಿಯಲ್ಲಿ ಜಿಂಬಾಬ್ವೆ ತಂಡ ಅದ್ಭುತ ಪ್ರದರ್ಶನ ನೀಡುತ್ತಿದೆ.
ಪಾಕಿಸ್ತಾನ ವಿರುದ್ದ ಪಡೆದ ಪಂದ್ಯದಲ್ಲಿ ಜಿಂಬಾಬ್ವೆ ಆಟಗಾರರು ತೋರಿದ ಸಾಂಘಿಕ ಪ್ರದರ್ಶನ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ.
ಕೊನೆಯ ಎಸೆತದವರೆಗೂ ಗೆಲುವಿಗಾಗಿ ಹೋರಾಡಿದ ಜಿಂಬಾಬ್ವೆ ತಂಡಕ್ಕೆ ಪ್ರಶಂಸೆಗಳ ಮಹಾಪೂರವೇ ಹರಿದುಬರುತ್ತಿದೆ.
ಇದೀಗ ಆ ಸಾಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಸುನಿಲ್ ಗವಾಸ್ಕರ್ ಸೇರಿಕೊಂಡಿದ್ದು, ಜಿಂಬಾಬ್ವೆ ತಂಡವನ್ನು ಹಾಡಿ ಹೊಗಳಿದ್ದಾರೆ.
ಜಿಂಬಾಬ್ವೆ ತಂಡ ಅದ್ಭುತವಾಗಿದೆ ಎಂದು, ಆ ತಂಡದಲ್ಲಿ ಮ್ಯಾಚ್ ವಿನ್ನಿಂಗ್ ಆಟಗಾರರಿದ್ದಾರೆ ಎಂದು ಕೊಂಡಾಡಿದ್ದಾರೆ.
ಅದೇ ರೀತಿ ಟೀಂ ಇಂಡಿಯಾ ಕೂಡ ಜಿಂಬಾಬ್ವೆ ವಿರುದ್ಧ ಜಾಗ್ರತೆಯಿಂದ ಇರಬೇಕು ಎಂದು ಎಚ್ಚರಿಸಿದ್ದಾರೆ.
ಜಿಂಬಾಬ್ವೆ ತಂಡದ ಪ್ರದರ್ಶನದ ಬಗ್ಗೆ ಮಾತನಾಡಿದ ಸುನೀಲ್ ಗವಾಸ್ಕರ್, ಈ ಮೆಗಾ ಟೂರ್ನಿಯಿಂದ ಪಾಕಿಸ್ತಾನ ತಂಡ ಬಹುತೇಕ ನಿರ್ಗಮಿಸಿದಂತೆ.

ಅವರು ಮುಂದಿನ ಮೂರು ಪಂದ್ಯಗಳನ್ನು ಭಾರಿ ಅಂತರದಿಂದ ಗೆದ್ದುಕೊಳ್ಳಬೇಕು. ಮುಖ್ಯವಾಗಿ ಪಾಕಿಸ್ತಾನ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಸಾಧಿಸೋದು ಅಷ್ಟು ಸುಲಭವಲ್ಲ.
ಸೌಥ್ ಆಫ್ರಿಕಾ ತಂಡ ಭೀಕರ ಫಾರ್ಮ್ ನಲ್ಲಿದೆ ಎಂದಿದ್ದಾರೆ.
ಅದೇ ರೀತಿ ಟೀಂ ಇಂಡಿಯಾ ಕೂಡ ದಕ್ಷಿಣ ಆಫ್ರಿಕಾದಂತಹ ಅಗ್ರಶ್ರೇಣಿ ತಂಡಗಳ ಎದುರು ತುಂಬಾ ಜಾಗ್ರತೆಯಿಂದರಬೇಕು.
ಇನ್ನು ಪಾಕ್ ತಂಡಕ್ಕೆ ಸೋಲುಣಿಸಿದ ಜಿಂಬಾಬ್ವೆ ತಂಡವನ್ನು ಭಾರತ ಕೇವಲವಾಗಿ ನೋಡಬಾರದು ಎಂದು ಸಲಹೆಗಳನ್ನು ನೀಡಿದ್ದಾರೆ.
ಇದೇ ವೇಳೆ ಪಾಕಿಸ್ತಾನ ತಂಡದ ವೈಫಲ್ಯದ ಬಗ್ಗೆ ಮಾತನಾಡಿದ ಸುನಿಲ್ ಗವಾಸ್ಕರ್, ಪಾಕಿಸ್ತಾನ ತಂಡ ಅದ್ಭುತ ತಂಡ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.
ಆದ್ರೆ ಟಿ 20 ಕ್ರಿಕೆಟ್ ನಲ್ಲಿ ಏನಾದ್ರೂ ನಡೆಯಬಹುದು. ಆ ತಂಡದಲ್ಲಿ ಪ್ರತಿಭಾವಂತ ಕ್ರಿಕೆಟರ್ ಗಳಿದ್ದಾರೆ.
ಆದ್ರೆ ಮೆಗಾ ಟೂರ್ನಿಯಲ್ಲಿ ಅವರು ತಮ್ಮ ಸ್ಥಾನಕ್ಕೆ ತಕ್ಕಂತೆ ಬ್ಯಾಟ್ ಬೀಸುತ್ತಿಲ್ಲ ಎಂದು ಗವಾಸ್ಕರ್ ಹೇಳಿದ್ದಾರೆ.