India Post GDS Recruitment 2023 : ಅಂಚೆ ಇಲಾಖೆಯಲ್ಲಿ 40 ಸಾವಿರ ಹುದ್ದೆಗಳಿಗೆ ನೇಮಕಾತಿ…
ಭಾರತೀಯ ಅಂಚೆ ಇಲಾಖೆಯಲ್ಲಿ ಉದ್ಯೋಗ ಬಯಸುವವರಿಗೆ ಇದು ಸುವರ್ಣ ಅವಕಾಶ. ಇಂಡಿಯಾ ಪೋಸ್ಟ್ ಮತ್ತು ಸಂಹವನ ಸಚಿವಾಲಯ ಖಾಲಿ ಇರುವ ಗ್ರಾಮೀಣ ಡಾಕ್ ಸೇವಕ್ ನೇಮಕಾತಿ 2023 ಕ್ಕಾಗಿ ಅಧಿಸೂಚನೆಯನ್ನ ಹೊರಡಿಸಿದೆ. ನೋಟಿಫಿಕೇಶ್ ಪ್ರಕಾರ 40889 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಗ್ರಾಮೀಣ ಡಾಕ್ ಸೇವಕರು (ಜಿಡಿಎಸ್), ಬ್ರಾಂಚ್ ಪೋಸ್ಟ್‌ಮಾಸ್ಟರ್ (ಬಿಪಿಎಂ), ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್‌ಮಾಸ್ಟರ್ (ಎಬಿಪಿಎಂ) / ಡಾಕ್ ಸೇವಕ್) ಆಗಿ ತೊಡಗಿಸಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನ ಆಹ್ವಾನಿಸಲಾಗಿದೆ.
ಜನವರಿ 27, 2023 ರಿಂದ ನೇಮಕಾತಿ ಪ್ರಕಿಯೆಗಳು ಆರಂಭವಾಗಿದ್ದು, 16 ಫೆಬ್ರವರಿ 2023 ರ ವರೆಗೆ ಅರ್ಜಿಗಳನ್ನ ಸಲ್ಲಿಸಬಹುದು. ಅಧಿಕೃತ ವೆಬ್‌ಸೈಟ್ indiapostgdsonline.gov.in
ಅರ್ಜಿದಾರರು ಫೆಬ್ರವರಿ 17 ರಿಂದ 19 ರವರೆಗೆ ಅರ್ಜಿ ನಮೂನೆಯಲ್ಲಿ ತಿದ್ದುಪಡಿಗಳನ್ನ ಮಾಡಬಹುದು.
ಶೈಕ್ಷಣಿಕ ಅರ್ಹತೆ
ಅಭ್ಯರ್ಥಿಗಳು ಭಾರತ ಸರ್ಕಾರ / ರಾಜ್ಯ ಸರ್ಕಾರಗಳಿಂದ ಮಾನ್ಯತೆ ಪಡೆದ ಶಾಲಾ ಶಿಕ್ಷಣ ಮಂಡಳಿಯು ನಡೆಸುವ 10 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಮತ್ತು ಅರ್ಜಿದಾರರು ಸ್ಥಳೀಯ ಭಾಷೆಯನ್ನ ಅಧ್ಯಯನ ಮಾಡಿರಬೇಕು ಹಾಗೂ ಕಂಪೂಟರ್ ಜ್ಞಾನವನ್ನ ಹೊಂದಿರ ಬೇಕು.
ವಯಸ್ಸಿನ ಮಿತಿಗಳು
ಕನಿಷ್ಠ ವಯಸ್ಸಿನ ಮಿತಿ – 18 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ – 40 ವರ್ಷಗಳು
ಅರ್ಜಿ ಶುಲ್ಕ
ಎಲ್ಲಾ ಹುದ್ದೆಗಳಿಗೆ ಅರ್ಜಿದಾರರು 100/- ಪಾವತಿಸಬೇಕು.
ಎಲ್ಲಾ ಮಹಿಳಾ ಅರ್ಜಿದಾರರು, SC / ST ಅರ್ಜಿದಾರರು, PWD ಅರ್ಜಿದಾರರು ಮತ್ತು ಟ್ರಾನ್ಸ್‌ವುಮೆನ್ ಅರ್ಜಿದಾರರಿಗೆ ಶುಲ್ಕದ ಪಾವತಿಯನ್ನು ವಿನಾಯಿತಿ ನೀಡಲಾಗಿದೆ.
India Post GDS Recruitment 2023: Application process begins for 40000+ Gramin Dak Sevak posts