ಪೋಸ್ಟ್ ಆಫೀಸ್ನಲ್ಲಿ 1 ಲಕ್ಷ ಉದ್ಯೋಗ
ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ
23 ವಿಭಾಗಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಉದ್ಯೋಗ
ಕರ್ನಾಟಕದಲ್ಲಿ 3887 ಪೋಸ್ಟ್ ಮನ್ ಹುದ್ದೆ
ಕನಿಷ್ಠ 10 ತರಗತಿ ಪಾಸ್ ಆದವರು ಅರ್ಜಿಸಲ್ಲಸಬಹುದು
ನವದೆಹಲಿ : ಅಂಚೆ ಇಲಾಖೆಯಲ್ಲಿ ಬರೋಬ್ಬರಿ 1 ಲಕ್ಷಕ್ಕೂ ಹೆಚ್ಚು ಹುದ್ದೆ ಖಾಲಿಯಾಗಿದ್ದು, ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ.
23 ವಿಭಾಗಗಳಲ್ಲಿ ಒಟ್ಟು 1 ಲಕ್ಷಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಕರ್ನಾಟಕದಲ್ಲಿ 3887 ಪೋಸ್ಟ್ ಮನ್ ಹುದ್ದೆ, 90 ಮೈಲ್ ಗಾರ್ಡ್ ಹಾಗೂ 1754 ಎಂಟಿಎಸ್ ಹುದ್ದೆಗಳು ಖಾಲಿಯಾಗಿವೆ.
ಪೋಸ್ಟ್ ಆಫೀಸ್ ನಲ್ಲಿರುವ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 10 ನೇ ತರಗತಿ ಪಾಸ್ ಆಗಿರಬೇಕು.
ಕೆಲ ಹುದ್ದೆಗಳಿಗೆ 12 ನೇ ತರಗತಿ ಪಾಸ್ ಆಗಿರಬೇಕು, ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಕನಿಷ್ಟ 18 ವರ್ಷ ವಯಸ್ಸಾಗಿರಬೇಕು,32 ವರ್ಷ ವಯಸ್ಸು ಮೀರಿರಬಾರದು.
ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ
ಭಾರತೀಯ ಅಂಜೆ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ತೆರಳಿ ನೇಮಕಾತಿ ಲಿಂಗ್ ಕ್ಲಿಕ್ ಮಾಡಬೇಕು.
ಬಳಿಕ ಅಭ್ಯರ್ಥಿಗಳು ಯಾವ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುತ್ತೀರಾ ಅಂತಾ ನಿರ್ಧರಿಸಿ, ಆಯ್ಕೆ ಮಾಡಿಕೊಳ್ಳಬೇಕು.
ನಂತರ ಸೂಕ್ತ ಮಾಹಿತಿ ತುಂಬಿ, ನೀಡಿರುವ ಅರ್ಜಿ ಭರ್ತಿ ಮಾಡಬೇಕು. ಅದಾದ ಬಳಿಕ ಶುಲ್ಕ ಪಾವತಿಸಿ ಸಬ್ ಮಿಟ್ ಮಾಡಬೇಕು. ನಿಮ್ಮ ಅರ್ಜಿ ಯಶಸ್ವಿಯಾದ ಬಳಿಕ ರಿಸೆಪ್ಟ್ ಡೌನೋಡ್ ಮಾಡಿಕೊಳ್ಳಿ.
ಹೆಚ್ಚಿನ ಮಾಹಿತಿಗಾಗಿ ಅಂಚೆ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ..