India | ಟೀಂ ಇಂಡಿಯಾದ ಅತ್ಯಂತ ಕೆಟ್ಟ ದಾಖಲೆ
ತಿರುವನಂತಪುರಂ ಅಂಗಳದಲ್ಲಿ ನಡೆದ ಮೊದಲ ಟಿ 20 ಪಂದ್ಯದಲ್ಲಿ ಟೀಂ ಇಂಡಿಯಾ ಎಂಟು ವಿಕೆಟ್ ಗಳಿಂದ ಗೆಲುವು ದಾಖಲಿಸಿದ್ದು ಗೊತ್ತೇ ಇದೆ.
ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ನಿಗದಿತ 20 ಓವರ್ ಗಳಲ್ಲಿ ಎಂಟು ವಿಕೆಟ್ ಕಳೆದುಕೊಂಡು 106 ರನ್ ಗಳಿಸಿತು.
ಭಾರತದ ಪರ ಅರ್ಷ್ ದೀಪ್ ಸಿಂಗ್ ಮೂರು ವಿಕೆಟ್ ಪಡೆದರೇ ದೀಪಕ್ ಚಹಾರ್, ಹರ್ಷಲ್ ಪಟೇಲ್ ತಲಾ ಎರಡು ವಿಕೆಟ್ ಪಡೆದರು.

ಪಂದ್ಯ ಗೆಲ್ಲಲು 107 ರನ್ ಗಳ ಗುರಿಯೊಂದಿಗೆ ಕಣಕ್ಕಿಳಿದ ಟೀಂ ಇಂಡಿಯಾ 16.4 ಓವರ್ ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 110 ರನ್ ಗಳಿಸಿ ಜಯದ ನಗೆ ಬೀರಿತು.
ಭಾರತದ ಪರ ಕೆ.ಎಲ್.ರಾಹುಲ್ 51 ರನ್, ಸೂರ್ಯ ಕುಮಾರ್ ಯಾದವ್ 50 ರನ್ ಗಳಿಸಿದರು.
ಈ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದರೂ ಒಂದು ಕೆಟ್ಟ ದಾಖಲೆಯನ್ನು ನಿರ್ಮಿಸಿದೆ.
ಪಿಚ್ ವೇಗಿಗಳಿಗೆ ಸಹಾಯ ಮಾಡಿದ ಕಾರಣ ಟೀಂ ಇಂಡಿಯಾ ಪವರ್ ಪ್ಲೇ ನಲ್ಲಿ ಒಂದು ವಿಕೆಟ್ ಕಳೆದುಕೊಂಡು 17 ರನ್ ಗಳನ್ನು ಮಾತ್ರ ಗಳಿಸಿತು.
ಇದರೊಂದಿಗೆ ಇಲ್ಲಿಯವರೆಗೂ ಅಂತಾರಾಷ್ಟ್ರೀಯ ಟಿ 20 ಕ್ರಿಕೆಟ್ ನ ಪವರ್ ಪ್ಲೇ ನಲ್ಲಿ ಭಾರತ ಗಳಿಸಿದ ಅತ್ಯಲ್ಪ ರನ್ ಇದಾಗಿದೆ.









