ಭಾರತದಲ್ಲಿ ಚರಿತ್ರೆ ಸೃಷ್ಠಿಸಿದ ಕೊರೊನಾ : 4,01,993 ಹೊಸ ಕೇಸ್ ಪತ್ತೆ covid19
ನವದೆಹಲಿ : ಭಾರತದಲ್ಲಿ ಕೊರೊನಾ ಎರಡನೇ ಅಲೆ ಚರಿತ್ರೆ ಸೃಷ್ಠಿಸಿದೆ. ಇವತ್ತು ದೇಶದಲ್ಲಿ ಮತ್ತೊಂದು ದಾಖಲೆ ಮಾಡಿ ಅಬ್ಬರಿಸಿದೆ.
ಇಂದು ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ ದಾಖಲೆಯ 4,01,993 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಬರೋಬ್ಬರಿ 3523 ಮಂದಿ ಸಾವನ್ನಪ್ಪಿದ್ದಾರೆ.
ಇದರೊಂದಿಗೆ ದೇಶದಲ್ಲಿ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 1,91,64,969ಕ್ಕೆ ಸಾವಿನ ಸಂಖ್ಯೆ 2,11,853ಕ್ಕೆ ಬಂದು ನಿಂತಿದೆ.
ಈ ನಡುವೆ ಕಳೆದ 24 ಗಂಟೆಗಳಲ್ಲಿ 2,99,988 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ ಒಟ್ಟಾರೆ 1,56,84,406 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
ದೇಶದಲ್ಲಿನ್ನೂ 32,68,710 ಸಕ್ರಿಯ ಪ್ರಕರಣಗಳಿವೆ.