ಮುಂದುವರೆದ ಕೊರೊನಾ ಆರ್ಭಟ : ನಿನ್ನೆ 4,14,188 ಸೋಂಕಿತರು ಪತ್ತೆ

1 min read
Covid19 positive woman suicide

ಮುಂದುವರೆದ ಕೊರೊನಾ ಆರ್ಭಟ : ನಿನ್ನೆ 4,14,188 ಸೋಂಕಿತರು ಪತ್ತೆ

ನವದೆಹಲಿ : ಭಾರತದಲ್ಲಿ ಕೊರೊನಾ ಎರಡನೇ ಅಲೆಯ ಆರ್ಭಟ ಮುಂದುವರೆದಿದೆ.

ದೇಶದ್ಯಾಂತ ಕಳೆದ 24 ಗಂಟೆಗಳ ಅವಧಿಯಲ್ಲಿ ಮತ್ತೆ ಹೊಸದಾಗಿ 4,14,188 ಸೋಂಕಿತರು ಪತ್ತೆಯಾಗಿದ್ದು, 3,915 ಜನರು ಕೊನೆಯುಸಿರೆಳೆದಿದ್ದಾರೆ.

ಇದರೊಂದಿಗೆ ದೇಶದಲ್ಲಿ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 2,14,91,598ಕ್ಕೆ ಒಟ್ಟು 2,34,083 ಮಂದಿ ಬಲಿಯಾಗಿದ್ದಾರೆ.

india

ನಿನ್ನೆ ಒಂದೇ ದಿನ 3,31,507 ಸೋಂಕಿತರು ಗುಣಮುಖರಾಗಿದ್ದು, ಇಲ್ಲಿಯವರೆಗೆ 1,76,12,351 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ಇನ್ನು 2.14 ಕೋಟಿ ಪ್ರಕರಣಗಳ ಪೈಕಿ 36,45,164 ಕೇಸ್ ಗಳು ಸಕ್ರಿಯವಾಗಿವೆ.

ಜನವರಿ 16 ರಿಂದ ದೇಶಾದ್ಯಂತ ಕೋವಿಡ್ ವ್ಯಾಕ್ಸಿನೇಷನ್ ಡ್ರೈವ್ ಆರಂಭವಾಗಿದ್ದು, ಗುರುವಾರದವರೆಗೆ ಒಟ್ಟು 16,49,73,058 ಮಂದಿಗೆ ಲಸಿಕೆ ನೀಡಲಾಗಿದೆ.

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd