ಪಾಕಿಸ್ತಾನಕ್ಕೆ ಭಾರತ ನೆರವು : 45 ಮಿಲಿಯನ್ ಡೋಸ್ ಕೋವಿಡ್ ಲಸಿಕೆ ಪೂರೈಕೆ..!

1 min read

ಪಾಕಿಸ್ತಾನಕ್ಕೆ ಭಾರತ ನೆರವು : 45 ಮಿಲಿಯನ್ ಡೋಸ್ ಕೋವಿಡ್ ಲಸಿಕೆ ಪೂರೈಕೆ..!

ನವದೆಹಲಿ : ಭಾರತದ ವಿರುದ್ಧ ಪಾಕಿಸ್ತಾನ ಎಷ್ಟೇ ಕತ್ತಿ ಮಸೆದ್ರೂ ಕಷ್ಟ ಕಾಲದಲ್ಲಿ ಪಾಕಿಸ್ತಾನಕ್ಕೆ ಭಾರತವೇ ಸಹಾಯ ಮಾಡ್ತಿದೆ. ಹೌದು  ಭಾರತದಲ್ಲಿ ತಯಾರಾದ 45 ಮಿಲಿಯನ್ ಮೇಡ್ ಇನ್ ಕೋವಿಡ್ ಲಸಿಕೆಗಳನ್ನು ಪಾಕಿಸ್ತಾನಕ್ಕೆ ಪೂರೈಕೆ ಮಾಡಲಾಗ್ತಿದೆ.

ಅಂದ್ಹಾಗೆ ಭಾರತವು ಪಾಕಿಸ್ತಾನಕ್ಕೆ ನೇರವಾಗಿ ಲಸಿಕೆಗಳನ್ನು ಪೂರೈಸುತ್ತಿಲ್ಲ. ಯುನೈಟೆಡ್ ‘ಗವಿ’ ಅಲೈಯನ್ಸ್ ಅಡಿಯಲ್ಲಿ ಈ ಲಸಿಕೆಗಳನ್ನ ಪೂರೈಕೆ ಮಾಡಲಾಗ್ತಿದೆ ಎಂದು ಎಂದು ಪಾಕಿಸ್ತಾನದ ರಾಷ್ಟ್ರೀಯ ಆರೋಗ್ಯ ಸೇವೆಗಳು, ನಿಯಂತ್ರಣ ಮತ್ತು ಸಮನ್ವಯಗಳ ಸಂಯುಕ್ತ ಕಾರ್ಯದರ್ಶಿ ಆಮೀರ್ ಅಶ್ರಫ್ ಖವಾಜಾ ಅವರು ಸಾರ್ವಜನಿಕ ಲೆಕ್ಕ ಸಮಿತಿಗೆ ಮಾಹಿತಿ ನೀಡಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ : ಇಂದು ನಾಮಪತ್ರ ಸಲ್ಲಿಸಿದ ದೀದಿ..!  

ಲಸಿಕೆ ಮೈತ್ರಿಕೂಟವಾದ ‘ಗವಿ ಅಲೈಯನ್ಸ್’, ಮಾರಕ ಹಾಗೂ ಅಪಾಯಕಾರಿ ಸಾಂಕ್ರಾಮಿಕ ಕಾಯಿಲೆಗಳಿಂದ ಜಗತ್ತಿನ ಸುಮಾರು ಅರ್ಧದಷ್ಟು ಮಕ್ಕಳನ್ನು ರಕ್ಷಿಸಲು ಲಸಿಕೆ ನೀಡಲು ನೆರವು ನೀಡುತ್ತಿದೆ. ಭಾರತದ ಸೆರಮ್ ಇನ್‌ಸ್ಟಿಟ್ಯೂಟ್ ತಯಾರಿಸಿದ ಕೋವಿಶೀಲ್ಡ್ ಲಸಿಕೆಯ ಒಟ್ಟು 45 ಮಿಲಿಯನ್ ಡೋಸ್‌ಗಳು ಪಾಕಿಸ್ತಾನಕ್ಕೆ ತಲುಪಲಿವೆ. ಅದರಲ್ಲಿ 16 ಮಿಲಿಯನ್ ಡೋಸ್‌ ಗಳು ಈ ಜೂನ್‌ ವರೆಗೂ ಪೂರೈಕೆಯಾಗಲಿವೆ ಎಂದು ತಿಳಿಸಿದ್ದಾರೆ.  2020ರ ಸೆಪ್ಟೆಂಬರ್‌ನಲ್ಲಿ ಪಾಕಿಸ್ತಾನದೊಂದಿಗೆ ಮಾಡಿಕೊಳ್ಳಲಾದ ಕೋವಿಡ್ ಲಸಿಕೆ ನೆರವು ಒದಗಿಸುವ ಗವಿ ಒಪ್ಪಂದಕ್ಕೆ ಅನುಗುಣವಾಗಿ ಈ ಲಸಿಕೆಗಳ ನೆರವು ನೀಡಲಾಗುತ್ತಿದೆ.

ದೆಹಲಿ ಜನರಿಗಾಗಿ ‘ರಾಮರಾಜ್ಯ’ದ 10 ತತ್ವಗಳ ಪಾಲನೆ ಮಾಡಲಿದ್ದಾರಂತೆ ಕೇಜ್ರಿವಾಲ್..!  

ಮಹಿಳೆಯ ಮೇಲೆ ಹಲ್ಲೆ ನಡೆಸಿದ ZOMATO ಡಿಲೆವರಿ ಬಾಯ್..! ಮಹಿಳೆ ಕಣ್ಣೀರು – VIDEO VIRAL

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd