ರಾಂಚಿಯಲ್ಲಿ ರೋರಾ ಜೋಡಿ ಅಬ್ಬರ : ಭಾರತಕ್ಕೆ ಸರಣಿ

1 min read
india saaksha tv

ರಾಂಚಿಯಲ್ಲಿ ರೋರಾ ಜೋಡಿ ಅಬ್ಬರ : ಭಾರತಕ್ಕೆ ಸರಣಿ

ರಾಂಚಿಯಲ್ಲಿ ಟೀಮ್ ಇಂಡಿಯಾ ಮೊದಲ ಪಂದ್ಯದಲ್ಲಿ ಮಾಡಿದ ಎಲ್ಲಾ ತಪ್ಪುಗಳನ್ನು ತಿದ್ದುಕೊಂಡು ಆಟ ಆಡಿತು.

ಬೌಲಿಂಗ್ನಲ್ಲಿ ನಿಖರತೆ ಹಾಗೂ ಹಾಗೂ ಬ್ಯಾಟಿಂಗ್ನಲ್ಲಿ ಬೊಂಬಾಟ್ ಆಟ ಅಡಿದ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿತು.

ಟಾಸ್ ಗೆದ್ದ ಟೀಮ್ ಇಂಡಿಯಾ ಫೀಲ್ಡಿಂಗ್ ಆರಿಸಿಕೊಂಡಿತು. ಅಬ್ಬರದ ಮೂಡ್ನಲ್ಲಿದ್ದ ಮಾರ್ಟಿನ್ ಗಪ್ಟಿಲ್ ಕೇವಲ 15 ಎಸೆತಗಳಲ್ಲಿ 31 ರನ್ ಚಚ್ಚಿದ್ದಾಗ ಟೀಮ್ ಇಂಡಿಯಾ ಪಾಳಯದಲ್ಲಿ ಆತಂಕವಿತ್ತು.

ಆದರೆ ದೀಪಕ್ ಚಹರ್ ಬ್ರೇಕ್ ಒದಗಿಸಿಕೊಟ್ಟರು. ಮಾರ್ಕ್ ಚಾಪ್ ಮನ್ (21 ರನ್)ಆಟಕ್ಕೆ ಕುದುರಿಕೊಳ್ಳುವ ಮುನ್ನವೇ ಅಕ್ಸರ್ ಪಟೇಲ್ ಪವೆಲಿಯನ್ ಹಾದಿ ತೋರಿಸಿದರು.

india saaksha tv

ಡೆರಿಲ್ ಮಿಚೆಲ್ (31 ರನ್) ಮತ್ತು ಗ್ಲೆನ್ ಫಿಲಿಫ್ಸ್ (34 ರನ್)ಅಪಾಯಕಾರಿ ಆಗುತ್ತಿದ್ದಾಗಲೇ ಔಟಾದರು. ಸ್ಲಾಗ್ ಓವರುಗಳಲ್ಲಿ ಟೀಮ್ ಇಂಡಿಯಾ ಬೌಲರ್ಗಳು ಹಿಡಿತ ಸಾಧಿಸಿದರು.

20 ಓವರುಗಳಲ್ಲಿ ನ್ಯೂಜಿಲೆಂಡ್ 6 ವಿಕೆಟ್ ಕಳೆದುಕೊಂಡು 153 ರನ್ಗಳಿಸಿತು.

ಚೇಸಿಂಗ್ ಆರಂಭಿಸಿದ ಟೀಮ್ ಇಂಡಿಯಾಕ್ಕೆ ಭರ್ಜರಿ ಆರಂಭ ಸಿಕ್ಕಿತು. ರೋಹಿತ್ ಮತ್ತು ರಾಹುಲ್ ಕಿವೀಸ್ ಬೌಲರ್ಗಳನ್ನು ಚಿಂದಿ ಉಡಾಯಿಸಿದರು.

ಈ ಜೋಡಿ 117 ರನ್ಗಳ ಜೊತೆಯಾಟ ಆಡಿತು. ರಾಹುಲ್ 65 ರನ್ಗಳಿಸಿ ಔಟಾದರೆ, ರೋಹಿತ್ 55 ರನ್ಗಳಿಸಿದರು.

ಸೂರ್ಯ ಕುಮಾರ್ ಯಾದವ್ ಬೇಗನೆ ಔಟಾದರು. ಆದರೆ ವೆಂಕಟೇಶ್ ಅಯ್ಯರ್ (ಅಜೇಯ 12 ರನ್)ಮತ್ತು ರಿಷಬ್ ಪಂತ್ ಕೊನೆಯಲ್ಲಿ ಸತತ ಎರಡು ಸಿಕ್ಸರ್ ಸಿಡಿಸಿ ಟೀಮ್ ಇಂಡಿಯಾಕ್ಕೆ ಗೆಲುವು ತಂದುಕೊಟ್ಟರು. ಟೀಮ್ ಇಂಡಿಯಾ 17.2 ಓವರುಗಳಲ್ಲಿ ಗುರಿ ಮುಟ್ಟಿ ಸರಣಿ ಗೆಲುವಿನ ಸಂಭ್ರಮ ಆಚರಿಸಿಕೊಂಡಿತು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd