ಐಸಿಸಿ ಟಿ-ಟ್ವೆಂಟಿ ಕ್ರಿಕೆಟ್‍ಗೆ ಸೂರ್ಯ ಕುಮಾರ್, ಇಶಾನ್ ಕಿಶನ್ ಎಂಟ್ರಿ.. ಭಾರತಕ್ಕೆ ಇಂಗ್ಲೆಂಡ್ ನೀಡಿದ್ದ ಸವಾಲು 165 ರನ್..!

1 min read
surya kumar yadav ishan kishan team india saakshatv

ಐಸಿಸಿ ಟಿ-ಟ್ವೆಂಟಿ ಕ್ರಿಕೆಟ್‍ಗೆ ಸೂರ್ಯ ಕುಮಾರ್, ಇಶಾನ್ ಕಿಶನ್ ಎಂಟ್ರಿ.. ಭಾರತಕ್ಕೆ ಇಂಗ್ಲೆಂಡ್ ನೀಡಿದ್ದ ಸವಾಲು 165 ರನ್..!

India vs England, 2nd T20-Narendra Modi Stadium

bhuvaneshwar team india saakshatvಇಂಗ್ಲೆಂಡ್ ವಿರುದ್ಧದ ಎರಡನೇ ಟಿ-ಟ್ವೆಂಟಿ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಇಬ್ಬರು ಯುವ ಕ್ರಿಕೆಟಿಗರು ಅಂತಾರಾಷ್ಟ್ರಿಯ ಟಿ-ಟ್ವೆಂಟಿ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ರು.
ಮುಂಬೈನ ಸ್ಪೋಟಕ ಬ್ಯಾಟ್ಸ್ ಮೆನ್ ಗಳಾದ ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್‍ಗೆ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಕ್ಯಾಪ್ ನೀಡಿ ಅಂತಾರಾಷ್ಟ್ರಿಯ ಕ್ರಿಕೆಟ್‍ಗೆ ಬರಮಾಡಿಕೊಂಡ್ರು. ಶಿಖರ್ ಧವನ್ ಮತ್ತು ಅಕ್ಸರ್ ಪಟೇಲ್‍ಗೆ ಈ ವಿಶ್ರಾಂತಿ ನೀಡಲಾಗಿತ್ತು.
ನಂತರ ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಮೊದಲು ಇಂಗ್ಲೆಂಡ್ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತ್ತು.

India vs England, 2nd T20-Narendra Modi Stadium
ಇಂಗ್ಲೆಂಡ್ ನ ಆರಂಭಿಕ ಜೋಸ್ ಬಟ್ಲರ್ ಅವರನ್ನು ಪಂದ್ಯದ ಮೊದಲ ಓವರ್ ನಲ್ಲೇ ಭುವನೇಶ್ವರ್ ಕುಮಾರ್ ಎಲ್ ಬಿ ಬಲೆಗೆ ಬೀಳಿಸಿದ್ರು.
ನಂತರ ಜೇಸನ್ ರಾಯ್ ಮತ್ತು ಡೇವಿಡ್ ಮಲಾನ್ ಎರಡನೇ ವಿಕೆಟ್ ಗಎ 64 ರನ್ ಪೇರಿಸಿದ್ರು ಈ ಹಂತದಲ್ಲಿ ಡೇವಿಡ್ ಮಲಾನ್ 24 ರನ್ ಗಳಿಸಿ ಯುಜುವೇಂದ್ರ ಚಾಹಲ್‍ಗೆ ವಿಕೆಟ್ ಒಪ್ಪಿಸಿದ್ರು. ಹಾಗೇ 46 ರನ್ ಗಳಿಸಿದ್ದ ಜೇಸನ್ ರಾಯ್ ಕೂಡ ಸುಂದರ್ ವಾಷಿಂಗ್ಟನ್‍ಗೆ ಬಲಿಯಾದ್ರು.
bhuvaneshwar team indiaಇನ್ನು ಜಾನಿ ಬೇರ್ ಸ್ಟೊವ್ 20 ರನ್ ಗಳಿಸಿದ್ರೆ, ನಾಯಕ ಇಯಾನ್ ಮೊರ್ಗಾನ್ 28 ರನ್‍ಗೆ ತನ್ನ ಹೊರಾಟವನ್ನು ಕೊನೆಗೊಳಿಸಿದ್ರು.
ಕೊನೆಯ ಕ್ಷಣಗಳಲ್ಲಿ ಬೆನ್ ಸ್ಟೋಕ್ ಮಿಂಚಿನ 24ರನ್ ಸಿಡಿಸಿದ್ರು. ಅಂತಿಮವಾಗಿ ಇಂಗ್ಲೆಂಡ್ ನ ನಿಗದಿತ 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತ್ತು.
ಟೀಮ್ ಇಂಡಿಯಾ ಪರ ವಾಷಿಂಗ್ಟನ್ ಸುಂದರ್ ಮತ್ತು ಶಾರ್ದೂಲ್ ಥಾಕೂರ್ ತಲಾ ಎರಡು ವಿಕೆಟ್ ಪಡೆದ್ರೆ, ಭುವನೇಶ್ವರ್ ಕುಮಾರ್ ಮತ್ತು ಚಾಹಲ್ ತಲಾ ಒಂದು ವಿಕೆಟ್ ಉರುಳಿಸಿದ್ರು.

@NarendraModiStadium #Ahmedabad #India #England #2nd T20 #saakshatv #saakshatvsportsnews #teamindia

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd