ಅಶ್ವಿನ್ ಸೂಪರ್ ಸೆಂಚೂರಿ.. ವಿರಾಟ್ ಫಿಫ್ಟಿ : ಇಂಗ್ಲೆಂಡ್ ಗೆ 482 ರನ್ ಗುರಿ
ಚೆನ್ನೈ : ಇಂಗ್ಲೆಂಡ್ ಮತ್ತು ಇಂಡಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಉತ್ತಮ ಸ್ಥಿತಿಯಲ್ಲಿದೆ. ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ 286 ರನ್ ಗೆ ಆಲೌಟ್ ಆಗಿದ್ದು, ಇಂಗ್ಲೆಂಡ್ ಪಂದ್ಯ ಗೆಲ್ಲಲು 482 ರನ್ ಗುರಿ ನೀಡಿದೆ.
ಇಂಗ್ಲೆಂಡ್ ತಂಡವನ್ನು ಮೊದಲ ಇನಿಂಗ್ಸ್ ನಲ್ಲಿ ಕೇವಲ 134 ರನ್ ಗೆ ನಿಯಂತ್ರಿಸಿ 195 ರನ್ ಮುನ್ನಡೆ ಪಡೆದಿದ್ದ ಭಾರತ ಎರಡನೇ ಇನಿಂಗ್ಸ್ ನಲ್ಲಿ 106 ರನ್ ಗೆ 6 ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಈ ಸಂದರ್ಭದಲ್ಲಿ ಜವಾಬ್ದಾರಿಯುತ ಪ್ರದರ್ಶನ ನೀಡಿದ ನಾಯಕ ವಿರಾಟ್ ಕೊಹ್ಲಿ, ಅಶ್ವಿನ್ ಜೊತೆಗೂಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ರು.
ಕೊಹ್ಲಿ ಎಚ್ಚರಿಕೆಯ ಆಟಕ್ಕೆ ಮೊರೆ ಹೋದ್ರೆ ಅಶ್ವಿನ್ ಇಂಗ್ಲೆಂಡ್ ಬೌಲರ್ ಗಳ ಮೇಲೆ ಸವಾರಿ ಮಾಡಿದ್ರು. ತಂಡದ ಮುನ್ನಡೆ ಹೆಚ್ಚಿಸಲು ನೆರವಾದ ಅಶ್ವಿನ್ ಟೆಸ್ಟ್ ಕ್ರಿಕೆಟ್ ನಲ್ಲಿ 5ನೇ ಶತಕ ಸಿಡಿಸಿದರು.
134 ಎಸೆತಗಳಲ್ಲಿ ಅಶ್ವಿನ್ ಶತಕ ಪೂರೈಸಿದರು. ಅಶ್ವಿನ್ 3ನೇ ಬಾರಿ ಒಂದೇ ಟೆಸ್ಟ್ ನಲ್ಲಿ 5 ವಿಕೆಟ್ ಗೊಂಚಲು ಪಡೆದು, ಶತಕ ಸಿಡಿಸಿದ ಸಾಧನೆ ಮಾಡಿದರು.
ಆರಂಭಿಕ ಆಘಾತಕ್ಕೆ ಒಳಗಾಗಿದ್ದರೂ ನಾಯಕ ಕೊಹ್ಲಿ(62, 149 ಎಸೆತ, 7 ಬೌಂಡರಿ) ಹಾಗೂ ಅಶ್ವಿನ್ 7ನೇ ವಿಕೆಟ್ ಜೊತೆಯಾಟದಲ್ಲಿ 96 ರನ್ ಸೇರಿಸಿದ್ರು.
ಅಂತಿಮವಾಗಿ ಅಶ್ವಿನ್ 106 ರನ್, ಯಾದವ್ 3 ರನ್. ಇಶಾಂತ್ 7 ರನ್, ಸಿರಾಜ್ 16 ರನ್ ಗಳಿಸಿದ್ರು.
ಭಾರತ ಎರಡನೇ ಇನ್ನಿಂಗ್ಸ್ ನಲ್ಲಿ 286 ರನ್ ಗಳಿಗೆ ಆಲೌಟ್ ಆಯ್ತು.. ಈ ಮೂಲಕ ಭಾರತ ಇಂಗ್ಲೆಂಡ್ ಗೆ ಪಂದ್ಯ ಗೆಲ್ಲಲು 482 ರನ್ ಗುರಿ ನೀಡಿದೆ.
ಶ್ರೀ ಕಟೀಲು ದುರ್ಗಾಪರಮೇಶ್ವರೀ ಕ್ಷೇತ್ರ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel