ಇಂಡೋ-ಇಂಗ್ಲೀಷ್ ಫೈನಲ್ ಕದನ: ಸರಣಿ ಗೆಲ್ಲಬೇಕಾದ್ರೆ ಭಾರತ ಮಾಡಬೇಕಾದ್ದೇನು..?
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಪಂದ್ಯ ಅಂದ್ರೆ ಕ್ಲೈಮ್ಯಾಕ್ಸ್ ಇಂದು ನಡೆಯಲಿದೆ. ಈಗಾಗಲೇ ಟೆಸ್ಟ್ ಹಾಗೂ ಟಿ 20 ಸರಣಿ ಕೈವಶ ಮಾಡಿಕೊಂಡಿರುವ ಟೀಂ ಇಂಡಿಯಾ ಇಂದಿನ ಫೈನಲ್ ದಂಗಲ್ ನಲ್ಲಿ ಗೆದ್ದು ಟ್ಯಾಟ್ರಿಕ್ ಸರಣಿ ಗೆಲ್ಲುವ ತವಕದಲ್ಲಿದೆ.
ಸಾಮಾನ್ಯವಾಗಿ ಭಾರತದಲ್ಲಿ ಪಂದ್ಯಗಳೆಂದರೇ ಒನ್ ಸೈಡ್ ಆಗಿರುತ್ತೆ ಅಂತ ಅಂದುಕೊಂಡಿದ್ರು. ಆದ್ರೆ ಆಂಗ್ಲರ ಆಟ ನಿಜಕ್ಕೂ ಪ್ರಶಂಸನೀಯ. ಹೀಗಾಗಿಯೇ ಪ್ರತಿ ಪಂದ್ಯ ಭಾರಿ ಜಿದ್ದಾಜಿದ್ದಿನಿಂದ ನಡೆದಿದೆ. ಇಂದಿನ ಪಂದ್ಯದಲ್ಲೂ ಇದನ್ನ ನಾವು ನಿರೀಕ್ಷೆ ಮಾಡಬಹುದು.
ಇನ್ನ ನಾವು ಈಗಾಗಲೇ ಎರಡು ಸರಣಿಗಳನ್ನ ಗೆದ್ದು ಬೀಗಿದ್ದೇವೆ.. ಆದ್ರೆ ಇಂದಿನ ಪಂದ್ಯ ಗೆದ್ದು ಇಂಗ್ಲೆಂಡ್ ಕನಿಷ್ಟ ಒಂದು ಟ್ರೋಫಿಯನ್ನಾದ್ರೂ ತವರಿಗೆ ತೆಗೆದುಕೊಂಡೋಗುತ್ತಾ..? ಅಥವಾ ಇಂಡಿಯಾ ಸರಣಿ ವಶಪಡಿಸಿಕೊಳ್ಳುತ್ತಾ ಅನ್ನೋ ಪ್ರಶ್ನೆಗಳಿಗೆ ಇಂದು ಉತ್ತರ ಸಿಗಲಿದೆ.
ಅಂದಹಾಗೆ ಕಳೆದ ಪಂದ್ಯದಲ್ಲಿ ಇಂಗ್ಲೆಂಡ್ ಆಟ ನೋಡಿದ್ರೆ ಎಲ್ಲೋ ಒಂದು ಕಡೆ ಅವರೇ ಸರಣಿ ಗೆಲ್ಲಬಹುದು.. ಅಷ್ಟು ಸುಲಭವಾಗಿ ಇಂಗ್ಲೆಂಡ್ ಕಳೆದ ಮ್ಯಾಚ್ ನಲ್ಲಿ ಗೆಲುವಿನ ಕೇಕೆ ಹಾಕಿದೆ.
ಇತ್ತ ಟೀಂ ಇಂಡಿಯಾ ವಿಚಾರಕ್ಕೆ ಬಂದ್ರೆ… ಸ್ಲೋ ನೆಸ್ ಇನ್ ದ ಮಿಡಲ್ ಓವರ್ಸ್.. ಬೌಲಿಂಗ್ ಪ್ರಾಬ್ಲಂ.. ಮುಖ್ಯವಾಗಿ ಟಾಸ್ ಸೋಲುತ್ತಿರುವುದು..!
ವಿರಾಟ್ ಕೊಹ್ಲಿ ಕಳೆದೆರಡೂ ಪಂದ್ಯಗಳಿಂದ ಟಾಸ್ ಸೋತಿದ್ದಾರೆ.. ಟಾಸ್ ವಿನ್ ಆಗೋದು ಅತೀ ಮುಖ್ಯ ಯಾಕೆಂದ್ರೆ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ್ರೆ ಪಿಚ್ ಬೌಲರ್ ಗಳಿಗೆ ಸಹಕರಿಸುತ್ತೆ. ಆದ್ರೆ ಸೆಕೆಂಡ್ ಬೌಲಿಂಗ್ ಮಾಡಿದ್ರೆ ಪಿಚ್ ಸಂಪೂರ್ಣವಾಗಿ ಬ್ಯಾಟಿಂಗ್ ಮಯವಾಗಿರುತ್ತೆ. ನಾವು ಅದನ್ನ ಕಳೆದೆರೆಡು ಪಂದ್ಯಗಳಲ್ಲಿ ನೋಡಿದ್ದೇವೆ.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ್ರೆ ಇಂಡಿಯಾಗೆ ಇನ್ನೋದು ಅಡ್ವಾಂಟೇಜ್ ಇದೆ. ಅದೇನು ಅಂದ್ರೆ ನಮ್ಮಲ್ಲಿ ಜೇಸಿಂಗ್ ಮಾಸ್ಟರ್ ಗಳೇ ಇದ್ದಾರೆ.
ಇದಲ್ಲದೆ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಬ್ಲಾಸ್ಟ್ ಆಗಲೇಬೇಕು. ಕಳೆದೆರೆಡು ಪಂದ್ಯಗಳಲ್ಲಿ ರೋಹಿತ್ ಬ್ಯಾಟ್ ಸದ್ದು ಮಾಡೇ ಇಲ್ಲ. ಬ್ಯಾಟಿಂಗ್ ಪಿಚ್ ನಲ್ಲಿ ರೋಹಿತ್ ಶರ್ಮಾ ಅಬ್ಬರಿಸಿದ್ರೆ ಟೀಂ ಇಂಡಿಯಾ ಗೆಲ್ಲೋದು ಇನ್ನಷ್ಟು ಸುಲಭವಾಗಿರುತ್ತೆ. ಇದರ ಜೊತೆಗೆ ವಿರಾಟ್ ಕೊಹ್ಲಿ ಫೈಯರ್ ಆದ್ರೆ ಆಂಗ್ಲರು ದಿಕ್ಕಾಪಾಲಾಗೋದು ಗ್ಯಾರೆಂಟಿ..!
ಕೊನೆದಾಗಿ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಮಾಡಲೇಬೇಕಿದೆ.
ಅದರಲ್ಲೂ ಸ್ಪಿನ್ನರ್ ವಿಭಾಗದಲ್ಲಿ ನಾವು ತುಂಬಾ ವೀಕ್ ಆಗಿದ್ದೀವಿ ಅನ್ನೋದನ್ನ ಸಾರಿ ಹೇಳ್ತಿದೆ. ಕಳೆದೆರಡೂ ಪಂದ್ಯಗಳಲ್ಲೂ ಕೃನಾಲ್, ಯಾದವ್ ಬರೋಬ್ಬರಿ 280 ರನ್ ಗಳನ್ನ ಬಿಟ್ಟುಕೊಟ್ಟಿದ್ದಾರೆ. ಕೇವಲ ಸ್ಪೀನ್ ಬೌಲಿಂಗ್ ನಿಂದಲೇ ಮ್ಯಾಚ್ ಗಳನ್ನ ಗೆಲ್ಲುತ್ತಿದ್ದ ಭಾರತಕ್ಕೆ ಈಗಿನ ಸ್ಪಿನ್ನರ್ ಗಳು ತಲೆ ನೋವಾಗಿದ್ದಾರೆ. ಹೀಗಾಗಿ ಸ್ಪಿನ್ ವಿಭಾಗದಲ್ಲಿ ಬದಲಾವಣೆ ಮಾಡಲೇಬೇಕಾಗಿದೆ. ಚಹಾಲ್ ಅಥವಾ ಸುಂದರ್ ಗೆ ಈ ಪಂದ್ಯದಲ್ಲಿ ಚಾನ್ಸ್ ಸಿಗುವ ಸಾಧ್ಯತೆಗಳು ಹೆಚ್ಚಿದೆ. ಇದಲ್ಲದೆ ಭಾರತಕ್ಕೆ ಸಿಕ್ಸ್ತ್ ಬೌಲರ್ ನ ಅವಶ್ಯಕತೆ ಕೂಡ ಇದೆ.
ಒಟ್ಟಾರೆ ಸರಣಿ ಈಗಾಗಲೇ 1-1 ಅಂತರದಿಂದ ಸಮಬಲಗೊಂಡಿರುವ ಕಾರಣ ಫೈನಲ್? ಪಂದ್ಯ ರೋಚಕತೆಯಿಂದ ಕೂಡಿದೆ.
