India vs England 3rd Test: `ಮಹಾ’ ಸಮರಕ್ಕೆ ಟೀಂ ಇಂಡಿಯಾ ಸಜ್ಜು
ಸಬರಮತಿ ತೀರದಲ್ಲಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಒಂದು ಹೊಸ ಪ್ರಪಂಚಕ್ಕೆ ಹೋಗಲಿದ್ದಾರೆ. ಕಣ್ಣು ಕುಕ್ಕೋ ಅದ್ದೂರಿತನ.. ಅದ್ಭುತ ವಾಸ್ತುಶಿಲ್ಪ, ಹೊಸದಾಗಿ ಕಾಣುವ ಎಲ್‍ಇಡಿ ದೀಪಗಳ ಬೆಳಕು. ಇದಕ್ಕೆ ಜೊತೆಯಾಗುವ ಗುಲಾಬಿ ಚೆಂಡು. ಸುಮಾರು 55 ಸಾವಿರ ಪ್ರೇಕ್ಷಕರರೊಂದಿಗೆ ಮೊಟೆರಾ ಅಂಗಳ ಕೇಕೆ ಹಾಕಲಿದೆ. ಹೊಸದಾಗಿ ನವೀಕರಿಸಿದ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ಮೂರನೇ ಟೆಸ್ಟ್ ಪಂದ್ಯ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಒಂದು ಮಹತ್ವದ ಕ್ಷಣವಾಗಲಿದೆ.
ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನವಾದ ಅಹಮದಾಬಾದ್ ವೇದಿಕೆ ಭೀಕರ ಮಹಾ ಕ್ರಿಕೆಟ್ ಯುದ್ಧಕ್ಕೆ ಸಜ್ಜಾಗಿದೆ. ಈ ಪಂದ್ಯವನ್ನು ಗೆದ್ದರೆ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನ ಫೈನಲ್ ಗೆ ತಲುಪಲಿದೆ.
ಸರಣಿಯ ಮೂರನೇ ಟೆಸ್ಟ್ ಪಂದ್ಯ ಗೆಲ್ಲಲು ಇಂಗ್ಲೆಂಡ್‍ಗೆ ಉತ್ತಮ ಅವಕಾಶಗಳಿವೆ ಎಂದು ಅನೇಕ ವಿಶ್ಲೇಷಕರು ಮತ್ತು ಮಾಜಿ ಕ್ರಿಕೆಟರ್ ಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಇದು ಡೇ ಅಂಡ್ ನೈಲ್ ಮತ್ತು ಪಿಂಕ್ ಬಾಲ್ ಪಂದ್ಯವಾಗಿರುವುದು ಸ್ವಿಂಗ್ ಮಾಡಲು ಅನುಕೂಲಕರ ಪರಿಸ್ಥಿತಿಗಳಿವೆ. ಆದರೆ, ಚೆನ್ನೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವು ಸಾಧಿಸಿದ್ರೆ, ಎರಡನೇ ಪಂದ್ಯದಲ್ಲಿ ಭಾರತಕ್ಕೆ ಇಂಗ್ಲೆಂಡ್ ಗೆ ಟಕ್ಕರ್ ನೀಡ್ತು. ಇದರಿಂದ ಟೀಂ ಇಂಡಿಯಾ ಆತ್ಮವಿಶ್ವಾಸದಲ್ಲಿದೆ. ಇತ್ತ ಹೀನಾಯ ಸೋಲುಂಡಿರುವ ಇಂಗ್ಲೆಂಡ್ ಒತ್ತಡಕ್ಕೆ ಒಳಗಾಗಿದೆ.
ಈ ಹಿನ್ನೆಲೆ ಉಭಯ ತಂಡಗಳು ಈ ಪಂದ್ಯವನ್ನು ಗೆಲ್ಲಲೇಬೇಕು ಎಂದು ಕಸರತ್ತು ನಡೆಸಿವೆ.
ಇದು ಭಾರತದ ನೆಲದಲ್ಲಿ ಎರಡನೇ ಹಗಲು ಮತ್ತು ರಾತ್ರಿ ಟೆಸ್ಟ್ ಮತ್ತು ಒಟ್ಟಾರೆ ಟೀಮ್ ಇಂಡಿಯಾಕ್ಕೆ ಮೂರನೇ ಪಂದ್ಯವಾಗಿದೆ. ಭಾರತದ ಅಧ್ಯಕ್ಷ ರಾಮ್ ನಾಥ್ ಕೋವಿಂದ್ ಅವರು ಬುಧವಾರ ಅಧಿಕೃತವಾಗಿ ಕ್ರೀಡಾಂಗಣವನ್ನು ಉದ್ಘಾಟಿಸಲಿದ್ದಾರೆ.
ಬೂಮ್ರಾ ಅಖಾಡಕ್ಕೆ
ಎರಡನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಜಯಗಳಿಸಿದ ಭಾರತ ತಂಡವೂ ಇದೇ ವೇಗವನ್ನು ಮುಂದುವರೆಸುವ ಭರವಸೆ ಹೊಂದಿದೆ. ಕಳೆದ ಪಂದ್ಯದಲ್ಲಿ ಬೂಮ್ರಾಗೆ ವಿಶ್ರಾಂತಿ ನೀಡಿ ಸಿರಾಜ್ ಅವರಿಗೆ ಅವಕಾಶ ನೀಡಲಾಗಿತ್ತು. ಆದ್ರೆ ಈ ಪಂದ್ಯದಲ್ಲಿ ಮತ್ತೆ ಬೂಮ್ರಾ ಆಡುವ ಸಾದ್ಯತೆಗಳಿವೆ.
ವಿಶೇಷ ಅಂದ್ರೆ ಚೆನ್ನೈನಲ್ಲಿ ಎರಡನೇ ಪಂದ್ಯ ಮುಗಿಯುತ್ತಿದ್ದಂತೆ ಬೂಮ್ರಾ ನೆಟ್ ನಲ್ಲಿ ಪಿಂಕ್ ಬಾಲ್ ನಲ್ಲಿ ಪ್ರಾಕ್ಟಿಸ್ ಆರಂಭಿಸಿದ್ದರು. ಇದಲ್ಲದೇ ಕುಲದೀಪ್ ಅವರಿಗೆ ವಿಶ್ರಾಂತಿ ನೀಡಿ ಉಮೇಶ್ ಯಾದವ್ ಅವರಿಗೆ ಮೂರನೇ ಬೌಲರ್ ಆಗಿ ಚಾನ್ಸ್ ನೀಡುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗುತ್ತಿದೆ.
ಅಂದಾಜು ತಂಡ
ಭಾರತ: ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಗಿಲ್, ಪೂಜಾರ, ರಹಾನೆ, ಪಂತ್ (ವಿಕೆಟ್ ಕೀಪರ್), ಅಶ್ವಿನ್, ಅಕ್ಷರ್ ಪಟೇಲ್, ಇಶಾಂತ್ ಶರ್ಮಾ, ಬುಮ್ರಾ, ಉಮೇಶ್.
ಇಂಗ್ಲೆಂಡ್: ರೂಟ್ (ನಾಯಕ), ಸಿಬ್ಲಿ, ಕ್ರಾಲೆ, ಬೈರ್‍ಸ್ಟೋವ್, ಸ್ಟೋಕ್ಸ್, ಪೋಪ್, ಫಾಕ್ಸ್ (ವಿಕೆಟ್‍ಕೀಪರ್), ಬೆಸ್ / ವೋಕ್ಸ್, ಆರ್ಚರ್, ಲೀಚ್, ಆಂಡರ್ಸನ್.
