ಭಾರತ ಇಂಗ್ಲೆಂಡ್ ಟೆಸ್ಟ್ – ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬೆನ್ ಸ್ಟೋಕ್…
ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಟೆಸ್ಟ್ಗಳ ಸರಣಿಯ ಕೊನೆಯ ಪಂದ್ಯ ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಪಂದ್ಯದಲ್ಲಿ ರೋಹಿತ್ ಶರ್ಮಾ ಬದಲಿಗೆ ಚೇತೇಶ್ವರ ಪೂಜಾರ್ ಬ್ಯಾಟಿಂಗ್ ಓಪನಿಂಗ್ ಬ್ಯಾಟಿಂಗ್ ಗೆ ಇಳಿದಿದ್ದಾರೆ. ಶುಭಮನ್ ಗಿಲ್ ಅವರೊಂದಿಗೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಉಭಯ ತಂಡಗಳು ಇಂತಿವೆ-
ಇಂಗ್ಲೆಂಡ್ – ಅಲೆಕ್ಸ್ ಲೀಸ್, ಜ್ಯಾಕ್ ಕ್ರೌಲಿ, ಆಲಿ ಪೋಪ್, ಜೋ ರೂಟ್, ಜಾನಿ ಬೈರ್ಸ್ಟೋ, ಬೆನ್ ಸ್ಟೋಕ್ಸ್, ಸ್ಯಾಮ್ ಬಿಲ್ಲಿಂಗ್ಸ್, ಮ್ಯಾಥ್ಯೂ ಪಾಟ್ಸ್, ಸ್ಟುವರ್ಟ್ ಬ್ರಾಡ್, ಜ್ಯಾಕ್ ಲೀಚ್, ಜೇಮ್ಸ್ ಆಂಡರ್ಸನ್.
ಭಾರತ: ಶುಭಮನ್ ಗಿಲ್, ಚೇತೇಶ್ವರ ಪೂಜಾರ, ಹನುಮ ವಿಹಾರಿ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಬುಮ್ರಾ.
ಈ ಸರಣಿಯ ನಾಲ್ಕು ಟೆಸ್ಟ್ಗಳನ್ನು ಕಳೆದ ವರ್ಷ ಆಡಲಾಗಿತ್ತು. ನಂತರ ಮ್ಯಾಂಚೆಸ್ಟರ್ನಲ್ಲಿ ನಡೆಯಬೇಕಿದ್ದ ಐದನೇ ಪಂದ್ಯವನ್ನು ಕೊರೊನಾ ಭೀತಿಯಿಂದಾಗಿ ಮುಂದೂಡಲಾಗಿತ್ತು. ಅದೇ ಪಂದ್ಯ 10 ತಿಂಗಳ ನಂತರ ಬರ್ಮಿಂಗ್ ಹ್ಯಾಮ್ ನಲ್ಲಿ ಇಂದಿನಿಂದ ನಡೆಯಲಿದೆ. ಈ ಟೆಸ್ಟ್ನಲ್ಲಿ ಕರೋನಾ ಸೋಂಕಿತ ರೋಹಿತ್ ಶರ್ಮಾ ಬದಲಿಗೆ ಬುಮ್ರಾ ಅವರಿಗೆ ನಾಯಕತ್ವ ನೀಡಲಾಗಿದೆ ಎಂಬುದು ಪ್ರಮುಖ ವಿಷಯವಾಗಿದೆ.