Ind Vs Eng 1st T20 : ಟೀಂ ಇಂಡಿಯಾ – ಇಂಗ್ಲೆಂಡ್ – ಹೆಡ್ ಟು ಹೆಡ್ ರೆಕಾರ್ಡ್
ಟೀಂ ಇಂಡಿಯಾ – ಇಂಗ್ಲೆಂಡ್ ನಡುವೆ ಇಂದಿನಿಂದ ಟಿ 20 ಸರಣಿ ಆರಂಭವಾಗಲಿದೆ.
ಸೌಥಾಂಪ್ಟನ್ ವೇದಿಕೆಯಾಗಿ ಮೊದಲ ಪಂದ್ಯ ನಡೆಯಲಿದೆ.
ಟೀಂ ಇಂಡಿಯಾ ಸಾರಥಿಯಾಗಿರುವ ರೋಹಿತ್ ಶರ್ಮಾಗೆ ಇದು ಮೊದಲ ವಿದೇಶಿ ಪಂದ್ಯ.
ಅಂದ್ರೆ ಅವರು ಇದೇ ಮೊದಲ ಬಾರಿಗೆ ವಿದೇಶದಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ.
ಈ ಪಂದ್ಯದಿಂದ ಹಿರಿಯ ಆಟಗಾರರು ದೂರವಾಗಿದ್ದಾರೆ.
ಹೀಗಾಗಿ ಇಂದಿನ ಪಂದ್ಯದಲ್ಲಿ ಅವರನ್ನ ಹೊರತುಪಡಿಸಿ ಬಲಿಷ್ಠ ತಂಡವನ್ನು ಕಣಕ್ಕಿಳಿಸೋದು ರೋಹಿತ್ ಗೆ ಇರುವ ಮೊದಲ ಸವಾಲಾಗಿದೆ.

ಅಂದಹಾಗೆ ಇಂಗ್ಲೆಂಡ್ ಮತ್ತು ಇಂಡಿಯಾ ನಡುವೆ ಈ ವರೆಗೂ 19 ಟಿ 20 ಪಂದ್ಯಗಳು ನಡೆದಿವೆ.
ಇದರಲ್ಲಿ 10 ಪಂದ್ಯಗಳಲ್ಲಿ ಟೀಂ ಇಂಡಿಯಾಗೆ ಗೆಲುವು ಸಾಧಿಸಿದ್ದು, 9 ರಲ್ಲಿ ಇಂಗ್ಲೆಂಡ್ ಗೆದ್ದಿದೆ.
ಆದ್ರೆ ಇಂಗ್ಲೆಂಡ್ ನೆಲದಲ್ಲಿ ನಡೆದಿರುವ ಆರು ಪಂದ್ಯಗಳಲ್ಲಿ ಟೀಂ ಇಂಡಿಯಾ ನಾಲ್ಕು ಬಾರಿ ಗೆಲುವು ಸಾಧಿಸಿದೆ.
ಎರಡು ಬಾರಿ ಭಾರತ ಗೆದ್ದಿದೆ.
ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್
ರೋಹಿತ್ ಶರ್ಮಾ, ಇಶಾನ್ ಕಿಶನ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಆವೇಶ್ ಖಾನ್, ಯಜುವೇಂದ್ರ ಚಹಾಲ್