ಭಾರತ ಇಂಗ್ಲೆಂಡ್ ಟೆಸ್ಟ್ – ಭಾರತಕ್ಕೆ ಆರಂಭಿಕ ಆಘಾತ; ಪೂಜಾರ ಗಿಲ್ ಔಟ್
ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಟೆಸ್ಟ್‌ಗಳ ಸರಣಿಯ ಕೊನೆಯ ಪಂದ್ಯ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. 20.1 ಓವರ್‌ಗಳ ಆಟದ ನಂತರ ಮಳೆಯಿಂದಾಗಿ ಪಂದ್ಯವನ್ನ ಕೆಲಕಾಲ ಸ್ಥಗಿತಗೊಳಿಸಲಾಗಿದೆ. ವಿರಾಟ್ ಕೊಹ್ಲಿ ಮತ್ತು ಹನುಮ ವಿಹಾರಿ ಕ್ರೀಸ್‌ನಲ್ಲಿದ್ದಾರೆ. 20.1 ಓವರ್‌ಗಳ ನಂತರ ಸ್ಕೋರ್ 53/2.
ರೋಹಿತ್ ಶರ್ಮಾ ಬದಲಿಗೆ ಆರಂಭಿಕನಾಗಿ ಬ್ಯಾಟಿಂಗ್‌ಗೆ ಬಂದ ಚೇತೇಶ್ವರ ಪೂಜಾರ 46 ಎಸೆತಗಳನ್ನ ಎದುರಿಸಿ 13 ರನ್ ಗಳಿಸಿ ಆಂಡರ್ಸನ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದ್ದಾರೆ. ಆಫ್ ಸ್ಟಂಪ್ ಹೊರಗೆ ಹೋಗುತ್ತಿದ್ದ ಬೌಲನ್ನ ಭಾರಿಸಿಲು ಯತ್ನಿಸಿ ಪುಜಾರ ವಿಕೆಟ್ ಒಪ್ಪಿಸಿದ್ದಾರೆ. ಆಂಡರ್ಸನ್ ಇಬ್ಬರೂ ಆರಂಭಿಕ ಬ್ಯಾಟ್ಸಮನ್ ಗಳನ್ನ ಫೆವಿಲಿಯನ್ ಗೆ ಅಟ್ಟಿದ್ದಾರೆ. ಆಂಡರ್ಸನ್ ಈ ಸರಣಿಯಲ್ಲಿ ಪೂಜಾರ ಅವರನ್ನು ಐದು ಬಾರಿ ಔಟ್ ಮಾಡಿದ್ದಾರೆ.
ಈ ಸರಣಿಯ ನಾಲ್ಕು ಟೆಸ್ಟ್‌ಗಳನ್ನು ಕಳೆದ ವರ್ಷ ಆಡಲಾಗಿತ್ತು. ನಂತರ ಮ್ಯಾಂಚೆಸ್ಟರ್‌ನಲ್ಲಿ ನಡೆಯಬೇಕಿದ್ದ ಐದನೇ ಪಂದ್ಯವನ್ನು ಕೊರೊನಾ ಭೀತಿಯಿಂದಾಗಿ ಮುಂದೂಡಲಾಗಿತ್ತು. ಅದೇ ಪಂದ್ಯ 10 ತಿಂಗಳ ನಂತರ ಬರ್ಮಿಂಗ್ ಹ್ಯಾಮ್ ನಲ್ಲಿ ಇಂದಿನಿಂದ ನಡೆಯಲಿದೆ. ಈ ಟೆಸ್ಟ್‌ನಲ್ಲಿ ಕರೋನಾ ಸೋಂಕಿತ ರೋಹಿತ್ ಶರ್ಮಾ ಬದಲಿಗೆ ಬುಮ್ರಾ ಅವರಿಗೆ ನಾಯಕತ್ವ ನೀಡಲಾಗಿದೆ ಎಂಬುದು ಪ್ರಮುಖ ವಿಷಯವಾಗಿದೆ.