India-vs-Ireland-t20 | ಐರ್ಲೆಂಡ್ – ಟೀಂ ಇಂಡಿಯಾ ಮೊದಲ ಟಿ-20 ಮ್ಯಾಚ್..
ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಂ ಇಂಡಿಯಾ ಇಂದು ಐರ್ಲೆಂಡ್ ವಿರುದ್ಧದ ಟಿ 20 ಸರಣಿಯ ಭಾಗವಾಗಿ ಮೊದಲ ಪಂದ್ಯವನ್ನಾಡಲಿದೆ.
ಡಬ್ಲಿನ್ ವೇದಿಕೆಯಾಗಿ ನಡೆಯಲಿರುವ ಈ ಸರಣಿಯ ಎರಡು ಪಂದ್ಯಗಳು ಭಾರತದ ಕಾಲ ಮಾನದ ಪ್ರಕಾರ ರಾತ್ರಿ 9 ಗಂಟೆಗೆ ಪ್ರಾರಂಭವಾಗಲಿದೆ.
ಇದೇ ಮೊದಲ ಬಾರಿಗೆ ಟೀ ಇಂಡಿಯಾದ ನಾಯಕತ್ವದ ಹೊಣೆ ಹೊತ್ತಿರುವ ಹಾರ್ದಿಕ್ ಪಾಂಡ್ಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಯಾಕೆಂದರೆ ಈ ಬಾರಿಯ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಗುಜರಾತ್ ಟೈಟಾನ್ಸ್ ತಂಡ ಚಾಂಪಿಯನ್ ಆಗಿದೆ.
ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ನಾಯಕರಾಗಿ ಹಾರ್ದಿಕ್ ಯಶ ಸಾಧಿಸುತ್ತಾರಾ ಅನ್ನೋದನ್ನ ಕಾದು ನೋಡಬೇಕಾಗಿದೆ.
ಅಂದಹಾಗೆ ಐರ್ಲೆಂಡ್ ಸಿರೀಸ್ ಗೆ ಯಂಗ್ ಇಂಡಿಯಾವನ್ನು ಬಿಸಿಸಿಐ ಸೆಲೆಕ್ಟ್ ಮಾಡಿದ್ದು, ದಿನೇಶ್ ಕಾರ್ತಿಕ್ ಅನುಭವ ತಂಡಕ್ಕೆ ನೆರವಾಗಲಿದೆ.
ಟೀಂ ಇಂಡಿಯಾ ಪರ ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್ ಇನ್ನಿಂಗ್ಸ್ ಆರಂಭಿಸೋದು ಪಕ್ಕಾ. ನಂತರ ಸೂರ್ಯಕುಮಾರ್ ಯಾದವ್, ರಾಹುಲ್ ತ್ರಿಪಾಠಿ, ಹಾರ್ದಿಕ್ ಪಾಂಡ್ಯ ಬ್ಯಾಟ್ ಬೀಸುತ್ತಾರೆ.
ಫಿನಿಷರ್ ಜವಾಬ್ದಾರಿಯನ್ನು ದಿನೇಶ್ ಕಾರ್ತಿಕ್ ನಿಭಾಯಿಸಲಿದ್ದಾರೆ.
ಆಲ್ ರೌಂಡರ್ ಕೋಟಾದಲ್ಲಿ ಅಕ್ಷರ್ ಪಟೇಲ್ ಕಣ್ಣಕಿಳಿಯಬಹುದು.
ವೇಗಿಗಳ ವಿಭಾಗದಲ್ಲಿ ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಆವೇಶ್ ಖಾನ್ ಸ್ಥಾನ ಪಡೆಯಬಹುದು. ಸ್ಪಿನ್ನರ್ ಆಗಿ ಚಾಹಲ್ ಆಡಬಹುದು.