ಭಾರತಕ್ಕೆ ಅಂಕಿಅಂಶಗಳ ಆನೆಬಲ | ನ್ಯೂಜಿಲೆಂಡ್ ಎದೆಯಲ್ಲಿ ಢವಢವ

1 min read

ಭಾರತಕ್ಕೆ ಅಂಕಿಅಂಶಗಳ ಆನೆಬಲ | ನ್ಯೂಜಿಲೆಂಡ್ ಎದೆಯಲ್ಲಿ ಢವಢವ

ಸುಮಾರು 2 ವರ್ಷಗಳ ಬಳಿಕ ಭಾರತದಲ್ಲಿ ಟೆಸ್ಟ್ ಪಂದ್ಯ ನಡೆಯುತ್ತಿದೆ.

ಕಾನ್ಪುರದ ಗ್ರೀನ್ಪಾಕ್ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಅಖಾಡಕ್ಕೆ ಇಳಿಯಲಿವೆ.

2 ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯ ಇದಾಗಲಿದೆ. ಮುಂಬೈ 2ನೇ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ನೀಡಲಿದೆ.

ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ ವರ್ಲ್ಡ್ ಟೆಸ್ಟ್ ಚಾಂಪಿಯನ್ ಶಿಪ್ ಅನ್ನು ಸೋತಿತ್ತು.

ಅದಾದ ಬಳಿಕ ಈ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ. ತವರಿನಲ್ಲಿ ಟೀಮ್ ಇಂಡಿಯಾ ಬಲಿಷ್ಠ ಅನ್ನುವುದನ್ನು ಇತಿಹಾಸ ಹೇಳುತ್ತಿದೆ.

ಸೂಪರ್ ಸ್ಟಾರ್ ಆಟಗಾರರು ಟೆಸ್ಟ್ ಆಟಕ್ಕೆ ಲಭ್ಯ ಇಲ್ಲದೇ ಇದ್ದರೂ ತವರಿನಲ್ಲಿ ಟೀಮ್ ಇಂಡಿಯಾವನ್ನು ಸೋಲಿಸುವುದು ಸುಲಭದ ಮಾತಲ್ಲ.

India vs New Zealand saaksha tv

ಅಂಕಿ ಅಂಶದಲ್ಲೂ ಟೀಮ್ ಇಂಡಿಯಾ ಸಾಕಷ್ಟು ಮುಂದಿದೆ. ಇಲ್ಲಿ ತನಕ ಈ ಎರಡು ತಂಡಗಳ ನಡುವೆ 60 ಮ್ಯಾಚ್ಗಳು ನಡೆದಿದೆ.

ಟೀಮ್ ಇಂಡಿಯಾ 21 ಪಂದ್ಯಗಳನ್ನು ಗೆದ್ದಿದೆ. ನ್ಯೂಜಿಲೆಂಡ್ ಗೆದ್ದಿದ್ದು ಕೇವಲ 13 ಪಂದ್ಯ ಮಾತ್ರ.

ಉಳಿದ ಪಂದ್ಯಗಳು ಡ್ರಾದಲ್ಲಿ ಅಂತ್ಯ ಕಂಡಿವೆ. ಭಾರತದ ನೆಲದಲ್ಲಿ ಕಿವೀಸ್ 34 ಪಂದ್ಯಗಳನ್ನು ಆಡಿದೆ.

16 ಪಂದ್ಯಗಳು ಭಾರತದ ಪಾಲಾಗಿವೆ. 16 ಪಂದ್ಯಗಳು ಡ್ರಾ ಗೊಂಡಿವೆ. 2 ಪಂದ್ಯ ನ್ಯೂಜಿಲೆಂಡ್ ಗೆದ್ದರೂ ಅದು ಬಹಳ ಹಿಂದಿನ ಮಾತು.

ಟೀಮ್ ಇಂಡಿಯಾ ಐಸಿಸಿ ಟೂರ್ನಿಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ಮುಗ್ಗರಿಸಿರಬಹುದು. ಆದರೆ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಮಾತ್ರ ನ್ಯೂಜಿಲೆಂಡ್ ತಂಡಕ್ಕೆ ಚೇತರಿಸಿಕೊಳ್ಳಲು ಎಳ್ಳಷ್ಟು ಅವಕಾಶವನ್ನೂ ನೀಡಿಲ್ಲ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd