India Vs New Zealand | ನ್ಯೂಜಿಲೆಂಡ್ ಸರಣಿ | ಭಾರತಕ್ಕೆ ಸಂಜು ಸ್ಯಾಮ್ಸನ್ ನಾಯಕ
ನ್ಯೂಜಿಲೆಂಡ್ ಎ ತಂಡದ ವಿರುದ್ಧದ ಸರಣಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಲಿ ಭಾರತ ಎ ತಂಡವನ್ನು ಪ್ರಕಟಿಸಿದೆ.
ಚೆನ್ನೈನಲ್ಲಿ ನಡೆಯಲಿರುವ ಈ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ ಎ ತಂಡವನ್ನು ಕೇರಳ ಬ್ಯಾಟರ್ ಸಂಜು ಸ್ಯಾಮ್ಸನ್ ಮುನ್ನಡೆಸಲಿದ್ದಾರೆ.
ಸರಣಿಗೆ ಬಿಸಿಸಿಐ ಶುಕ್ರವಾರ 16 ಮಂದಿಯ ತಂಡವನ್ನು ಪ್ರಕಟಿಸಿದ್ದು, ಭಾರತ ಎ ತಂಡದಲ್ಲಿ ಕೆ.ಎಸ್.ಭರತ್ ಗೆ ಸ್ಥಾನ ಸಿಕ್ಕಿದೆ.
ಅದೇ ರೀತಿ ಹೈದರಾಬಾದಿ ತಿಲಕ್ ವರ್ಮಾಗೂ ಅವಕಾಶ ಕಲ್ಪಿಸಲಾಗಿದೆ. ಇನ್ನು ಯುವ ವೇಗಿ ಉಮ್ರಾನ್ ಮಾಲಿಕ್ ಗೂ ಆಯ್ಕೆಗಾರರು ಮಣೆ ಹಾಕಿದ್ದಾರೆ.
ಭಾರತ ಕ್ರಿಕೆಟ್ ತಂಡ ಹೀಗಿದೆ :
ಸಂಜು ಸ್ಯಾಮ್ಸನ್, ಪೃಥ್ವಿ ಶಾ, ಅಭಿಮನ್ಯು ಈಶ್ವರನ್, ರುತುರಾಜ್ ಗಾಯಕ್ವಾಡ್, ರಾಹುಲ್ ತ್ರಿಪಾಠಿ, ರಜತ್ ಪಟಿದಾರ್, ಕೆ.ಎಸ್.ಭರತ್, ಕುಲ್ ದೀಪ್ ಯಾದವ್, ಶಬಾಜ್ ಅಹ್ಮದ್, ರಾಹುಲ್ ಚಹಾರ್, ತಿಲಕ್ ವರ್ಮಾ, ಕುಲ್ ದೀಪ್ ಸೇನ್, ಶರ್ದೂಲ್ ಠಾಕೂರ್, ಉಮ್ರಾನ್ ಮಲಿಕ್, ನವದೀಪ್ ಸೈನಿ, ರಾಜ್ ಅಂಗದ್ ಬವಾ.
India Vs New Zealand