`ರೋರಾ’ ಜೋಡಿ ಕೈಯಲ್ಲಿ ಟೀಂ ಇಂಡಿಯಾ ಟಿ20 ತಂಡದ ಹಗ್ಗ

1 min read
kl-rahul saaksha tv

`ರೋರಾ’ ಜೋಡಿ ಕೈಯಲ್ಲಿ ಟೀಂ ಇಂಡಿಯಾದ ಟಿ20 ತಂಡದ ಹಗ್ಗ

ಮುಂಬೈ : ನಿರೀಕ್ಷೆಯಂತೆಯೇ ನಡೆದಿದೆ. ಭಾರತ ಟಿ20 ಕ್ರಿಕೆಟ್ ತಂಡ ನಾಯಕತ್ವದಲ್ಲಿ ಸಂಪೂರ್ಣ ಬದಲಾವಣೆ ಕಂಡಿದೆ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಂಗಳವಾರ ರೋಹಿತ್ ಶರ್ಮಾ ಅವರನ್ನು ಟೀಂ ಇಂಡಿಯಾ ಟಿ20 ತಂಡದ ನೂತನ ನಾಯಕರನ್ನಾಗಿ ನೇಮಕ ಮಾಡಿದೆ.

ಹೌದು..! ಟಿ 20 ವಿಶ್ವಕಪ್ ಗು ಮುನ್ನಾ ವಿರಾಟ್ ಕೊಹ್ಲಿ ಟಿ 20 ನಾಯಕತ್ವಕ್ಕೆ ಗುಡ್ ಬೈ ಹೇಳೋದಾಗಿ ತಿಳಿಸಿದ್ದರು.

ಅದರಂತೆ ವಿಶ್ವಕಪ್ ಮುಗಿದ ಬಳಿಕ ಟಿ 20 ಕ್ಯಾಪ್ಟನ್ಸಿಗೆ ವಿರಾಟ್ ಬೈ ಹೇಳಿದ್ದಾರೆ.

ವಿರಾಟ್ ಬಳಿಕ ಟೀಂ ಇಂಡಿಯಾದ ನಾಯಕ ಯಾರು..? ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು.

ಆದ್ರೆ ರೋಹಿತ್ ಶರ್ಮಾ ಟಿ 20 ತಂಡದ ನಾಯಕ ಆಗಲಿದ್ದಾರೆ ಎಂದು ಹೇಳಲಾಗಿತ್ತು.

india saaksha tv

ಹಾಗೇ ಸಾಕಷ್ಟು ಮಂದಿ ರೋಹಿತ್ ಶರ್ಮಾನೇ ನಾಯಕ ಆಗಲಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಅದರಂತೆ ಇದೀಗ ಕೊಹ್ಲಿ ಬದಲಿಗೆ ರೋಹಿತ್ ಶರ್ಮಾ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿ ಬಿಸಿಸಿಐ ಪ್ರಕಟಿಸಿದೆ.

ಅದೇ ರೀತಿ ಕನ್ನಡಿಗ ಕೆ.ಎಲ್ ರಾಹುಲ್ ಅವರನ್ನ ಉಪನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.

ಭಾರತ ಟಿ20 ತಂಡ : ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್,

ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್-ಕೀಪರ್), ಇಶಾಂತ್ ಕಿಶನ್ (ವಿಕೆಟ್-ಕೀಪರ್), ವೆಂಕಟೇಶ್ ಅಯ್ಯರ್,

ಯಜ್ವೀರ್ ಚಹಾಲ್, ಅವೇಶ್ ಖಾನ್, ಭುವನೇಶ್ವರ್, ದೀಪಕ್ ಚಹಾರ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್.

ಭಾರತ, ನ್ಯೂಜಿಲೆಂಡ್ ಟಿ20 ಸರಣಿ ವೇಳಾಪಟ್ಟಿ
ನವೆಂಬರ್ 17: ಮೊದಲ ಪಂದ್ಯ (ಜೈಪುರದಲ್ಲಿ)
ನವೆಂಬರ್ 19: ಎರಡನೇ ಪಂದ್ಯ (ರಾಂಚಿಯಲ್ಲಿ)
ನವೆಂಬರ್ 21: ಮೂರನೇ ಪಂದ್ಯ (ಕೋಲ್ಕತ್ತಾದಲ್ಲಿ)

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd