ಟೆಸ್ಟ್ ಕ್ರಿಕೆಟ್ ನ ಪ್ರಪ್ರಥಮ ವಿಶ್ವಕಪ್ ಫೈನಲ್ : ಟಾಸ್ ಗೆದ್ದ ಕಿವೀಸ್
ಸೌಥಂಪ್ಟನ್ : ಇಡೀ ಕ್ರಿಕೆಟ್ ವಿಶ್ವವೇ ಕಾದು ಕುಳಿತಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಟಾಸ್ ಗೆದ್ದು, ಬೌಲಿಂಗ್ ಆಯ್ದುಕೊಂಡಿದೆ.
144 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಟೆಸ್ಟ್ ಕ್ರಿಕೆಟ್ ನ ಪ್ರಪ್ರಥಮ ವಿಶ್ವಕಪ್ ಫೈನಲ್ ಗೆ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಅಣಿಯಾಗಿದೆ.
ಈ ಪಂದ್ಯ ಶುಕ್ರವಾರವೇ ಆರಂಭವಾಗಬೇಕಿತ್ತು. ಆದರೆ ನಿನ್ನೆ ಮಳೆಯ ಕಾರಣ ಒಂದೂ ಎಸೆತ ಕಾಣದೆ ಮೊದಲ ದಿನದ ಪಂದ್ಯ ರದ್ದಾಗಿತ್ತು.
ಇದೀಗ ವರುಣ ಕೃಪೆ ತೋರಿದ್ದು ಸೌಥಂಪ್ಟನ್ ನ ದಿ ರೋಸ್ ಬೌಲ್ ಅಂಗಳದಲ್ಲಿ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಫೈನಲ್ ಪಂದ್ಯ ಆರಂಭವಾಗಿದೆ.
ಭಾರತ ತಂಡ: ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿ.ಕೀ), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ.
ನ್ಯೂಜಿಲ್ಯಾಂಡ್ ತಂಡ: ಡೆವೊನ್ ಕಾನ್ವೇ, ಟಾಮ್ ಲಾಥಮ್, ಕೇನ್ ವಿಲಿಯಮ್ಸನ್ (ನಾ), ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಬಿ.ಜೆ.ವಾಟ್ಲಿಂಗ್ (ವಿ.ಕೀ), ಕಾಲಿನ್ ಡಿ ಗ್ರ್ಯಾಂಡ್‍ಹೋಮ್, ಕೈಲ್ ಜಾಮಿಸನ್, ಟಿಮ್ ಸೌಥಿ, ನೀಲ್ ವ್ಯಾಗ್ನರ್, ಟ್ರೆಂಟ್ ಬೌಲ್ಟ್









