ಶಮಿ ಮಿಂಚಿನ ದಾಳಿಗೆ ಆಫ್ರಿಕಾ ಕಂಗಾಲು india saaksha tv
ವೇಗಿ ಮೊಹಮ್ಮದ್ ಶಮಿ ಮತ್ತು ಇತರ ವೇಗಿಗಳ ಮಿಂಚಿನ ದಾಳಿಯಿಂದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮುನ್ನಡೆ ಸಾಧಿಸಿದೆ.
ಮೊಹಮ್ಮದ್ ಶಮಿ ದಾಳಿಗೆ ತತ್ತರಿಸಿದ ಆಫ್ರಿಕಾ, ಕೇವಲ 197 ರನ್ ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಆಲೌಟ್ ಆಯಿತು. ಈ ಮೂಲಕ ಭಾತರಕ್ಕೆ 130 ರನ್ ಗಳ ಮುನ್ನಡೆ ದೊರಕಿದೆ.
ಭಾರತದ ಪರ ಬಿರುಗಾಳಿ ಬೌಲಿಂಗ್ ಮಾಡಿದ ಮೊಹಮ್ಮದ್ ಶಮಿ 44 ರನ್ ನೀಡಿ 5 ವಿಕೆಟ್ ಕಬಳಿಸಿದರು.
ಬುಮ್ರಾ, ಶರ್ದೂಲ್ ಠಾಕೂರ್ 2 ವಿಕೆಟ್, ಸಿರಾಜ್ 1 ವಿಕೆಟ್ ಪಡೆದು ಮಿಂಚಿದರು. ಇದಕ್ಕೂ ಮುನ್ನ ಮೂರನೇ ದಿನದಾಟ ಆರಂಭಿಸಿದ ಟೀಂ ಇಂಡಿಯಾ ಬ್ಯಾಟರ್ ಗಳ ಮೇಲಿ ದಕ್ಷಿಣಾ ಆಫ್ರಿಕಾ ಬೌಲರ್ ಗಳು ಸವಾರಿ ಮಾಡಿದರು.
ಶತಕ ವೀರ ರಾಹುಲ್ ಔಟ್ ಆಗುತ್ತಿದ್ದಂತೆ ಟೀಂ ಇಂಡಿಯಾ ಬ್ಯಾಟರ್ ಗಳು ಪೆವಿಲಿಯನ್ ಪರೇಡ್ ನಡೆಸಿದರು. ಆಫ್ರಿಕಾ ಲುಂಗಿ ಎಂನ್ಗಿಡಿ 71 ರನ್ ನೀಡಿ 6 ವಿಕೆಟ್ ಕಬಳಿಸಿದರು.
ಮೊದಲ ದಿನದಾಟದ ಅಂತ್ಯಕ್ಕೆ ಉತ್ತಮ ಸ್ಥಿತಿಯಲ್ಲಿ ಭಾರತ ಮೂರನೇ ದಿನ ಕೇವಲ 69 ರನ್ ಗಳಿಗೆ ಏಳು ವಿಕೆಟ್ ಕಳೆದುಕೊಂಡು ಆಲೌಟ್ ಆಯಿತು.
ಇದಾದ ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಆರಂಭದಲ್ಲಿಯೇ ಬುಮ್ರಾ ಶಾಕ್ ನೀಡಿದರು.
ಆಫ್ರಿಕಾ ಕ್ಯಾಪ್ಟನ್ ಎಲ್ಗರ್ 1 ರನ್ ಗಳಿಸಿ ಔಟ್ ಆದರು. ಇದಾದ ಬಳಿಕ ಅಖಾಡಕ್ಕಿಳಿದ ಮೊಹಮ್ಮದ್ ಶಮಿ ಬ್ಯಾಕ್ ಟು ಬ್ಯಾಕ್ ವಿಕೆಟ್ ತೆಗೆದರು.
ಇವರ ಜೊತೆಗೆ ಸಿರಾಜ್ ಕೂಡ ಇದೇ ವೇಳೆ ವಿಕೆಟ್ ಪಡೆದರು. ಇನ್ನು ಉತ್ತಮವಾಗಿ ಆಡುತ್ತಿದ್ದ ಡಿಕಾಕ್ ಗೆ ಶರ್ದೂಲ್ ಖೆಡ್ಡಾ ತೋಡಿದರು.
ಕೊನೆಯಲ್ಲಿ ರಬಾಡ 25 ರನ್ ಗಳಿಸಿದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ 197 ರನ್ ಗಳಿಗೆ ಆಲೌಟ್ ಆಯಿತು.
ಇದಾದ ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ಆಘಾತ ಎದುರಾಯ್ತು, ಆರಂಭಿಕ ಆಟಗಾರ ಮಯಾಂಕ್ ಕೇವಲ 4 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಸದ್ಯ 5 ರನ್ ಗಳಿಸಿ ರಾಹುಲ್, 4 ರನ್ ಗಳಿಸಿ ಠಾಕೂರ್ ಕ್ರೀಸ್ ನಲ್ಲಿದ್ದಾರೆ.









