India VS South Africa: ವೃತ್ತಿ ಜೀವನದ ಮೊದಲ ವಿಕೆಟ್ ಪಡೆದ ಶಹಬಾಜ್ ಅಹ್ಮದ್
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯ ರಾಂಚಿಯಲ್ಲಿ ನಡೆಯುತ್ತಿದೆ. ದಕ್ಷಿಣ ಆಫ್ರಿಕಾ ನಾಯಕ ಕೇಶವ್ ಮಹಾರಾಜ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. 13 ಓವರ್ಗಳ ನಂತರ ಆಫ್ರಿಕಾ 2 ವಿಕೆಟ್ ನಷ್ಟಕ್ಕೆ 54 ರನ್ ಗಳಿಸಿದೆ. ರೆಜಾ ಹೆಂಡ್ರಿಕ್ಸ್ ಮತ್ತು ಏಡೆನ್ ಮಾರ್ಕ್ರಾಮ್ ಕ್ರೀಸ್ನಲ್ಲಿದ್ದಾರೆ.
ಮೂರನೇ ಓವರ್ನ ಮೊದಲ ಎಸೆತದಲ್ಲಿ ಮೊಹಮ್ಮದ್ ಸಿರಾಜ್ ದಕ್ಷಿಣ ಆಫ್ರಿಕಾಕ್ಕೆ ಮೊದಲ ಹೊಡೆತ ನೀಡಿದರು. ಅವರು ಕ್ವಿಂಟನ್ ಡಿ ಕಾಕ್ ಅವರನ್ನು ಬೌಲ್ಡ್ ಮಾಡಿ ಪೆವಿಲಿಯನ್ ಗೆ ಕಳುಹಿಸಿದರು. ಡಿ ಕಾಕ್ 8 ಎಸೆತಗಳಲ್ಲಿ 5 ರನ್ ಗಳಿಸಿದರು.
ತನ್ನ ಮೊದಲ ODI ಪಂದ್ಯವನ್ನು ಆಡುತ್ತಿರುವ ಶಹಬಾಜ್ ಅಹ್ಮದ್, ಯಾನೆಮಾನ್ ಮಲಾನ್ ಅವರನ್ನು ಔಟ್ ಮಾಡುವ ಮೂಲಕ ತಮ್ಮ ಮೊದಲ ವಿಕೆಟ್ ಪಡೆದರು. ಅವರು 10 ಓವರ್ಗಳ ಐದನೇ ಎಸೆತದಲ್ಲಿ ಮಲಾನ್ ಎಲ್ಬಿಡಬ್ಲ್ಯೂ ಆಗಿ ಔಟ್ ಆದರು.
ಭಾರತ ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾಡಲಾಗಿದೆ. ರುತುರಾಜ್ ಗಾಯಕ್ವಾಡ್ ಬದಲಿಗೆ ರಜತ್ ಪಟಿದಾರ್ ಅವರಿಗೆ ಚಾನ್ಸ್ ನೀಡಲಾಗಿದೆ. ಆ ಮೂಲಕ ಪಟಿದಾರ್ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದಾರೆ. ಇನ್ನು ರವಿಬಿಷ್ಣೋಯಿ ಸ್ಥಾನದಲ್ಲಿ ಶಹಬ್ಬಾಶ್ ಅಹ್ಮದ್ ಕಣಕ್ಕಿಳಿದಿದ್ದಾರೆ.
ಭಾರತದ ಪ್ಲೇಯಿಂಗ್ ಇಲೆವೆನ್ ತಂಡ ಹೀಗಿದೆ…
ಶಿಖರ್ ಧವನ್, ಶುಬ್ ಮನ್ ಗಿಲ್, ಇಶಾನ್ ಕಿಶಾನ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ ಸನ್, ವಾಷಿಂಗ್ ಟನ್ ಸುಂದರ್, ಶಹಬ್ಬಾಶ್ ಅಹ್ಮದ್, ಶರ್ದೂಲ್ ಠಾಕೂರ್, ಕುಲ್ ದೀಪ್ ಯಾದವ್, ಮೊಹ್ಮದ್ ಸಿರಾಜ್, ಆವೇಶ್ ಖಾನ್
India Vs South Africa 2rd ODI Ranchi LIVE Score Update; Shikhar Dhawan Sanju Samson | IND SA Playing 11