ಶ್ರೀಲಂಕಾಗೆ 373 ರನ್ ಟಾರ್ಗೆಟ್; 45ನೇ ಏಕದಿನ ಶತಕ ಗಳಿಸಿದ ವಿರಾಟ್ ಕೊಹ್ಲಿ…
ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯ ಗುವಾಹಟಿಯಲ್ಲಿ ನಡೆಯುತ್ತಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 342 ರನ್ ಗಳ ಬೃಹತ್ ಮೊತ್ತ ಪೇರಿಸಿದೆ.
ಆರಂಭದಿಂದಲೇ ಭರ್ಜರಿ ಬ್ಯಾಟಿಂಗ್ ಮಾಡಿದ ಬ್ಯಾಟರ್ ಗಳು ಶ್ರೀಲಂಕ ಬೌಲರ್ ಗಳನ್ನ ಬೆಂಡತ್ತಿದರು. ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ಮಾದರಿಯಲ್ಲೂ ಭರ್ಜರಿಯಾಗಿ ಫಾರ್ಮ್ ಗೆ ಮರಳಿದ್ದು 45 ನೇ ಏಕದಿನ ಶತಕವನ್ನ ದಾಖಲಿಸಿದ್ದಾರೆ.
80 ಎಸೆತಗಳಲ್ಲಿ 100 ರನ್ ಬಾರಿಸಿದ ಕೊಹ್ಲಿ ಗಾಳಿಯಲ್ಲಿ ಹಾರಿ ಶತಕದ ಸಂಭ್ರಮವನ್ನ ಆಚರಿಸಿದರು ನಂತರ 7 ಎಸೆತಗಳನ್ನ ಎದುರಿಸಿ 113 ರನ್ ಗಳಿಸಿದ್ದಾಗ ಕಸುನ್ ರಣಜಿತಾ ಬೌಲಿಂಗ್ ನಲ್ಲಿ ಕುಸಾಲ್ ಮೆಂಡಿಸ್ ಗೆ ಕ್ಯಾಚಿತ್ತು ವಿಕೆಟ್ ಒಪ್ಪಿಸಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಒಟ್ಟಾರೆಯಾಗಿ 73 ನೇ ಏಕದಿನ ಶತಕವನ್ನ ತಮ್ಮ ಹೆಸರಿಗೆ ದಾಖಲಿಸಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಗೂ ಮೊದಲು ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಶ್ರೀಲಂಕ ಬೌಲರ್ ಗಳನ್ನ ಬೆವರಿಳಿಸಿದರು. ರೋಹಿತ್ ಶರ್ಮಾ 83 ರನ್ ಗಳಿಸಿ ತಮ್ಮ 47 ನೇ ಅರ್ಧಶತಕವನ್ನ ಪೂರೈಸಿ ತನ್ನ ಫಾರ್ಮ್ ಗೆ ವಾಪಸ್ ಮರಳಿದ್ದಾರೆ. ಶುಭಮನ್ ಗಿಲ್ 70 ರನ್ ಗಳಿಸಿ ಐದನೇ ಏಕದಿನ ಅರ್ಧಶತಕ ಪೂರೈಸಿದರು. ಕೆ ಎಲ್ ರಾಹುಲ್ 39 ರನ್ ಮತ್ತು ಶ್ರೇಯಸ್ಸ ಅಯ್ಯರ್ 28 ರನ್ ಗಳಿಸಿ ತಂಡದ ಮೊತ್ತವನ್ನ ಹೆಚ್ಚಿಸಿದರು.
India vs Sri Lanka : 373 run target for Sri Lanka; Virat Kohli scores 45th ODI century