ind-vs-sl | ಲಂಕಾ ವಿರುದ್ಧ 2ನೇ ಟೆಸ್ಟ್… 252ಕ್ಕೆ ಟೀಂ ಇಂಡಿಯಾ ಆಲೌಟ್
ಬೆಂಗಳೂರಿನಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 252 ರನ್ ಗಳಿಗೆ ಆಲೌಟ್ ಆಗಿದೆ.
ಇಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡರು. ತಂಡದಲ್ಲಿ ಜಯಂತ್ ಯಾದವ್ ಬದಲು ಅಕ್ಷರ್ ಪಟೇಲ್ ಗೆ ಅವಕಾಶ ನೀಡಲಾಗಿದೆ. ಉಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಮಯಾಂಕ್ (4ರನ್) ರೋಹಿತ್ ಶರ್ಮಾ (15 ರನ್) ಗಳಿಸಿ ಔಟ್ ಆದರು.
ಈ ಹಂತದಲ್ಲಿ ಹನುಮ ವಿಹಾರಿ, ವಿರಾಟ್ ಕೊಹ್ಲಿ ತಂಡಕ್ಕೆ ಕೊಂಚ ಚೇತರಿಕೆ ಕೊಟ್ಟರು, ಆದ್ರೆ ತಂಡದ ಮೊತ್ತ 76 ಇದ್ದಾಗ ಹನುಮಾ ವಿಹಾರಿ (31ರನ್ ) ಔಟ್ ಆದ್ರು. ಇದಾದ ಬಳಿಕ ಕೊಹ್ಲಿ (23 ರನ್ ) ಕೂಡ ಡಿ ಸಿಲ್ವಾಗೆ ವಿಕೆಟ್ ನೀಡಿದರು.
ರಿಷಬ್ ಪಂತ್ 39ಕ್ಕೆ ಸುಸ್ತಾದರು. ಶ್ರೇಯಸ್ ಅಯ್ಯರ್ 92 ರನ್ ಗಳಿಸಿ ತಂಡಕ್ಕೆ ನೆರವಾದರು. ಅಂತಿಮವಾಗಿ ಭಾತರ ಮೊದಲ ಇನ್ನಿಂಗ್ಸ್ ನಲ್ಲಿ 59.1 ಓವರ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದೆ.
ತಂಡಗಳು ಹೀಗಿವೆ.
ಭಾರತ : ಮಯಾಂಕ್ ಅಗರ್ ವಾಲ್, ರೋಹಿತ್ ಶರ್ಮಾ, ಹನುಮ ವಿಹಾರಿ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಜಡೇಜಾ, ಅಶ್ವಿನ್, ಅಕ್ಷರ್ ಪಟೇಲ್, ಮೊಹ್ಮದ್ ಶಮಿ, ಜಸ್ಪ್ರೀತ್ ಬೂಮ್ರಾ.
ಶ್ರೀಲಂಕಾ : ದಿಮುತ್ ಕರುಣಾರತ್ನೆ (ಸಿ), ಲಹಿರು ತಿರಿಮನ್ನೆ, ಕುಸಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ನಿರೋಶನ್ ಡಿಕ್ವೆಲ್ಲಾ (ಪ), ಸುರಂಗ ಲಕ್ಮಲ್, ಲಸಿತ್ ಎಂಬುಲ್ದೇನಿಯ, ವಿಶ್ವ ಫೆರ್ನಾಂಡೋ, ಪ್ರವೀಣ್ ಜಯವಿಕ್ರಮ
india vs sri lanka first innings highlights