ಕೋವಿಡ್-19 ಸೋಂಕಿನಿಂದ ಜಗತ್ತು ತತ್ತರಿಸಿದೆ. ನಾವು ದೇಶೀಯ ಆರ್ಥಿಕ ಸಾಮರ್ಥ್ಯದ ಮೂಲಕವೇ ಜಾಗತಿಕ ಆರ್ಥಿಕ ಪುನಶ್ಚೇತನಗೊಳಿಸಬೇಕು. ಇದಕ್ಕಾಗಿ ದೇಶಿಯ ಉತ್ಪಾದನೆ ಹೆಚ್ಚಿಸಬೇಕು. ಈ ಮೂಲಕ ಜಾಗತಿಕ ಆರ್ಥಿಕ ವ್ಯವಸ್ಥೆಗೆ ವ್ಯಾಪಾರದ ವೈವಿಧ್ಯೀಕರಣ ಪುನರ್ ಸ್ಥಾಪಿಸಬೇಕು ಎಂದು ಪ್ರಧಾನಿ ಮೋದಿ ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತಾಗಿ ಇಂದು ಅಮೆರಿಕಾ-ಭಾರತ ವ್ಯವಹಾರ ಸಮಿತಿ ಆಯೋಜಿಸಿರುವ ಇಂಡಿಯಾ ಐಡಿಯಾಸ್ ಶೃಂಗಸಭೆಯನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ ಮೂಲಕ ಮಾತನಾಡಿದ ಮೋದಿ ಅವರು ಆತ್ಮ ನಿರ್ಭರ ಭಾರತದ ಮೂಲಕ ಭಾರತವೂ ಜಗತ್ತಿನ ಏಳಿಗೆಗಾಗಿ ಶ್ರಮಿಸಲಿದೆ. ಇದಕ್ಕೆ ಅಮೆರಿಕಾದ ಸಹಭಾಗಿತ್ವ ಬೇಕಿದೆ. ಎರಡು ದೇಶಗಳ ಜಗತ್ತಿನ ಆರ್ಥಿಕ ವ್ಯವಸ್ಥೆ ಸುಧಾರಿಸಲು ಕೆಲಸ ಮಾಡಬೇಕಿ ಎಂದು ಹೇಳಿದ್ದಾರೆ.
ಇದೇ ವೇಳೆ ಭಾರತದ ಉದ್ಯಮಗಳಲ್ಲಿ ಅಮೆರಿಕಾ ಹೂಡಕೆ ಮಾಡಲು ಆಹ್ವಾನಿಸಿತರುವ ಮೋದಿ ಭಾರತದ ಕೃಷಿ ಕ್ಷೇತ್ರದಲ್ಲಿ ಅಮೆರಿಕದ ಹೂಡಿಕೆ ಮಾಡಿದೆ. ಇದು ಕ್ರಾಂತಿಕಾರಿ ಬದಲಾವಣೆ ತರಲಿದೆ. ಭಾರತದ ಇಂಧನ ಕ್ಷೇತ್ರದಲ್ಲೂ ಅಮೆರಿಕ ಕಂಪನಿಗಳಿಗೆ ಹೂಡಿಕೆ ಮಾಡಲು ಅವಕಾಶ ನೀಡಲಾಗಿದೆ. ರಕ್ಷಣೆ, ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲೂ ಅಮೆರಿಕ ಹೂಡಿಕೆ ಮಾಡಲು ಭಾರತ ಸ್ವಾಗತಿಸುತ್ತದೆ. ಕೊರೋನಾದಿಂದ ತತ್ತರಿಸಿದ ಜಗತ್ತಿನ ಆರ್ಥಿಕ ಪುನಶ್ಚೇತನಕ್ಕೆ ಭಾರತ ಶ್ರಮಿಸಲಿದೆ ಎಂದು ಭರವಸೆ ನೀಡಿದ್ದಾರೆ.
ನನ್ನ ಮಂತ್ರಿಗಿರಿ ತಪ್ಪಿಸಲು ಸಿಎಂ ಮನೆಗೆ ಹೋಗಿದ್ರಾ? ಈಗ ಮಂತ್ರಿಯಾಗಿದ್ದೇನೆ ಜಗದ್ಗುರುಗಳೇ ಈಗೇನು ಮಾಡ್ತೀರಿ:ಹಾಕಿರೋ ಕಾವಿ ಬಟ್ಟೆಗೆ ವಿಧೇಯರಾಗಿರಿ- ಬಸವಜಯಮೃತ್ಯುಂಜಯ ಶ್ರೀಗಳ ವಿರುದ್ಧ ಕಾಶಪ್ಪನವರ ವಾಗ್ದಾಳಿ
ಬಾಗಲಕೋಟೆ: ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಸಚಿವ ವಿಜಯಾನಂದ ಕಾಶಪ್ಪನವರ ನಡುವಿನ ಶೀತಲ ಸಮರ ಈಗ ಬೀದಿಗೆ ಬಂದಿದೆ. ತಮ್ಮ ಸಚಿವ ಸ್ಥಾನ ತಪ್ಪಿಸಲು ಸ್ವಾಮೀಜಿಗಳು...








