india | ಏಷ್ಯಾಕಪ್ ನಲ್ಲಿ ಟೀಂ ಇಂಡಿಯಾ ಭಾಗಿಯಾಗಲ್ಲ
ಪಾಕಿಸ್ತಾನ ವೇದಿಕೆಯಾಗಿ ಮುಂದಿನ ವರ್ಷ ನಡೆಯಲಿರುವ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡ ಭಾಗಿಯಾಗುವುದಿಲ್ಲ ಎಂದು ಏಷ್ಯಾ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ, ಬಿಸಿಸಿಐ ಕಾರ್ಯದರ್ಶಿ ಜೈ ಶಾ ಸ್ಪಷ್ಟಪಡಿಸಿದ್ದಾರೆ.
ಮುಂಬೈ ವೇದಿಕೆಯಾಗಿ ನಡೆದ ಬಿಸಿಸಿಐ 91 ನೇ ವಾರ್ಷಿಕ ಸಾಧಾರಣ ಸಮಾವೇಶದಲ್ಲಿ ಸಂದರ್ಭವಾಗಿ ಶಾ ಈ ವಿಷಯವನ್ನು ಸ್ಪಷ್ಟಪಿಸಿದ್ದಾರೆ.
ಏಷ್ಯಾಕಪ್ ಟೂರ್ನಿಯಲ್ಲಿ ತಟಸ್ಥ ಸ್ಥಳದಲ್ಲಿ ನಿರ್ವಹಿಸಿದ್ರೆ ನಮ್ಮ ಅಭ್ಯಂತರವಿಲ್ಲ. ಇಲ್ಲಾ ಪಾಕಿಸ್ತಾನದಲ್ಲಿಯೇ ನಿರ್ವಹಿಸುತ್ತೇವೆ ಅಂದ್ರೆ ಟೀಂ ಇಂಡಿಯಾ ಯಾವುದೇ ಪರಿಸ್ಥಿತಿಯಲ್ಲೂ ಭಾಗಿಯಾಗುವುದಿಲ್ಲ ಎಂದು ಜೈ ಶಾ ಸ್ಪಷ್ಟಪಸಿದ್ದಾರೆ.
ಜೈ ಶಾ ಅವರ ಈ ಹೇಳಿಕೆ ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಪಾಕಿಸ್ತಾನ ತಂಡದ ಅಭಿಮಾನಿಗಳಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಮುಂಬರುವ ಏಷ್ಯಾಕಪ್ ಟೂರ್ನಿಯಲ್ಲಿ ಆಡುವುದಕ್ಕೆ ಪಾಕಿಸ್ತಾನಕ್ಕೆ ಟೀಂ ಇಂಡಿಯಾ ಬರಲಿಲ್ಲವೆಂದರೇ ಅದೇ ವರ್ಷ ಭಾರತದಲ್ಲಿ ನಡೆಯಲಿರುವ 2023ರ ವರ್ಲ್ಡ್ ಕಪ್ ಅನ್ನು ನಾವು ಬಾಯ್ ಕಟ್ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.