ಅಗ್ನೀವೀರ್ ನೇಮಕಾತಿಗಾಗಿ ಮಾರ್ಗಸೂಚಿ ಬಿಡುಗಡೆಗೊಳಿಸಿದ ವಾಯುಪಡೆ
ಭಾರತೀಯ ವಾಯುಪಡೆಯು ಅಗ್ನಿಪಥ್ ಯೋಜನೆಯ ಅಗ್ನಿವೀರ್ಗಳ ನೇಮಕಾತಿಗಾಗಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಮೂರು ಸೇನೆಗಳಲ್ಲಿ ವಾಯುಸೇನೆ ಮೊದಲಿಗೆ ಮಾರ್ಗಸೂಚಿ ಹೊರಡಿಸಿದೆ.
ಪ್ರತಿಭಟನೆಯ ನಡುವೆಯೇ ಸೇನೆಯು ಪತ್ರಿಕಾಗೋಷ್ಠಿಯಲ್ಲಿ, ಜುಲೈ 1 ರಿಂದ ತನ್ನ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಸೇನೆ ತಿಳಿಸಿದೆ.
ಭಾರತೀಯ ವಾಯುಪಡೆಗೆ ಮೊದಲ ಬ್ಯಾಚ್ನ ಅಗ್ನಿವೀರ್ಗಳನ್ನು ಸೇರ್ಪಡೆಗೊಳಿಸುವ ಪ್ರಕ್ರಿಯೆಯು ಜೂನ್ 24 ರಿಂದ ಪ್ರಾರಂಭವಾಗಲಿದೆ ಎಂದು ಏರ್ ಮಾರ್ಷಲ್ ಎಸ್ಕೆ ಝಾ ಹೇಳಿದ್ದಾರೆ. ಆನ್ಲೈನ್ ಮೂಲಕ ನೋಂದಣಿ ಪ್ರಾರಂಭವಾಗುತ್ತದೆ. ಒಂದು ತಿಂಗಳ ನಂತರ, ಜುಲೈ 24 ರಿಂದ, ಹಂತ-1 ಆನ್ಲೈನ್ ಪರೀಕ್ಷೆಗಳು ಪ್ರಾರಂಭವಾಗುತ್ತವೆ ಎಂದು ಸೇನೆ ತಿಳಿಸಿದೆ.
ಅಗ್ನಿವೀರರ ನೇಮಕಾತಿಗೆ ಸಂಬಂಧಿಸಿದಂತೆ ದೊಡ್ಡ ಸಮಸ್ಯೆ ಎಂದರೆ ರಜೆ ಮತ್ತು ಪ್ರಶಸ್ತಿ. ಅಗ್ನಿವೀರ್ ಎಲ್ಲಾ ಸೇನಾ ಗೌರವ ಮತ್ತು ಪ್ರಶಸ್ತಿಗಳಿಗೆ ಅರ್ಹರಾಗಿರುತ್ತಾರೆ ಎಂದು ವಾಯುಪಡೆ ಸ್ಪಷ್ಟಪಡಿಸಿದೆ. ಅವರಿಗೆ ವರ್ಷದಲ್ಲಿ 30 ದಿನಗಳ ರಜೆಯನ್ನೂ ನೀಡಲಾಗುವುದು. ಇದಲ್ಲದೇ ಅನಾರೋಗ್ಯದ ಸಂದರ್ಭದಲ್ಲಿ ವೈದ್ಯರ ಸಲಹೆ ಮೇರೆಗೆ ಸಿಕ್ ಲೀವ್ ಕೂಡ ದೊರೆಯಲಿದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಅಗ್ನಿಪಥ ಯೋಜನೆ ವಿರುದ್ಧ ಯುವಕರ ಆಕ್ರೋಶ ತಣಿಸಲು ಗೃಹ ಮತ್ತು ರಕ್ಷಣಾ ಸಚಿವಾಲಯ ಮೀಸಲಾತಿ ನೀಡುವುದಾಗಿ ಘೋಷಿಸಿದೆ. ಶನಿವಾರ ಬೆಳಿಗ್ಗೆ, ಗೃಹ ವ್ಯವಹಾರಗಳ ಸಚಿವಾಲಯವು ಸಿಎಪಿಎಫ್ (ಕೇಂದ್ರ ಸಶಸ್ತ್ರ ಪೊಲೀಸ್ ಪಡೆ) ಮತ್ತು ಅಸ್ಸಾಂ ರೈಫಲ್ಸ್ನಲ್ಲಿ ನೇಮಕಾತಿಗಾಗಿ ಅಗ್ನಿವೀರ್ಗಳಿಗೆ 10% ಮೀಸಲಾತಿ ನೀಡಲು ನಿರ್ಧರಿಸಿದೆ. ಅಲ್ಲದೆ ವಯೋಮಿತಿಯಲ್ಲಿ 3 ರಿಂದ 5 ವರ್ಷಗಳವರೆಗೆ ರಿಲೀಫ್ ನೀಡುವುದಾಗಿ ಘೋಷಿಸಿದೆ.








