ಎರೆಡು ಪ್ರತ್ಯೇಕ ಎನ್ ಕೌಂಟರ್ ನಲ್ಲಿ ಐವರು ಉಗ್ರರ ಬಲಿ ಪಡೆದ ಸೈನಿಕರು
ಜಮ್ಮು ಕಾಶ್ಮೀರ : ಭಾರತೀಯ ಸೈನಿಕರು 24 ಗಂಟೆಯಲ್ಲಿ ಐವರು ಉಗ್ರರನ್ನು ಹೊಡೆದುರಳಿಸಿದ್ದಾರೆ. ಜಮ್ಮು ಕಾಶ್ಮೀರದ ಕುಲ್ಗಾಮಾ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ನಡೆದ ಮೂರು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಸೈನಿಕರು ಐವರು ಉಗ್ರರ ಸೆದೆಬಡಿದಿದ್ದಾರೆ.
ಕುಲ್ಗಾಮಾದ ಝೋಡರ್ ಕಾರ್ಡರ್ ಪ್ರದೇಶದಲ್ಲಿ ಉಗ್ರರ ಇರುವಿಕೆ ಖಚಿತ ಮಾಹಿತಿ ಪಡೆದ ಸೇನೆ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಸೈನಿಕರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಭಾರತೀಯ ಸೈನಿಕರು ಪ್ರತ್ಯುತ್ತರವಾಗಿ ಗುಂಡಿನ ದಾಳಿ ನಡೆಸಿ, ಲಷ್ಕರ್-ಇ-ತೈಬಾ ಸಂಘಟನೆಯ ಇಬ್ಬರನ್ನು ಹೊಡೆದುರಿಳಿಸಿದೆ
ಪುಲ್ವಾಮಾದಲ್ಲಿ ನಡೆದ ಎರಡು ಪ್ರತ್ಯೇಕ ಎನ್ ಕೌಂಟರ್ನಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಮತ್ತೊಬ್ಬನನ್ನು ಹಂದ್ವಾರಾದ ಎನ್ಕೌಂಟರ್ ನಲ್ಲಿ ಹೊಡೆದುರಳಿಸಲಾಗಿದೆ. ಹಂದ್ವಾರದಲ್ಲಿ ಸಾವನ್ನಪ್ಪಿದ ಉಗ್ರ ಮೆಹ್ರಜುದ್ದೀನ್ ಹಲ್ವಾಯಿ ಅಲಿಯಾಸ್ ಉಬೈದ್ ಎಂದು ಗುರುತಿಸಲಾಗಿದೆ.