ಭಾರತೀಯ ಸೈನ್ಯದ ಬಗ್ಗೆ ಇಂಟರೆಸ್ಟಿಂಗ್  ವಿಚಾರಗಳು – ವಿಶ್ವದ ಶ್ರೇಷ್ಠ ಸಶಸ್ತ್ರ ಪಡೆ – INDIAN ARMY

1 min read
Indian Army numerous vacancies

ಭಾರತೀಯ ಸೈನ್ಯದ ಬಗ್ಗೆ ಇಂಟರೆಸ್ಟಿಂಗ್  ವಿಚಾರಗಳು – ವಿಶ್ವದ ಶ್ರೇಷ್ಠ ಸಶಸ್ತ್ರ ಪಡೆ – INDIAN ARMY

ನಮ್ಮ ಹೆಮ್ಮೆ ನಮ್ಮ ಭಾರತೀಯ ಸೇನೆ… ನಾವು ನೆಮ್ಮದಿಯ ಸುಖನಿದ್ರೆಯಲ್ಲಿದ್ದರೆ, ದೇಶವನ್ನ ಶತ್ರುಗಳಿಂದ ಕಾಪಾಡಲು ಗಡಿ ಕಾಯುವ ನಮ್ಮ ಭಾರತೀಯ ಸೈನಿಕರು ರಿಯಲ್ ಹೀರೋಗಳು.. ಬಾಹ್ಯ ಬೆದರಿಕೆಗಳಿಂದ ನಮ್ಮನ್ನು ರಕ್ಷಿಸುವುದಲ್ಲದೆ, ಭೀಕರ ಸಂದರ್ಭಗಳಲ್ಲಿಯೂ ಬಾರತೀಯ ಸೇನೆಯು ಸಹಾಯ ಮಾಡುತ್ತದೆ. ಇಂದು, ನಾವು ನಮ್ಮ ಸೈನ್ಯದ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳ ಬಗ್ಗೆ ತಿಳಿದುಕೊಳ್ಳೋಣ

  1. ಸಿಯಾಚಿನ್

ಸಿಯಾಚಿನ್ – ಅತಿ ಕಡಿಮೆ ತಾಪಮಾನವಿರುವ ಹಾಗೂ ಅತಿ ಎತ್ತರದ ಪ್ರದೇಶದಲ್ಲಿರುವ ಯುದ್ಧ ಕೇಂದ್ರ ಸಿಯಾಚಿನ್ ನಲ್ಲಿ ಭಾರತೀಯ ಸೈನಿಕರು ದೇಶದ ರಕ್ಷಣೆಗೆ  ಮೈಕೊರೆಯುವ ಚಳಿಯಲ್ಲಿ ಕಾವಲು ಕಾಯುತ್ತಾರೆ.

ಸಮುದ್ರ ಮಟ್ಟದಿಂದ ಸುಮಾರು 5000 ಮೀಟರ್ ಎತ್ತರದಲ್ಲಿ ಈ ಯುದ್ಧ ಕೇಂದ್ರವಿದೆ. ಈ ಯುದ್ಧ ಭೂಮಿಯು ವಿಶ್ವದ ಅತಿ ಎತ್ತರದ ಯುದ್ಧ ಭೂಮಿಯೂ ಆಗಿದ್ದು, ಪಾಕ್ ನ ವಿರುದ್ಧ ಹಲವು ಬಾರಿ ಯುದ್ಧಗಳಲ್ಲಿ ನಮ್ಮ ಸೇನೆ ಸೆಣಸಾಡಿದೆ.  ಇಲ್ಲಿನ ತಾಪಮಾನ – 50 ಡಿಗ್ರಿಗಿಂತಲೂ ಕಡಿಮೆ ಇರುತ್ತದೆ

  1. ವಿಶ್ವದ ಅತಿ ದೊಡ್ಡ ಸ್ವಯಂ ಸೇವಕ ಸೇನೆ

ವಿಶ್ವದ ಅತಿ ದೊಡ್ಡ ಸ್ವಯಂ ಸೇವಕ ಸೇನೆ ಹೊಂದಿರುವ ಹೆಗ್ಗಳಿಕೆ ಭಾರತ ಸೇನೆಯದ್ದು.

  1. ಆಪರೇಷನ್ ರಾಹತ್

2013 ರಲ್ಲಿ ಉತ್ತರಖಂಡದಲ್ಲಿ ಬಹು ದೊಡ್ಡ ಪ್ರಮಾಣದಲ್ಲಿ ಪ್ರವಾಹ ಹಾನಿಯುಂಟು ಮಾಡಿತ್ತು. ಅನೇಕರು ಪ್ರಾಣ ಕಳೆದುಕೊಂಡು , ಸಾವಿರಾರು ಜನರು ಪ್ರವಾಹದಲ್ಲಿ ಸಿಲುಕಿದ್ದರು. ಆಗ ಭಾರತೀಯ ಸೇನೆಯು ವಿಶ್ವದ ಅತಿದೊಡ್ಡ ನಾಗರಿಕ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿತು. 20,000 ಕ್ಕೂ ಹೆಚ್ಚು ಜನರನ್ನು ರಕ್ಷಿಸಿ 3,82,400 ಕೆಜಿ ಪರಿಹಾರ ಸಾಮಗ್ರಿಗಳನ್ನು ವಿತರಣೆ ಮಾಡಲಾಗಿತ್ತು.  

  1. ಅಶ್ವದಳದ ರೆಜಿಮೆಂಟ್

ಭಾರತೀಯ ಸೇನೆಯು ಜಗತ್ತಿನ ಕೊನೆಯ ಅಶ್ವದಳದ ರೆಜಿಮೆಂಟ್ ಗಳ ಪೈಕಿ ಒಂದನ್ನ ಹೊಂದಿದೆ.  ಇನ್ನೂ ಪ್ರಪಂಚದಾದ್ಯಂತ ಸೈನ್ಯಗಳಲ್ಲಿ ಕೇವಲ ಮೂರು ರೆಜಿಮೆಂಟ್‌ಗಳಿವೆ ಎಂದು ಹೇಳಲಾಗಿದೆ.

 5.   ವಿಶ್ವದ ಅತಿ ಎತ್ತರದ ಸೇತುವೆ ನಿರ್ಮಾಣ

1982 ರಲ್ಲಿ, ಭಾರತೀಯ ಸೇನೆಯು ದ್ರಾಸ್ ಮತ್ತು ಸುರು ನದಿಗಳ ನಡುವೆ ಲಡಾಕ್ ಕಣಿವೆಯಲ್ಲಿ ವಿಶ್ವದ ಅತಿ ಎತ್ತರದ ಸೇತುವೆಯನ್ನು ನಿರ್ಮಿಸಿ  ಅಸಾಧ್ಯವಾದ ಕೆಲಸವನ್ನು ಸಾಧ್ಯವಾಗಿಸಿತ್ತು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd