ಭಾರತೀಯ ಸೇನೆಯಿಂದ ‌ಬೆಂಗಳೂರಿನಲ್ಲಿ 100 ಹಾಸಿಗೆಗಳ ಕೋವಿಡ್ ಕೇರ್ ಸೌಲಭ್ಯ

1 min read
Indian army covid center

ಭಾರತೀಯ ಸೇನೆಯಿಂದ ‌ಬೆಂಗಳೂರಿನಲ್ಲಿ 100 ಹಾಸಿಗೆಗಳ ಕೋವಿಡ್ ಕೇರ್ ಸೌಲಭ್ಯ

ಮಾರಣಾಂತಿಕ ಕೊರೊನಾವೈರಸ್ ವಿರುದ್ಧದ ಹೋರಾಟದಲ್ಲಿ ಭಾರತೀಯ ಸೇನೆಯು ನಾಗರಿಕರ ನೆರವಿಗೆ ನಿಂತಿದೆ. ಭಾರತೀಯ ಸೇನೆಯು ದೇಶದ ವಿವಿಧ ಭಾಗಗಳಲ್ಲಿ ಅನೇಕ ತಾತ್ಕಾಲಿಕ ಆಸ್ಪತ್ರೆಗಳನ್ನು ಸ್ಥಾಪಿಸಿದ್ದು, ನಾಗರಿಕರಿಗೆ ಅದರ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಿದೆ.

ಕೊರೋನವೈರಸ್ ವಿರುದ್ಧದ ಹೋರಾಟದಲ್ಲಿ ಕರ್ನಾಟಕ ಸರ್ಕಾರಕ್ಕೆ ನೆರವಿನ ಹಸ್ತವನ್ನು ನೀಡಿರುವ ಭಾರತೀಯ ಸೇನೆಯು ಹಲಸೂರಿನಲ್ಲಿ 100 ಹಾಸಿಗೆಗಳ ಕೋವಿಡ್ ಕೇರ್ ಸೌಲಭ್ಯವನ್ನು ಸ್ಥಾಪಿಸಿದೆ.
Indian army covid center

100 ಹಾಸಿಗೆಗಳಲ್ಲಿ, ಸುಮಾರು 55 ಆಮ್ಲಜನಕದಿಂದ ಜೋಡಿಸಲಾದ ಹಾಸಿಗೆಗಳಾಗಿದೆ. ಈ ಹಿಂದೆ ಸೇನೆಯ ವೆಸ್ಟರ್ನ್ ಕಮಾಂಡ್ ಚಂಡೀಗಢ, ಫರಿದಾಬಾದ್ ಮತ್ತು ಪಟಿಯಾಲದಲ್ಲಿ ಮೂರು 100 ಹಾಸಿಗೆಗಳ ಆಸ್ಪತ್ರೆಗಳನ್ನು ಸ್ಥಾಪಿಸಿತ್ತು.
ಎರಡು ವಾರಗಳ ಮೊದಲು ಭಾರತೀಯ ವಾಯುಪಡೆಯು 100 ಹಾಸಿಗೆಯ ಕೋವಿಡ್ ಚಿಕಿತ್ಸಾ ಸೌಲಭ್ಯವನ್ನು ಜಾಲಹಳ್ಳಿಯ ವಾಯುಪಡೆ ನಿಲ್ದಾಣದಲ್ಲಿ ಸ್ಥಾಪಿಸುವ ಮೂಲಕ ಸಹಾಯವನ್ನು ನೀಡಿದೆ.

ಕರ್ನಾಟಕದಲ್ಲಿ 23,67,742 ಜನರು ಕೊರೋನವೈರಸ್‌ನಿಂದ ಇದುವರೆಗೆ ಬಾಧಿತರಾಗಿದ್ದಾರೆ. ಈವರೆಗೆ ಸುಮಾರು 18,29,276 ಮಂದಿ ಚೇತರಿಸಿಕೊಂಡಿದ್ದಾರೆ. ಒಟ್ಟು 5,14,238 ರೋಗಿಗಳು ಇನ್ನೂ ಆಸ್ಪತ್ರೆಯಲ್ಲಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.
wearing masks

ಎಚ್ಚರಿಕೆ – ದೇಶಾದ್ಯಂತ ಕೊರೋನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್‌ ಪಡೆಯುವುದನ್ನು ಮರೆಯದಿರಿ. ನಮ್ಮ ಮತ್ತು ನಮ್ಮ ‌ಕುಟುಂಬದ ಆರೋಗ್ಯ ನಮ್ಮ ‌ಕೈಯಲ್ಲಿದೆ. ಇದು ‌ಸಾಕ್ಷಾಟಿವಿ ಕಳಕಳಿ.

#IndianArmy #covidcarecenter  #Bangalore

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd