ಚೀನಾ ಗೆ ಎದುರೇಟು – ಗಲ್ವಾನ್ ನಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಸೇನೆ…
ಹೊಸ ವರ್ಷದ ಆರಂಭದಲ್ಲಿ ಚೀನಾ ಸೇನೆ ಗಲ್ವಾನ್ ಕಣಿವೆಯಲ್ಲಿ ಧ್ವಜ ಹಾರಿಸಿ ವೀಡಿಯೋವನ್ನ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿತ್ತು. ಇದಕ್ಕೆ ತಿರುಗೇಟು ನಿಡಲು ಭಾರತ ಸಹ ಇಂದು ಗಲ್ವಾನ್ ಕಣಿವೆಯಲ್ಲಿ ತ್ರಿವರ್ಣ ಧ್ವಜ ಹಾರಿಸಿದೆ. 30 ಶಸ್ತ್ರಸಜ್ಜಿತ ಭಾರತೀಯ ಸೈನಿಕರನ್ನ ಗಲ್ವಾನ್ ಕಣಿವೆಯಲ್ಲಿ ನಿಯೋಜಿಸಲಾಗಿದೆ.
ಗಲ್ವಾನ್ ನಲ್ಲಿ ಚೀನಾದ ಸೈನಿಕರು ಧ್ವಜವನ್ನ ಹಾರಿಸುತ್ತಿರುವ ಮತ್ತು ರಾಷ್ಟ್ರಗೀತೆ ಆಡುವ ವೀಡಿಯೋ ಬಿಡುಗಡೆಯಾದ ನಂತರ ಭಾರತದಲ್ಲಿ ಇದು ಚರ್ಚೆಗೆ ಕಾರಣವಾಗಿತ್ತು. ಇದಕ್ಕೆ ಸೈನ್ಯ ಸ್ಪಷ್ಟನೆ ನೀಡಿದ್ದು. ಚೀನಾದ ಧ್ವಜ ಹಾರಾಡಿದ್ದು ಅವರ ಪ್ರದೇಶದಲ್ಲಿ ಎಂದು ಸ್ಪಷ್ಟನೆ ನೀಡಿತ್ತು.
ಚೀನಾ ಧ್ವಜ ಹಾರಾಡಿದ ನಂತರ ವಿವಾದ ಪ್ರಾರಂಭವಾಗಿತ್ತು. ಇದಕ್ಕೆ ಸಂಸದ ರಾಹುಲ್ ಗಾಂಧಿ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. “ನಮ್ಮ ಧ್ವಜ ಸಹ ಗಲ್ವಾನ್ ಚೆನ್ನಾಗಿ ಕಾಣುತ್ತದೆ, ಇದಕ್ಕೆ ಚೀನಾ ಉತ್ತರ ಕೊಡಬೇಕಾಗುತ್ತದೆ. ಮೋದಿಜಿ ಮೌನ ಮುರಿಯಿರಿ ಎಂದು ಟ್ವೀಟ್ ಮಾಡಿದ್ದರು.