ಟೋಕಿಯೋ ಒಲಿಂಪಿಕ್ಸ್ – ಭಾರತ ಪುರುಷರ ಹಾಕಿ ತಂಡ ಪ್ರಕಟ.. ಹತ್ತು ಮಂದಿಗೆ ಚೊಚ್ಚಲ ಒಲಿಂಪಿಕ್ಸ್..!

1 min read
hockey india indian hockey team saakshatv

ಟೋಕಿಯೋ ಒಲಿಂಪಿಕ್ಸ್ – ಭಾರತ ಪುರುಷರ ಹಾಕಿ ತಂಡ ಪ್ರಕಟ.. ಹತ್ತು ಮಂದಿಗೆ ಚೊಚ್ಚಲ ಒಲಿಂಪಿಕ್ಸ್..!

hockey india indian hockey team saakshatvಟೋಕಿಯೋ ಒಲಿಂಪಿಕ್ಸ್ ಗೇಮ್ಸ್ ಹಾಕಿ ಟೂರ್ನಿಯಲ್ಲಿ ಭಾಗವಹಿಸುವ ಭಾರತ ಹಾಕಿ ತಂಡವನ್ನು ಪ್ರಕಟಿಸಲಾಗಿದೆ.
ಭಾರತ ತಂಡದ 16 ಆಟಗಾರರ ಪೈಕಿ ಹತ್ತು ಮಂದಿಗೆ ಟೋಕಿಯೋ ಒಲಿಂಪಿಕ್ಸ್ ಗೇಮ್ಸ್ ಚೊಚ್ಚಲ ಒಲಿಂಪಿಕ್ಸ್. ಇನ್ನುಳಿದ ಆರು ಮಂದಿ ಆಟಗಾರರು ಕಳೆದ ಬಾರಿಯ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದರು. ಕರ್ನಾಟಕ ಸುನೀಲ್ ಅವರು ತಂಡದಲ್ಲಿ ಸ್ಥಾನ ಪಡೆದುಕೊಂಡಿಲ್ಲ. ಹಾಗೇ ತಂಡದ ನಾಯಕನನ್ನು ಆಯ್ಕೆ ಮಾಡಿಲ್ಲ. ಆದ್ರೆ ಮನ್ ಪ್ರೀತ್ ಸಿಂಗ್ ನಾಯಕನಾಗಿ ಆಯ್ಕೆಯಾಗುವ ಸಾಧ್ಯತೆಗಳು ಹೆಚ್ಚಿದೆ.
ಭಾರತ ಮಹಿಳಾ ಮತ್ತು ಪುರುಷರ ಹಾಕಿ ತಂಡಗಳಿಗೆ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದೆ.
ಅಮಿತ್ ರೋಹಿದಾಸ್, ಹಾರ್ದಿಕ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ನೀಲಕಂಠ ಶರ್ಮಾ, ಸುಮಿತ್, ಶಂಶೇರ್ ಸಿಂಗ್, ದೀಪ್ ಪ್ರೀತ್ ಸಿಂಗ್, ಗುರ್ಜಂತ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಯ, ಬೀರೇಂದ್ರ ಲಾಕ್ರಾ ಅವರಿಗೆ ಇದು ಚೊಚ್ಚಲ ಒಲಿಂಪಿಕ್ಸ್ ಕ್ರೀಡಾಕೂಟವಾಗಿದೆ. ಹಿರಿಯ ಆಟಗಾರನಾಗಿರುವ ಬೀರೇಂದ್ರ ಲಾಕ್ರಾ ಅವರು 2016 ಒಲಿಂಪಿಕ್ಸ್ ನಲ್ಲಿ ಗಾಯದಿಂದ ಆಡಿರಲಿಲ್ಲ. ಈ ಬಾರಿ ಅವರಿಗೆ ಅವಕಾಶ ಸಿಕ್ಕಿದೆ.

ಇನ್ನುಳಿದಂತೆ ಗೊಲ್ ಕೀಪರ್ ಶ್ರೀಜೇಶ್, ಮನ್ ಪ್ರೀತ್, ಹರ್ಮನ್ ಪ್ರೀತ್ ಸಿಂಗ್, ರುಪಿಂದರ್ ಸಿಂಗ್ ಮತ್ತು ಸುರೇಂದೇರ್ ಕುಮಾರ್ ಮತ್ತು ಮನ್ ದೀಪ್ ಸಿಂಗ್ ಅವರು 2016ರ ಒಲಿಂಪಿಕ್ಸ್ ನಲ್ಲಿ ಭಾರತ ಹಾಕಿ ತಂಡವನ್ನು ಪ್ರತಿನಿಧಿಸಿದ್ದರು.
ಒಲಿಂಪಿಕ್ಸ್ ನಲ್ಲಿ ಭಾರತ ಹಾಕಿ ತಂಡ ಎಂಟು ಬಾರಿ ಚಿನ್ನದ ಪದಕ ಗೆದ್ದ ಇತಿಹಾಸವಿದೆ. ಆದ್ರೆ 1980ರ ಮಾಸ್ಕೋ ಒಲಿಂಪಿಕ್ಸ್ ನಂತರ ಭಾರತ ಹಾಕಿ ತಂಡ ಚಿನ್ನದ ಪದಕವನ್ನೇ ಗೆದ್ದಿಲ್ಲ.
ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಎ ಬಣದಲ್ಲಿರುವ ಭಾರತ ಹಾಕಿ ತಂಡ, ಮೂರು ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಅರ್ಜೆಂಟಿನಾ, ನಂಬರ್ ವನ್ ತಂಡವಾಗಿರುವ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್, ಸ್ಪೇನ್ ಮತ್ತು ಜಪಾನ್ ತಂಡಗಳ ನಡುವೆ ಪೈಪೋಟಿ ನಡೆಸಬೇಕಿದೆ.
ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಜುಲೈ 23ರಿಂದ ಆಗಸ್ಟ್ 8ರವರೆಗೆ ನಡೆಯಲಿದೆ. ಜಪಾನ್ ಆತಿಥ್ಯದಲ್ಲಿ ನಡೆಯಲಿರುವ ಪ್ರತಿಷ್ಠಿತ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕೋವಿಡ್ ಆತಂಕವಂತೂ ಇದ್ದೇ ಇದೆ.

ಟೋಕಿಯೋ ಒಲಿಂಪಿಕ್ಸ್ – ಭಾರತದ ಪುರುಷರ ಹಾಕಿ ತಂಡ

ಗೋಲ್ ಕೀಪರ್ – ಪಿ.ಆರ್. ಶ್ರೀಜೇಶ್
ಡಿಫೆಂಡರ್ಸ್- ಹರ್ಮನ್ ಪ್ರೀತ್ ಸಿಂಗ್, ರುಪಿಂದರ್ ಪಾಲ್ ಸಿಂಗ್, ಸುರೇಂದರ್ ಕುಮಾರ್, ಅಮಿತ್ ರೋಹಿದಾಸ್, ಬೀರೇಂದ್ರ ಲಾಕ್ರಾ.

ಮಿಡ್ ಫೀಲ್ಡರ್ಸ್ – ಹಾರ್ದಿಕ್ ಸಿಂಗ್, ಮನ್ ಪ್ರೀತ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ನೀಲಕಂಠ ಶರ್ಮಾ, ಸುಮಿತ್.

ಫಾವಡ್ರ್ಸ್ – ಶಂಶೇರ್ ಸಿಂಗ್, ದಿಲ್ ಪ್ರೀತ್ ಸಿಂಗ್, ಗುರ್ಜತ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಯ, ಮನ್ ದೀಪ್ ಸಿಂಗ್.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd