ಭಾರತೀಯ ನೌಕಾಪಡೆಗೆ ಮತ್ತಷ್ಟು ಬಲ : ಎಂಹೆಚ್-60ಆರ್ ಹೆಲಿಕಾಪ್ಟರ್ ಹಸ್ತಾಂತರ MH-60R
ವಾಷಿಂಗ್ಟನ್ : ಭಾರತೀಯ ನೌಕಾಪಡೆಗೆ ಮತ್ತಷ್ಟು ಬಲ ಬಂದಿದ್ದು, ಅಮೆರಿಕ ನೌಕಾಪಡೆಯು ಎರಡು ಎಂಹೆಚ್-60ಆರ್ ಮಲ್ಟಿ ರೋಲ್ ಹೆಲಿಕಾಪ್ಟರ್‍ಗಳನ್ನು ಭಾರತೀಯ ನೌಕಾಪಡೆಗೆ ಹಸ್ತಾಂತರಿಸಿದೆ.
ಸ್ಯಾನ್ ಡಿಯಾಗೋದ ನಾರ್ತ್ ಐಲ್ಯಾಂಡ್ ನೌಕಾ ವಾಯು ನಿಲ್ದಾಣದಲ್ಲಿ ಅಮೆರಿಕದ ನೌಕಾಪಡೆಯಿಂದ ಭಾರತೀಯ ನೌಕಾಪಡೆಗೆ ಹೆಲಿಕಾಪ್ಟರ್‍ಗಳನ್ನು ಹಸ್ತಾಂತರಿಸಲಾಗಿದೆ.
ಎಂಆರ್ ಹೆಚ್-60 ಆರ್ ಮಲ್ಟಿ ರೋಲ್ ಹೆಲಿಕಾಪ್ಟರ್‍ಗಳನ್ನು ಲಾಕ್ಹೀಡ್ ಮಾರ್ಟಿನ್ ಕಂಪನಿ ತಯಾರಿಸಿದೆ. ಈ ಹೆಲಿಕಾಪ್ಟರ್ ಎಲ್ಲಾ ಹವಾಮಾನದಲ್ಲಿ ಬಳಸಬಹುದಾಗಿದೆ. ಅತ್ಯಾಧುನಿಕ ಏವಿಯಾನಿಕ್ಸ್‍ನೊಂದಿಗೆ ಅನೇಕ ಕಾರ್ಯಗಳನ್ನು ಬೆಂಬಲಿಸಲು ವಿನ್ಯಾಸಗೊಳಿಸಲಾಗಿದೆ. ಈ ಹೆಲಿಕಾಪ್ಟರ್‍ಗಳನ್ನು ಹಲವಾರು ವಿಶಿಷ್ಟ ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳೊಂದಿಗೆ ಸಿದ್ಧಪಡಿಸಲಾಗಿದೆ
ಭಾರತೀಯ ನೌಕಾಪಡೆಯು ಅಮೆರಿಕ ಸರ್ಕಾರದಿಂದ ವಿದೇಶಿ ಮಿಲಿಟರಿ ಉಪಕರಣದ ಮಾರಾಟದ ಅಡಿಯಲ್ಲಿ 24 ಹೆಲಿಕಾಪ್ಟರ್‍ಗಳನ್ನು 2.4 ಬಿಲಿಯನ್ ಡಾಲರ್ ವೆಚ್ಚದಲ್ಲಿ ಖರೀದಿಸುತ್ತಿದೆ. ಇದರ ಭಾಗವಾಗಿ ಇದೀಗ ಎರಡು ಹೆಲಿಕಾಪ್ಟರ್ ಗಳನ್ನು ಅಮೆರಿಕಾ ಹಸ್ತಾಂತರಿಸಿದೆ.