ಭಾರತೀಯ ಮೂಲದ ವಿದ್ಯಾರ್ಥಿಗೆ ಆಸ್ಟ್ರೇಲಿಯಾದಲ್ಲಿ ಚೂರಿ ಇರಿತ…
ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬ ಆಸ್ಟ್ರೇಲಿಯಾದಲ್ಲಿ ಚೂರಿ ಇರಿತಕ್ಕೆ ಗುರಿಯಾಗಿರುವ ಘಟನೆ ಸಿಡ್ನಿಯಲ್ಲಿ ನಡೆದಿದೆ. ದುಷ್ಕರ್ಮಿಗಳ ದಾಳಿಯಿಂದ ಗಾಯಗೊಂಡ ಯುವಕ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ. ಇದೇ ತಿಂಗಳ 6 ರಂದು ದುರ್ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಆಗ್ರಾದ ಶುಭಂ ಗಾರ್ಗ್ ಎಂಬ ಯುವಕ ಸಿಡ್ನಿಯ ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯದಲ್ಲಿ PHD ಮಾಡುತ್ತಿದ್ದಾನೆ. ಸಿಡ್ನಿಯ ನಾರ್ತ್‌ಶೋರ್ ಪ್ರದೇಶದ ಪೆಸಿಫಿಕ್ ಹೆದ್ದಾರಿಯಲ್ಲಿ ಶುಭಂ ಯುವಕ ರೂಮ್ ತೆರಳುತ್ತಿದ್ದಾಗ ದುಷ್ಕರ್ಮಿಯೊಬ್ಬ ಚಾಕು ತೋರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ನಿರಾಕರಿಸಿದಾಗ ಮನಬಂದಂತೆ ಹಲ್ಲೆ ನಡೆಸಿದ್ದಾನೆ ದಾಳಿಯಲ್ಲಿ, ಶುಭಂ ಅವರ ಮುಖ, ಎದೆ ಮತ್ತು ಹೊಟ್ಟೆ ಸೇರಿದಂತೆ 11 ಕಡೆಗಳಲ್ಲಿ ಚೂರಿ ಇರಿದಿದ್ದಾನೆ. ಸದ್ಯ ಯುವಕನ ಸ್ಥಿತಿ ಚಿಂತಾಜನಕವಾಗಿದೆ.
ದಾಳಿ ನಡೆಸಿದ 27 ವರ್ಷದ ಡೇನಿಯಲ್ ನಾರ್ವುಡ್ ಎಂಬ ವ್ಯಕ್ತಿಯನ್ನು ನ್ಯೂ ಸೌತ್ ವೇಲ್ಸ್ ಪೊಲೀಸರು ಬಂಧಿಸಿದ್ದಾರೆ. ಇದು ಜನಾಂಗೀಯ ದಾಳಿ ಎಂದು ಶುಭಂ ತಂದೆ ರಾಮನಿವಾಸ್ ಗಾರ್ಗ್ ಆರೋಪಿಸಿದ್ದಾರೆ. ಈ ಆರೋಪಗಳನ್ನು ಆಸ್ಟ್ರೇಲಿಯಾ ನಿರಾಕರಿಸಿದೆ.
ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ವಿದ್ಯಾರ್ಥಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಭಾರತೀಯ ಹೈಕಮಿಷನ್ ಮತ್ತು ಕಾನ್ಸುಲೇಟ್ ಅಧಿಕಾರಿಗಳು ಸಂತ್ರಸ್ತರಿಗೆ ಅಗತ್ಯ ನೆರವು ನೀಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಆಗ್ರಾದವರಾದ ಶುಭಂ ಗರ್ಗ್ ಅವರು ಐಐಟಿ ಮದ್ರಾಸ್‌ನಲ್ಲಿ ಬಿ.ಟೆಕ್ ಮತ್ತು ಎಂಎಸ್ ಮುಗಿಸಿದರು.
Australia: Indian PhD student stabbed multiple times in Australia








