Indian Railways : ವಿವಿಧ ಕಾರಣಗಳಿಂದ ಇಂದು ದೇಶವ್ಯಾಪಿ 250 ರೈಲುಗಳು ರದ್ದು….
ಭಾರತೀಯ ರೈಲ್ವೇ ವಿವಿಧ ಕಾರಣಗಳಿಂದ ಶುಕ್ರವಾರ ದೇಶಾದ್ಯಂತ 240 ರೈಲುಗಳನ್ನು ರದ್ದುಗೊಳಿಸಿದೆ. ನಿರ್ವಹಣೆ, ಮೂಲಸೌಕರ್ಯ ಮತ್ತು ಭದ್ರತಾ ಕಾರಣಗಳಿಗಾಗಿ ಮಾರ್ಚ್ 3 ರಂದು ಪ್ರಯಾಣಿಸಲು ನಿಯೋಜಿಸಲಾಗಿದ್ದ 240 ಕ್ಕೂ ಹೆಚ್ಚು ರೈಲುಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಶುಕ್ರವಾರ ವಿವಿಧ ಸ್ಥಳಗಳಿಗೆ ಇನ್ನೂ 87 ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ ಎಂದು ಘೋಷಿಸಲಾಗಿದೆ.
ರದ್ದಾಗಿರುವ ರೈಲುಗಳಲ್ಲಿ ಕಾನ್ಪುರ, ಅಸನ್ ಸೋಲ್, ದೆಹಲಿ, ಲಕ್ನೋ, ಬೊಕಾರೊ ಸ್ಟೀಲ್ ಸಿಟಿ, ಬಕ್ಸರ್, ಅಮರಾವತಿ, ವಾದ್ರಾ, ನಾಗ್ಪುರ, ಪುಣೆ, ಪಠಾಣ್ ಕೋಟ್, ಮಧುರೈ, ರಾಮೇಶ್ವರಂ ಮತ್ತು ಇತರ ಕೆಲವು ಸ್ಥಳಗಳಿಗೆ ಸೇರಿದ ರೈಲುಗಳು ಸೇರಿವೆ. ರೈಲುಗಳ ರದ್ದತಿ ಹಿನ್ನೆಲೆಯಲ್ಲಿ ಪ್ರಯಾಣಿಕರು ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಆಯಾ ರೈಲುಗಳಲ್ಲಿ ಮುಂಗಡವಾಗಿ ಟಿಕೆಟ್ ಕಾಯ್ದಿರಿಸಿದವರಿಗೆ ಹಣವನ್ನು ಮರುಪಾವತಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಬುಧವಾರ ಕೂಡ ದೇಶಾದ್ಯಂತ 250 ಕ್ಕೂ ಹೆಚ್ಚು ರೈಲುಗಳನ್ನ ರದ್ದುಗೊಳಿಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಇವುಗಳೊಂದಿಗೆ ಇನ್ನೂ 96 ರೈಲುಗಳನ್ನ ನಿಲ್ಲಿಸಲಾಗಿದೆ. ಇದರಿಂದಗಿ ದೇಶಾದ್ಯಂತ ಒಟ್ಟು 351 ರೈಲುಗಳನ್ನ ರದ್ದುಗೊಳಿಸಲಾಗಿದೆ.
Indian Railways: 250 trains canceled across the country today due to various reasons.