ರೈಲ್ವೆ ಉದ್ಯೋಗಿಗಳಿಗೆ ಸಿಹಿ ಸುದ್ದಿ – 78 ದಿನಗಳ ವೇತನದ ಬೋನಸ್ ವಿತರಿಸುವುದಾಗಿ ಭಾರತೀಯ ರೈಲ್ವೆ ಪ್ರಕಟನೆ
Railways announced bonus
ಹೊಸದಿಲ್ಲಿ, ಅಕ್ಟೋಬರ್ 23: ಮುಂದಿನ ಕೆಲವು ದಿನಗಳಲ್ಲಿ ತನ್ನ 11.58 ಲಕ್ಷ ಗೆಜೆಟ್ ರಹಿತ ನೌಕರರಿಗೆ 78 ದಿನಗಳ ವೇತನದ ಬೋನಸ್ ವಿತರಿಸುವುದಾಗಿ ಭಾರತೀಯ ರೈಲ್ವೆ ಗುರುವಾರ ಪ್ರಕಟಿಸಿದೆ. Railways announced bonus
30 ಲಕ್ಷಕ್ಕೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರಿಗೆ 2019-2020ರ ಬೋನಸ್ ವಿತರಣೆಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಅನುಮೋದಿಸಿದ ಒಂದು ದಿನದ ನಂತರ ಈ ಪ್ರಕಟಣೆ ಹೊರಬಿದ್ದಿದೆ.
ಅರ್ಹ ರೈಲ್ವೆ ಉದ್ಯೋಗಿಗೆ ಪಾವತಿಸಬೇಕಾದ ಗರಿಷ್ಠ ಮೊತ್ತ 78 ದಿನಗಳವರೆಗೆ 17,951 ರೂ ಆಗಿದ್ದು, ಸುಮಾರು 11.58 ಲಕ್ಷ ಗೆಜೆಟೆಡ್ ರೈಲ್ವೆ ನೌಕರರು ಈ ನಿರ್ಧಾರದಿಂದ ಪ್ರಯೋಜನ ಪಡೆಯುವ ಸಾಧ್ಯತೆಯಿದೆ ಎಂದು ರೈಲ್ವೆ ಹೇಳಿಕೆ ತಿಳಿಸಿದೆ.
ಪೋಖ್ರಾನ್‌ನಲ್ಲಿ ತನ್ನ ಅಂತಿಮ ಪರೀಕ್ಷೆ ಪ್ರಯೋಗವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಾಗ್ ಕ್ಷಿಪಣಿ
ರೈಲ್ವೆಯಲ್ಲಿನ ಉತ್ಪಾದಕತೆ-ಸಂಬಂಧಿತ ಬೋನಸ್ ದೇಶದಾದ್ಯಂತ ಇರುವ ಎಲ್ಲಾ ಗೆಜೆಟೆಡ್ ರೈಲ್ವೆ ನೌಕರರನ್ನು (ಆರ್‌ಪಿಎಫ್ / ಆರ್‌ಪಿಎಸ್ಎಫ್ ಸಿಬ್ಬಂದಿಗಳನ್ನು ಹೊರತುಪಡಿಸಿ) ಒಳಗೊಳ್ಳುತ್ತದೆ. ಅರ್ಹ ರೈಲ್ವೆ ಉದ್ಯೋಗಿಗಳಿಗೆ ಬೋನಸ್ ಪಾವತಿಯನ್ನು ಪ್ರತಿ ವರ್ಷ ದಸರಾ ರಜಾದಿನಗಳಿಗೆ ಮುಂಚಿತವಾಗಿ ಮಾಡಲಾಗುತ್ತದೆ.
ಕ್ಯಾಬಿನೆಟ್ ನ ನಿರ್ಧಾರವನ್ನು ಈ ವರ್ಷದ ರಜಾದಿನಗಳಿಗೆ ಮುಂಚಿತವಾಗಿ ಜಾರಿಗೆ ತರಲಾಗುವುದು. 2019-20ನೇ ಸಾಲಿಗೆ 78 ದಿನಗಳ ವೇತನಕ್ಕೆ ಸಮನಾದ ಪಿಎಲ್‌ಬಿಯನ್ನು ಪಾವತಿಸಲಾಗುವುದು. ಇದು ಕಾರ್ಯಕ್ಷಮತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ನೌಕರರನ್ನು ಪ್ರೇರೇಪಿಸುವ ನಿರೀಕ್ಷೆಯಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ