Monday, March 27, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಬಡತನ… ಅಪಮಾನ.. ನಿಷೇಧ..ಹೀಗೆ ಓಡುತ್ತಲೇ ಬೆಳೆದ ಕ್ರೀಡಾತಾರೆ ದುಟಿ ಚಾಂದ್..!

admin by admin
July 2, 2021
in Newsbeat, Sports, ಕ್ರೀಡೆ
Dutee Chand Indian sprinter saakshatv
Share on FacebookShare on TwitterShare on WhatsappShare on Telegram

ಬಡತನ… ಅಪಮಾನ.. ನಿಷೇಧ..ಹೀಗೆ ಓಡುತ್ತಲೇ ಬೆಳೆದ ಕ್ರೀಡಾತಾರೆ ದುಟಿ ಚಾಂದ್..!

Dutee Chand Indian sprinter  saakshatvಭಾರತದ ವೇಗದ ಓಟಗಾರ್ತಿ ದುಟು ಚಾಂದ್ ಅವರು ಟೋಕಿಯೋ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸುವ ಅರ್ಹತೆಯನ್ನು ಪಡೆದುಕೊಂಡಿದ್ದಾರೆ.
ವಿಶ್ವ ಶ್ರೇಯಾಂಕ ಪಟ್ಟಿಯ ಆಧಾರದ ಮೇಲೆ ದುಟಿ ಚಾಂದ್ ಅವರು 100ಮೀಟರ್, 200ಮೀಟರ್ ಓಟದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. 2016ರ ರಿಯೋ ಒಲಿಂಪಿಕ್ಸ್ ನಲ್ಲೂ ಭಾಗವಹಿಸಿದ್ದರು. ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ದುಟಿ ಚಾಂದ್ ಅವರು ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ಪ್ರತಿ ದಿನ ಆರರಿಂದ ಏಳು ಗಂಟೆಗಳ ಕಾಲ ಅಭ್ಯಾಸ ನಡೆಸುತ್ತಿರುವ ದುಟಿ ಚಾಂದ್ ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಶ್ರೇಷ್ಠ ಪ್ರದರ್ಶನ ನೀಡುವ ವಿಶ್ವಾಸದಲ್ಲೂ ಇದ್ದಾರೆ.
ಅಂದ ಹಾಗೇ ದುಟಿ ಚಾಂದ್ ಭಾರತೀಯ ಅಥ್ಲೆಟಿಕ್ಸ್ ನಲ್ಲಿ ಮಿಂಚು ಹರಿಸಿದ್ದ ಕ್ರೀಡಾಪಟು. ಏಷ್ಯಾದ ಎರಡನೇ ವೇಗದ ಮಹಿಳಾ ಅಥ್ಲೀಟ್ ಆಗಿ ಹೊರಹೊಮ್ಮಿದ್ದು ಈಗ ಇತಿಹಾಸ. ದುಟಿ ಚಾಂದ್ ಸಾಧನೆಯನ್ನು ನೋಡಿ ಎಲ್ಲರೂ ಕೊಂಡಾಡುತ್ತಿದ್ದಾರೆ. ಆದ್ರೆ ಈ ಏಷ್ಯಾಡ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ದುಟಿ ಚಾಂದ್ ಹಿಂದಿನ ನೋವಿನ ಕಥೆಯನ್ನು ಕೇಳಿದ್ರೆ ಹೀಗೂ ಆಗಿದೆಯಾ ಅಂತ ಅನ್ನಿಸಬಹುದು.

Related posts

Annapoorneshwari

Astrology : 5 ಕಂಟೈನರ್‌ಗಳನ್ನು ಎಂದಿಗೂ ಅಡಿಗೆ ಕೌಂಟರ್‌ನಲ್ಲಿ ಇರಿಸಬಾರದು. ಈ ಎಲ್ಲಾ ವಸ್ತುಗಳನ್ನು ಅಡುಗೆ ವೇದಿಕೆಯ ಮೇಲೆ ಇರಿಸಿದರೆ, ಹಣಕ್ಕೆ ಕಷ್ಟವಾಗುತ್ತದೆ…

March 26, 2023
Ramya

Weekend with Ramesh :  “ಸಬ್ ಟೈಟಲ್ ಹಾಕ್ರೋ” ಇಂಗ್ಲೀಷ್ ಬಳಸಿ ಟ್ರೋಲ್ ಗೆ ಒಳಗಾದ  ರಮ್ಯಾ… 

March 26, 2023

Dutee Chand Indian sprinter  saakshatvಭಾರತೀಯ ಅಥ್ಲೆಟಿಕ್ಸ್ ಮತ್ತು ಅಂತಾರಾಷ್ಟ್ರೀಯ ಅಥ್ಲೆಟಿಕ್ ಫೆಡರೇಷನ್ ಮಾಡಿರುವ ಅವಮಾನಕ್ಕೆ ಅಂದು ದುಟಿ ಚಾಂದ್ ತಲೆತಗ್ಗಿಸಿದ್ದರು. ಆದ್ರೆ 2018ರ ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿಯ ಪದಕ ಗೆದ್ದು ಭಾರತೀಯ ಅಥ್ಲೆಟಿಕ್ಸ್ ಮತ್ತು ಅಂತಾರಾಷ್ಟ್ರೀಯ ಅಥ್ಲೆಟಿಕ್ ಫೆಡರೇಷನ್ಗೆ ಮುಖಕ್ಕೆ ಮಂಗಳಾರತಿ ಮಾಡುವಂತೆ ಮಾಡಿದ್ರು.
ಅದ್ರಲ್ಲೂ ದುಟಿಚಾಂದ್ 18ನೇ ಏಷ್ಯನ್ ಗೇಮ್ಸ್ ನ ನೂರು ಮೀಟರ್ ಓಟವನ್ನು 11.32 ಸೆಕೆಂಡುಗಳಲ್ಲಿ ಕ್ರಮಿಸಿ ಕೂದಲೆಳೆಯದ ಅಂತರದಿಂದ ಚಿನ್ನದ ಪದಕವನ್ನು ಕಳೆದುಕೊಂಡಿದ್ದರು. ಹಾಗೇ ನೋಡಿದ್ರೆ 100 ಮೀಟರ್ ಓಟದ ಸೆಮಿಫೈನಲ್ ನಲ್ಲಿ 11.43 ಸೆಕೆಂಡುಗಳಲ್ಲಿ ಗುರಿ ತಲುಪಿ ಫೈನಲ್ ಎಂಟ್ರಿಯಾಗಿದ್ದರು. ಆಗ ದುಟಿ ಚಾಂದ್ ಪದಕ ಗೆಲ್ಲುವ ನಿರೀಕ್ಷೆಗಳು ಇರಲಿಲ್ಲ. ಆದ್ರೆ ಎರಡುವರೆ ಗಂಟೆಗಳ ಬಳಿಕ ಎಲ್ಲರ ನಿರೀಕ್ಷೆಗಳನ್ನು ಹುಸಿಗೊಳಿಸಿದ್ರು. ಏಳನೇ ಟ್ರ್ಯಾಕ್ ನಲ್ಲಿ ಓಟ ಅರಂಭಿಸಿದ್ದ ದುಟಿ ಚಾಂದ್ ಅದ್ಭುತ ಆರಂಭವನ್ನೇ ಪಡೆದ್ರು. ಇನ್ನೇನೂ ಗುರಿ ತಲುಪುವಷ್ಟರಲ್ಲಿ ಕ್ಷಣ ಮಾತ್ರದ ಹಿನ್ನಡೆ ಅನುಭವಿಸಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.
ಚೊಚ್ಚಲ ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸಿದ್ದ ದುಟಿ ಚಾಂದ್ ಚೊಚ್ಚಲ ಪದಕವನ್ನು ಗೆದ್ದುಕೊಂಡಿದ್ದರು. ಅದೂ ಕೂಡ 20 ವರ್ಷಗಳ ಬಳಿಕ ನೂರು ಮೀಟರ್ ನಲ್ಲಿ ಪದಕ ಗೆದ್ದ ಸಾಧನೆಯನ್ನು ದುಟಿ ಚಾಂದ್ ಮಾಡಿದ್ರು. ಈ ಹಿಂದೆ 1998ರ ಏಷ್ಯಾಡ್ನಲ್ಲಿ ರಚಿತಾ ಮಿಸ್ಟ್ರಿ ಅವರು ಕಂಚಿನ ಪದಕ ಗೆದ್ದುಕೊಂಡಿದ್ದರು.
ಈ ಪದಕದೊಂದಿಗೆ ದುಟಿಚಾಂದ್ ಭಾರತದ ಅಗ್ರ ಅಥ್ಲೀಟ್ ಗಳ ಸಾಲಿಗೂ ಸೇರ್ಪಡೆಗೊಂಡಿದ್ದರು. ಏಷ್ಯನ್ ಗೇಮ್ಸ್ ನೂರು ಮೀಟರ್ ಓಟದಲ್ಲಿ ಬೆಳ್ಳಿಯ ಪದಕ ಗೆದ್ದ ಮೂರನೇ ಕ್ರೀಡಾಪಟು ಹಾಗೂ ನಾಲ್ಕನೇ ಪದಕ ಗಿಟ್ಟಿಸಿದ್ದ ಅಥ್ಲೀಟ್ ಎಂಬ ಗೌರವಕ್ಕೂ ಪಾತ್ರರಾಗಿದ್ದರು. 1951ರಲ್ಲಿ ರೋಶನ್ ಮಿಸ್ಟ್ರಿ ಬೆಳ್ಳಿ ಗೆದ್ದುಕೊಂಡಿದ್ರೆ, 1982 ಮತ್ತು 1986 ಪಿ.ಟಿ. ಉಷಾ ಎರಡು ಬಾರಿ ಬೆಳ್ಳಿ ಗೆದ್ದುಕೊಂಡಿದ್ದರು.
Dutee Chand Indian sprinter  saakshatvಅಂದ ಹಾಗೇ ದುಟಿ ಚಾಂದ್ ಹುಟ್ಟಿದ್ದು ಫೆಬ್ರವರಿ 3, 1996. ಒಡಿಸ್ಸಾದ ಜೈಪುರ್ ಜಿಲ್ಲೆಯವರು. ತಂದೆ ಚಕ್ರಾಧರ್ ಚಾಂದ್ ಮತ್ತು ತಾಯಿ ಅಖುಜಿ ಚಾಂದ್. ನೇಕಾರರ ಕುಟುಂಬದಿಂದ ಬಂದಿರುವ ದುಟಿ ಚಾಂದ್ ಬಡತನದಲ್ಲೇ ಬದುಕನ್ನು ಕಳೆದವರು. ಬಡತನದ ವಿರುದ್ಧವೇ ಓಡುತ್ತಾ ಬೆಳೆದ ದುಟಿ ಚಾಂದ್ ಗೆ ಅಕ್ಕ ಸರಸ್ವತಿ ಚಾಂದ್ ಬೆನ್ನೆಲುಬಾಗಿ ನಿಂತಿದ್ದರು. 2012-2013ರಲ್ಲಿ ದುಟಿ ಚಾಂದ್ 18 ವಯೋಮಿತಿಯ ನೂರು ಮೀಟರ್ ಓಟದಲ್ಲಿ 11.8 ಸೆಕೆಂಡುಗಳಲ್ಲಿ ಕ್ರಮಿಸಿ ರಾಷ್ಟ್ರೀಯ ದಾಖಲೆಯನ್ನೇ ಬರೆದಿದ್ದರು.
ಆದ್ರೆ, ಭಾರತದ ಭರವಸೆಯ ವೇಗದ ಓಟಗಾರ್ತಿಯಾಗಿದ್ದ ದುಟಿ ಚಾಂದ್ ಗೆ 2014ರಲ್ಲಿ ಆಘಾತ ಅನುಭವಿಸಿದ್ರು. ಇನ್ನೇನೂ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಬೇಕು ಅನ್ನುವಷ್ಟರಲ್ಲಿ ದುಟಿ ಚಾಂದ್ ಅವರನ್ನು ಸ್ಪರ್ಧೆಯಿಂದ ಭಾರತೀಯ ಅಥ್ಲೆಟಿಕ್ ಫೆಡರೇಷನ್ ಕೈಬಿಟ್ಟಿತ್ತು. ಕಾರಣ ಮಹಿಳಾ ಆಥ್ಲೀಟ್ ಆಗಿರುವ ದುಟಿಚಾಂದ್ ದೇಹದಲ್ಲಿ ಹೈಪರ್ ಆಂಡ್ರೊಜೆನಿಜಮ್ ಅಂಶ ಜಾಸ್ತಿಯಾಗಿದೆ. ಇದ್ರಿಂದ ದುಟಿ ಚಾಂದ್ ಕ್ರೀಡಾಕೂಟದಲ್ಲಿ ಭಾಗವಹಿಸುವಂತಿಲ್ಲ ಅಂತ ಆದೇಶವನ್ನು ನೀಡಿತ್ತು. ಇದ್ರಿಂದ ಕಂಗಲಾಗಿರುವ ದುಟಿ ಚಾಂದ್ ಭಾರತೀಯ ಅಥ್ಲೆಟಿಕ್ ಫೆಡರೇಷನ್ ಮತ್ತು ಅಂತಾರಾಷ್ಟ್ರೀಯ ಅಥ್ಲೆಟಿಕ್ ಫೆಡೇರೇಷನ್ ವಿರುದ್ಧ ಕೋರ್ಟ್ ಮೆಟ್ಟಿಲು ಹತ್ತಿದ್ದರು. ಸ್ಪೋಟ್ರ್ಸ್ ಆರ್ಬಿಟ್ರೆಷನ್ ನ್ಯಾಯಾಲಯ ವಿಚಾರಣೆ ನಡೆಸಿದ್ದ ಬಳಿಕ ಸರಿಯಾದ ಸಾಕ್ಷ್ಯಗಳು ಇಲ್ಲದ ಕಾರಣ ದುಟಿ ಚಾಂದ್ ಗೆ ಮತ್ತೆ ಅಥ್ಲೆಟಿಕ್ಸ್ ನಲ್ಲಿ ಸ್ಪರ್ಧಿಸುವಂತೆ ಅವಕಾಶ ನೀಡಲಾಗಿತ್ತು.
Dutee Chand Indian sprinter  saakshatvದುರಂತ ಅಂದ್ರೆ, ಭಾರತ ಅಥ್ಲೆಟಿಕ್ ಫೆಡರೇಷನ್ ಮತ್ತು ಅಂತಾರಾಷ್ಟ್ರೀಯ ಅಥ್ಲೆಟಿಕ್ ಫೆಡರೇಷನ್ನ ತಪ್ಪು ಕಲ್ಪನೆಯಿಂದ ದುಟಿ ಚಾಂದ್ 2014ರ ಕಾಮನ್ವೆಲ್ತ್ ಗೇಮ್ಸ್ ಮತ್ತು 2014 ಏಷ್ಯನ್ ಗೇಮ್ಸ್ ನಿಂದ ವಂಚಿತರಾದ್ರು. ಆಗ ಕಂಗೆಟ್ಟಿದ್ದ ದುಟಿ ಚಾಂದ್ಗೆ ಸಹಾಯಕ್ಕೆ ಬಂದವರು ಭಾರತದ ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲ ಗೋಪಿಂಚಂದ್.
ಕೋರ್ಟ್ ಮೆಟ್ಟಲೇರಿದಾಗ ಎಲ್ಲಾ ರೀತಿಯ ಸಹಾಯವನ್ನು ಮಾಡಿರುವ ಪುಲ್ಲೇಲಾ ಗೋಪಿಂಚಂದ್ ಅವರು ದುಟಿ ಚಾಂದ್ ಅವರ ಕ್ರೀಡಾಬದುಕಿಗೆ ಬೆಳಕು ನೀಡಿದ್ರು. ಅಲ್ಲದೆ ತಮ್ಮದೇ ಅಕಾಡೆಮಿಯಲ್ಲಿ ದುಟಿ ಚಾಂದ್ ಅವರಿಗೆ ಆಸರೆಯನ್ನು ಕೂಡ ನೀಡಿದ್ರು.

ಒಟ್ಟಿನಲ್ಲಿ ದುಟಿ ಚಾಂದ್ ಜೀವನದಲ್ಲಿ ಕಷ್ಟಗಳನ್ನು ಅನುಭವಿಸಿಕೊಂಡು ಯಶಸ್ಸಿನ ಶಿಖರವನ್ನೇರಿದ್ದಾರೆ. ಹೆಣ್ಣು ಮಗಳಾಗಿದ್ರೂ ತನ್ನ ಲಿಂಗತ್ವದ ಬಗ್ಗೆ ಅನುಮಾನ ಮೂಡುವಂತೆ ಆದಾಗ ಹೇಗೆ ಆಗಿರಬೇಕು ಅವರಿಗೆ. ಬಡತನದ ನೋವು, ದೇಹದಲ್ಲಿನ ವ್ಯತ್ಯಾಸದಿಂದ ಆಗಿರುವ ಲಿಂಗತ್ವದ ಸಂಕಟ. ಅವಮಾನ, ಟೀಕೆ, ಆರೋಪಗಳು ಹೀಗೆ ಒಂದಲ್ಲ ಎರಡಲ್ಲ ಪ್ರತಿ ಕ್ಷಣವೂ ದುಟಿ ಚಾಂದ್ ಮಾನಸಿಕವಾಗಿ ಕೊರಗಿಕೊಂಡೇ ಅಭ್ಯಾಸದಲ್ಲಿ ನಿರತರಾಗಿದ್ದರು.

ಇದೀಗ ಎಲ್ಲದಕ್ಕೂ ಉತ್ತರ ನೀಡಿದ್ದಾರೆ. ಗೆದ್ದಿರುವ ಪದಕಗಳ ಹೊಳಪು ಇದೆಯಲ್ವಾ ,ಅದು ದುಟಿ ಚಾಂದ್ ಅವರ ಬದುಕಿನ ಸಂಕಟವನ್ನು ಮರೆ ಮಾಚುವಂತೆ ಮಾಡಿದೆ. ದುಟಿ ಚಾಂದ್ ಬದುಕಿನಲ್ಲಿ ಮಾಡಿರುವ ಸಾಧನೆ, ಪದಕಗಳಿಂದ ಪ್ರಕಾಶಮಾನವಾಗಿ ಹೊಳೆಯುವಂತೆ ಮಾಡಿದೆ.
ಇದೀಗ ಟೋಕಿಯೋ ಒಲಿಂಪಿಕ್ಸ್ ನತ್ತ ಚಿತ್ತವನ್ನಿಟ್ಟಿರುವ ದುಟಿ ಚಾಂದ್ ಶ್ರೇಷ್ಠ ಪ್ರದರ್ಶನ ನೀಡಿ ಪದಕ ಗೆಲ್ಲಲಿ ಅನ್ನೋದೇ ನಮ್ಮೆಲ್ಲರ ಆಶಯ.

Tags: #saakshatvathleticsDutee Chandindiandian sprinterSportsTokyo OlympicsTokyo Olympics 2021
ShareTweetSendShare
Join us on:

Related Posts

Annapoorneshwari

Astrology : 5 ಕಂಟೈನರ್‌ಗಳನ್ನು ಎಂದಿಗೂ ಅಡಿಗೆ ಕೌಂಟರ್‌ನಲ್ಲಿ ಇರಿಸಬಾರದು. ಈ ಎಲ್ಲಾ ವಸ್ತುಗಳನ್ನು ಅಡುಗೆ ವೇದಿಕೆಯ ಮೇಲೆ ಇರಿಸಿದರೆ, ಹಣಕ್ಕೆ ಕಷ್ಟವಾಗುತ್ತದೆ…

by Naveen Kumar B C
March 26, 2023
0

5 ಕಂಟೈನರ್‌ಗಳನ್ನು ಎಂದಿಗೂ ಅಡಿಗೆ ಕೌಂಟರ್‌ನಲ್ಲಿ ಇರಿಸಬಾರದು. ಈ ಎಲ್ಲಾ ವಸ್ತುಗಳನ್ನು ಅಡುಗೆ ವೇದಿಕೆಯ ಮೇಲೆ ಇರಿಸಿದರೆ, ಹಣಕ್ಕೆ ಕಷ್ಟವಾಗುತ್ತದೆ... ನಮ್ಮ ಅಡುಗೆಮನೆಯಲ್ಲಿ ನೂರಾರು ವಸ್ತುಗಳು ಇವೆ....

Ramya

Weekend with Ramesh :  “ಸಬ್ ಟೈಟಲ್ ಹಾಕ್ರೋ” ಇಂಗ್ಲೀಷ್ ಬಳಸಿ ಟ್ರೋಲ್ ಗೆ ಒಳಗಾದ  ರಮ್ಯಾ… 

by Naveen Kumar B C
March 26, 2023
0

Weekend with Ramesh :  “ಸಬ್ ಟೈಟಲ್ ಹಾಕ್ರೋ” ಇಂಗ್ಲೀಷ್ ಬಳಸಿ ಟ್ರೋಲ್ ಗೆ ಒಳಗಾದ  ರಮ್ಯಾ… ಕನ್ನಡ ಕಿರುತೆರೆಯ ಪ್ರಸಿದ್ಧ ರಿಯಾಲಿಟಿ ಶೋ  ವೀಕೆಂಡ್ ವಿತ್...

Covid-19 , india , daily report , health , saakshatv

COVID-19 :  ಒಂದೇ ದಿನದಲ್ಲಿ 1,890 ಕೋವಿಡ್ ಪ್ರಕರಣಗಳು ಏರಿಕೆ….

by Naveen Kumar B C
March 26, 2023
0

COVID-19 :  ಒಂದೇ ದಿನದಲ್ಲಿ 1,890 ಕೋವಿಡ್ ಪ್ರಕರಣಗಳು ಏರಿಕೆ…. ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ  ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ 24...

ISRO LVM3

ISRO LVM 3 : 36 ಉಪಗ್ರಹಗಳೊಂದಿಗೆ LVM3 ರಾಕೆಟ್ ಉಡಾವಣೆ ಯಶಸ್ವಿ… 

by Naveen Kumar B C
March 26, 2023
0

ISRO LVM 3 : 36 ಉಪಗ್ರಹಗಳೊಂದಿಗೆ LVM3 ರಾಕೆಟ್ ಉಡಾವಣೆ ಯಶಸ್ವಿ… ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ LVM 3 ರಾಕೆಟ್ ಅನ್ನ ಯಶಸ್ವಿಯಾಗಿ ಉಡಾವಣೆ...

WPL 2023 Final 

WPL 2023 Final : ಫೈನಲ್ ಪಂದ್ಯದ ಕಾದಾಟಕ್ಕೆ ಮುಂಬೈ, ದೆಹಲಿ  ಸಜ್ಜು…. 

by Naveen Kumar B C
March 26, 2023
0

WPL 2023 Final : ಫೈನಲ್ ಪಂದ್ಯದ ಕಾದಾಟಕ್ಕೆ ಮುಂಬೈ, ದೆಹಲಿ  ಸಜ್ಜು….   ಮಹಿಳಾ ಪ್ರೀಮಿಯರ್ ಲೀಗ್ ಮೊದಲ ಸೀಸನ್ ನ ಮೊದಲ ಪೈನಲ್ ಪಂದ್ಯಕ್ಕೆ ಮುಂಬೈನ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Annapoorneshwari

Astrology : 5 ಕಂಟೈನರ್‌ಗಳನ್ನು ಎಂದಿಗೂ ಅಡಿಗೆ ಕೌಂಟರ್‌ನಲ್ಲಿ ಇರಿಸಬಾರದು. ಈ ಎಲ್ಲಾ ವಸ್ತುಗಳನ್ನು ಅಡುಗೆ ವೇದಿಕೆಯ ಮೇಲೆ ಇರಿಸಿದರೆ, ಹಣಕ್ಕೆ ಕಷ್ಟವಾಗುತ್ತದೆ…

March 26, 2023
Ramya

Weekend with Ramesh :  “ಸಬ್ ಟೈಟಲ್ ಹಾಕ್ರೋ” ಇಂಗ್ಲೀಷ್ ಬಳಸಿ ಟ್ರೋಲ್ ಗೆ ಒಳಗಾದ  ರಮ್ಯಾ… 

March 26, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram