ನವೆಂಬರ್ 20ರಿಂದ ಇಂಡಿಯನ್ ಸೂಪರ್ ಲೀಗ್ ಆರಂಭ
ಏಳನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ ಫುಟ್ ಬಾಲ್ ಟೂರ್ನಿಯು ನವೆಂಬರ್ 20ರಿಂದ ಆರಂಭಗೊಳ್ಳಲಿದೆ.
ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಒಟ್ಟು 11 ತಂಡಗಳು ಭಾಗವಹಿಸಲಿವೆ. ಎಲ್ಲಾ ಪಂದ್ಯಗಳು ಗೋವಾದಲ್ಲಿ ನಡೆಯಲಿವೆ.
ಕೋವಿಡ್ ಮಾರ್ಗಸೂಚಿಯ ಪ್ರಕಾರ ಈ ಬಾರಿಯ ಇಂಡಿಯನ್ ಸೂಪರ್ ಲೀಗ್ ಟೂರ್ನಿಯನ್ನು ಜೈವಿಕ ಸುರಕ್ಷತೆಯಲ್ಲಿ ಆಯೋಜನೆ ಮಾಡಲಾಗುವುದು.
ಎಟಿಕೆ ಮೋಹನ್ ಬಾಗನ್, ಬೆಂಗಳೂರು ಫುಟ್ ಬಾಲ್ ಕ್ಲಬ್, ಚೆನೈಯನ್ ಫುಟ್ ಬಾಲ್ ಕ್ಲಬ್, ಗೋವಾ ಫುಟ್ ಬಾಲ್ ಕ್ಲಬ್, ಹೈದ್ರಬಾದ್ ಫುಟ್ ಬಾಲ್ ಕ್ಲಬ್, ಜೆಮ್ಸ್ ಶೆಡ್ ಪುರ ಫುಟ್ ಬಾಲ್ ಕ್ಲಬ್, ಮುಂಬೈ ಸಿಟಿ ಫುಟ್ ಬಾಲ್ ಕ್ಲಬ್, ನಾರ್ತ್ ಈಸ್ಟ್ ಯುನೈಟೆಡ್ ಫುಟ್ ಬಾಲ್ ಕ್ಲಬ್, ಒಡಿಸ್ಸಾ ಫುಟ್ ಬಾಲ್ ಕ್ಲಬ್, ಕೇರಳ ಬ್ಲ್ಯಾಸ್ಟರ್ಸ್ ಸೌತ್ ಈಸ್ಟ್ ಬೆಂಗಾಲ್ ತಂಡಗಳು ಪ್ರಶಸ್ತಿಗಾಗಿ ಹೋರಾಟ ನಡೆಸಲಿವೆ.
ಕೋವಿಡ್ 19 ಸೋಂಕಿನಿಂದ ಕಳೆದ ಏಳೆಂಟು ತಿಂಗಳುಗಳಿಂದ ಕ್ರೀಡಾ ಜಗತ್ತು ಕೂಡ ಸ್ತಬ್ದಗೊಂಡಿತ್ತು.
ಭಾರತದಲ್ಲಿ ಕೋವಿಡ್ ಹೆಚ್ಚಾದ ಕಾರಣ ಐಪಿಎಲ್ ಟೂರ್ನಿಯನ್ನು ಯುಎಇ ನಲ್ಲಿ ಆಯೋಜಿಸಲಾಗುತ್ತಿದೆ.
ಇದೀಗ ಭಾರತದಲ್ಲಿ ಫುಟ್ ಬಾಲ್ ಟೂರ್ನಿ ನಡೆಯುತ್ತಿದೆ. ಎಲ್ಲಾ ಪಂದ್ಯಗಳು ಕೂಡ ಕೋವಿಡ್ ಮಾರ್ಗಸೂಚಿಯ ಪ್ರಕಾರವೇ ನಡೆಸಲಾಗುತ್ತಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಇಂಡಿಯನ್ ಸೂಪರ್ ಲೀಗ್ ಫುಟ್ ಬಾಲ್ ಟೂರ್ನಿಗೆ ಹೀರೋ ಕಂಪೆನಿಯು ಪ್ರಾಯೋಜಕತ್ವ ವಹಿಸಲಿದೆ. ಕೋವಿಡ್ ನಡುವೆ ಭಾರತದಲ್ಲಿ ನಡೆಯುತ್ತಿರುವ ಮೊದಲ ಕ್ರೀಡಾ ಟೂರ್ನಿ ಇದಾಗಲಿದೆ.