ಏಳುಬಾರಿಯ ಆಫ್ರಿಕಾ ದಂಡಯಾತ್ರೆಯಲ್ಲಿ ಶತಕ ಸಿಡಿದ್ದು 9 ಮಂದಿಯಷ್ಟೆ..! indians saakshatv
ಟೀಂ ಇಂಡಿಯಾ ಈವರೆಗೂ ಏಳು ಬಾರಿ ದಕ್ಷಿಣ ಆಫ್ರಿಕಾ ಮೇಲೆ ದಂಡೇತ್ತಿ ಹೋಗಿದೆ. ಆದ್ರೆ ಈ ವರೆಗೂ ಟೆಸ್ಟ್ ಸರಣಿ ಗೆದ್ದಿಲ್ಲ. 1991 ರಿಂದ ಭಾರತ ಮತ್ತು ಸೌತ್ ಆಫ್ರಿಕಾ ಮಧ್ಯೆ 39 ಟೆಸ್ಟ್ ಮ್ಯಾಚ್ ಗಳು ನಡೆದಿವೆ, ಇದರಲ್ಲಿ ಟೀಂ ಇಂಡಿಯಾ 14 ಪಂದ್ಯಗಳಲ್ಲಿ ಜಯ ಸಾಧಿಸಿದರೇ ಆಫ್ರಿಕಾ 15 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ. ಟೀಂ ಇಂಡಿಯಾ ಏಳು ಬಾರಿ ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿಯಾಡಿದೆ. ಆದ್ರೆ ಈವರೆಗೂ ಸರಣಿ ಗೆದ್ದಿಲ್ಲ. ಕೇವಲ ಮೂರು ಪಂದ್ಯಗಳನ್ನು ಮಾತ್ರ ಗೆದ್ದಿದೆ.
ಇನ್ನು ಸೌತ್ ಆಫ್ರಿಕಾದಲ್ಲಿ ಟೀಂ ಇಂಡಿಯಾ ಬ್ಯಾಟರ್ ಗಳಿಗೆ ಕಂಟವಾಗೋದು ಅಲ್ಲಿನ ವೇಗ ಬೌಲರ್ ಗಳು. ಹೇಳಿಕೇಳಿ ಆಫ್ರಿಕಾ ಪಿಚ್ ಗಳು ವೇಗಿಗಳ ಸ್ವರ್ಗಗಳಂತೆ ಇರುತ್ತವೆ. ಹೀಗಾಗಿ ಟೀಂ ಇಂಡಿಯಾದ ಬ್ಯಾಟರ್ ಗಳು ಅಲ್ಲಿ ಪರದಾಡುವುದೇ ಹೆಚ್ಚು. ಹೀಗಿದ್ದರೂ ಅಲ್ಲಿ ಭಾರತದ ಒಂಭತ್ತು ಮಂದಿ ಬ್ಯಾಟರ್ ಗಳು ಶತಕ ಸಿಡಿದ್ದಾರೆ.
ಸಚಿನ್ ತೆಂಡ್ಯುಲ್ಕರ್:
ಕ್ರಿಕೆಟ್ ದೇವರು ಸಚಿನ್ ಅವರಿಗೆ ಸೌತ್ ಆಫ್ರಿಕಾದಲ್ಲಿ ಒಳ್ಳೆಯ ದಾಖಲೆ ಇದೆ. ಆಫ್ರಿಕಾ ನೆಲದಲ್ಲಿ ಸಚಿನ್ ಐದು ಸೆಂಚೂರಿಗಳನ್ನ ಸಿಡಿಸಿದ್ದಾರೆ. ಇಲ್ಲಿ ಅವರ ಗರಿಷ್ಠ ಮೊತ್ತ 169 ರನ್. .
ವಿರಾಟ್ ಕೊಹ್ಲಿ:
ಸಚಿನ್ ನಂತರದ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಇದ್ದು, ವಿರಾಟ್ ಆಫ್ರಿಕಾ ನೆಲದಲ್ಲಿ ಎರಡು ಸೆಂಚೂರಿಗಳನ್ನು ಬಾರಿಸಿದ್ದಾರೆ. ಅವರ ಗರಿಷ್ಠ ಮೊತ್ತ 153 ರನ್
ಮಹ್ಮದ್ ಅಜಾರುದ್ದೀನ್:
1997ರಲ್ಲಿ ನಡೆದ ಕೇಪ್ ಟೌನ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 58 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಸಚಿನ್ ಜೊತೆಗೂಡಿದ ಅಜಾರುದ್ದೀನ್ 6ನೇ ವಿಕೆಟ್ 222 ರನ್ ಗಳ ದಾಖಲೆಯ ಜೊತೆಯಾಟವಾಡಿದ್ದು. ಈ ಪಂದ್ಯದಲ್ಲಿ ಅಜಾರ್ 115 ರನ್ ಗಳಿಸಿದ್ದರು.
ರಾಹುಲ್ ದ್ರಾವಿಡ್:
ಸದ್ಯ ಟೀಂ ಇಂಡಿಯಾದ ಹೆಡ್ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಆಫ್ರಿಕಾ ನೆಲದಲ್ಲಿ ಒಂದು ಸೆಂಚೂರಿಯನ್ನ ಸಿಡಿಸಿದ್ದಾರೆ. 1997 ರಲ್ಲಿ ಜೋಹಾನ್ನೆಸ್ ಬರ್ಗ್‌ನಲ್ಲಿ ಈ ಮಿಸ್ಟರ್ ಡಿಪೆಂಡಬಲ್ 148 ರನ್‌ನೊಂದಿಗೆ ಶತಕ ಸಾಧಿಸಿದ್ದರು.
ಕಪಿಲ್ ದೇವ್:
ಉತ್ತಮ ದಿಗ್ಗಜ ಆಲ್ರೌಂಡರ್ ಕಪಿಲ್ ದೇವ್ 1992 ರಲ್ಲಿ ಪೋರ್ಟ್ ಎಲಿಜಿಬೆತ್ ವೇದಿಕೆಯಲ್ಲಿ ನಡೆದ ಪಂದ್ಯಗಳಲ್ಲಿ 129 ರನ್ ಗಳಿಸಿದ್ದರು.
ವೀರೇಂದ್ರ ಸೆಹ್ವಾಗ್, ಚೇತೇಶ್ವರ್ ಪೂಜಾರ, ವಸೀಮ್ ಜಾಫರ್, ಪ್ರವೀಣ್ ಆಮ್ರೆ ತಲಾ ಒಂದೊಂದು ಸೆಂಚೂರಿ ಸಿಡಿದ್ದಾರೆ. ಹೀಗೆ ಭಾರತದ ಒಟ್ಟು 9 ಮಂದಿ ಬ್ಯಾಟರ್ ಗಳು ಆಫ್ರಿಕಾ ನೆಲದಲ್ಲಿ ಶತಕ ಸಿಡಿದ್ದಾರೆ.
ಇನ್ನು ಮೂರು ವರ್ಷಗಳ ಬಳಿಕ ಟೀಂ ಇಂಡಿಯಾ ಸೌತ್ ಆಫ್ರಿಕಾ ಪ್ರವಾಸ ಕೈಗೊಂಡಿದ್ದು, ಯಾರು ಶತಕ ಸಿಡಿಸುತ್ತಾರೋ ಕಾದು ನೋಡಬೇಕು.









